ADVERTISEMENT

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಲಾಗಿನ್ ಸಮಸ್ಯೆ: ಬಳಕೆದಾರರ ಪರದಾಟ

ರಾಯಿಟರ್ಸ್
Published 5 ಮಾರ್ಚ್ 2024, 16:03 IST
Last Updated 5 ಮಾರ್ಚ್ 2024, 16:03 IST
<div class="paragraphs"><p>ಫೇಸ್‌ಬುಕ್, ಇನ್‌ಸ್ಟಾಗ್ರಾಮ್</p></div>

ಫೇಸ್‌ಬುಕ್, ಇನ್‌ಸ್ಟಾಗ್ರಾಮ್

   

ರಾಯಿಟರ್ಸ್ ಚಿತ್ರ

ಬೆಂಗಳೂರು: ಮೆಟಾ ಒಡೆತನದ ಫೇಸ್‌ಬುಕ್, ಫೇಸ್‌ಬುಕ್ ಮೆಸೆಂಜರ್ ಹಾಗೂ ಇನ್‌ಸ್ಟಾಗ್ರಾಮ್ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಲಾಗಿನ್ ಮಾಡಲು ಸಾಧ್ಯವಾಗದೆ ಮಂಗಳವಾರ ಸಂಜೆ ತೀವ್ರ ಸಮಸ್ಯೆ ಎದುರಿಸಿದರು.

ADVERTISEMENT

ರಾತ್ರಿ ಸುಮಾರು 9ರ ಸುಮಾರಿಗೆ ಬಳಕೆದಾರರ ಫೇಸ್‌ಬುಕ್‌ ಖಾತೆಗಳು ಇದ್ದಕ್ಕಿದ್ದಂತೆ ಲಾಗೌಟ್ ಆದವು. ನಂತರ ಲಾಗಿನ್ ಆಗಲು ಸಾಧ್ಯವಾಗದೆ, ಬಳಕೆದಾರರು ಪರದಾಡಿದರು. ಪಾಸ್‌ವರ್ಡ್‌ ಸರಿಯಾಗಿಲ್ಲ ಎಂಬ ಸಂದೇಶ ಬರುತ್ತಲೇ ಇತ್ತು ಎಂದು ಬಳಕೆದಾರರು ತಾವು ಎದುರಿಸಿದ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ.

ಈ ಕುರಿತಂತೆ #facebookdown ಹಾಗೂ #instagramdown ಹ್ಯಾಷ್‌ಟ್ಯಾಗ್ ಟ್ರೆಂಡ್ ಆದವು. 

ಈವರೆಗೂ ಸುಮಾರು 3 ಲಕ್ಷ ಫೇಸ್‌ಬುಕ್ ಬಳಕೆದಾರರು ಮತ್ತು ಇನ್‌ಸ್ಟಾಗ್ರಾಂನ 10 ಸಾವಿರಕ್ಕೂ ಹೆಚ್ಚು ಬಳಕೆದಾರರು ತಾವು ಎದುರಿಸುತ್ತಿರುವ ಸಮಸ್ಯೆ ಕುರಿತು ವರದಿ ಮಾಡಿರುವುದಾಗಿ ಡೌನ್‌ಡಿಟೆಕ್ಟರ್‌ ಡಾಟ್ ಕಾಮ್ ವರದಿ ಮಾಡಿದೆ.

ಈ ಕುರಿತಂತೆ ಮೆಟಾ ಯಾವುದೇ ಪ್ರತಿಕ್ರಿಯೆಯನ್ನು ಈವರೆಗೂ ನೀಡಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.