ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೋ ಹಾಗೂ ಪಾಪ್ ಗಾಯಕಿ ಕೇಟಿ ಕೆರ್ರಿ (ಒಳಚಿತ್ರದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಫೋಟೊಗಳು)
ಚಿತ್ರಕೃಪೆ: X
ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೋ ಹಾಗೂ ಪಾಪ್ ಗಾಯಕಿ ಕೆಟಿ ಕೆರ್ರಿ ಅವರು, ಪರಸ್ಪರ ಚುಂಬಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರೊಂದಿಗೆ ಈ ಜೋಡಿ ಸಂಬಂಧದಲ್ಲಿರುವುದು ಖಾತ್ರಿಯಾಗಿದೆ ಎಂದು ಉಲ್ಲೇಖಿಸಿವೆ.
ಕ್ಯಾಲಿಫೋರ್ನಿಯಾದ ಸಾಂತ ಬಾರ್ಬರಾ ಪ್ರವಾಸದಲ್ಲಿರುವ ಟ್ರುಡೊ ಹಾಗೂ ಕೆರ್ರಿ, ಬೋಟ್ ಮೇಲೆ ನಿಂತು ಅದರ ಚುಂಬನದಲ್ಲಿ ತೊಡಗಿರುವುದು ಚಿತ್ರಗಳಲ್ಲಿದೆ. ಪ್ಯಾಂಟ್ ಮಾತ್ರ ಧರಿಸಿರುವ ಟ್ರೊಡೋ, ಕಪ್ಪು ಈಜುಡುಗೆಯಲ್ಲಿರುವ ಕೆರ್ರಿಯನ್ನು ಅಪ್ಪಿಕೊಂಡಿರುವುದು, ಪರಸ್ಪರ ಮುದ್ದಾಡುತ್ತಿರುವುದೂ ಚಿತ್ರಗಳಲ್ಲಿವೆ.
'ಕೆರ್ರಿ ಅವರು, ತಿಮಿಂಗಲ ವೀಕ್ಷಣೆಗಾಗಿನ ಪ್ರದೇಶದ ಕಡೆಗೆ ಬೋಟ್ ಅನ್ನು ಚಲಾಯಿಸಿದರು. ಅಲ್ಲಿ ಅವರು ಪರಸ್ಪರ ಆಲಂಗಿಸಿದರು. ಅಲ್ಲಿದ್ದ ಪುರುಷನ ತೋಳಿನ ಮೇಲಿರುವ ಟ್ಯಾಟೂ ನೋಡುವವರೆಗೆ ಕೆರ್ರಿ ಯಾರೊಂದಿಗೆ ಇದ್ದಾರೆ ಎಂಬುದು ಸ್ಪಷ್ಟವಾಗಿರಲಿಲ್ಲ. ಟ್ಯಾಟೂ ನೋಡುತ್ತಿದ್ದಂತೆ, ಅದು ಜಸ್ಟಿನ್ ಟ್ರುಡೋ ಎಂಬುದು ಮನವರಿಕೆಯಾಯಿತು' ಎಂಬುದಾಗಿ ವ್ಯಕ್ತಿಯೊಬ್ಬರು ತಿಳಿಸಿರುವುದಾಗಿ 'ಡೈಲಿ ಮೇಲ್' ವರದಿ ಮಾಡಿದೆ.
ಕೆನಡಾದ ಮಾಂಟ್ರಿಯಾಲ್‌ಗೆ ಇದೇ ವರ್ಷ ಜುಲೈನಲ್ಲಿ ಭೋಜನಕ್ಕೆ ಹೋಗಿದ್ದ ಈ ಜೋಡಿ, ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡಿತ್ತು.
ಹಾಲಿವುಡ್ ನಟ ರಸ್ಸೆಲ್ ಬ್ರಾಂಡ್ ಅವರಿಂದ 2012ರಲ್ಲಿ ದೂರವಾಗಿರುವ ಕೆರ್ರಿ, ಮತ್ತೊಬ್ಬ ನಟ ಒರ್ಲಾಂಡೊ ಬ್ಲೂಮ್ ಅವರಿಂದಲೂ ಇದೇ ವರ್ಷ ಜೂನ್‌ನಲ್ಲಿ ಬೇರೆಯಾಗಿದ್ದಾರೆ. ಒರ್ಲಾಂಡೊ ಹಾಗೂ ಕೆರ್ರಿ ದೂರವಾಗಿದ್ದರೂ, ಮಗಳಾದ ಡೈಸಿ ಡವ್ (5) ಅವರ ಸಹ ಪೋಷಕರಾಗಿ ಮುಂದುವರಿದಿದ್ದಾರೆ.
ಇತ್ತ ಟ್ರುಡೋ ಅವರು ಪತ್ನಿ ಸೋಫೀ ಜಾರ್ಝೈರ್ ಅವರೊಂದಿಗಿನ ದಾಂಪತ್ಯ ಜೀವನವನ್ನು 2023ರ ಆಗಸ್ಟ್‌ನಲ್ಲಿ ಮುರಿದುಕೊಂಡಿದ್ದಾರೆ. ಇವರಿಬ್ಬರಿಗೆ ಷೇವಿಯರ್ (17), ಎಲ್ಲಾ ಗ್ರೇಸ್ (16) ಮತ್ತು ಹಡ್ರೀಯನ್ (11) ಎಂಬ ಮಕ್ಕಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.