ADVERTISEMENT

ಟ್ವಿಟರ್‌ನಲ್ಲಿ ನರೇಂದ್ರ ಮೋದಿ ಗೋಬ್ಯಾಕ್- ವೆಲ್‌ಕಮ್ ಸಂಘರ್ಷ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 6:20 IST
Last Updated 11 ಅಕ್ಟೋಬರ್ 2019, 6:20 IST
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಜತೆ ನರೇಂದ್ರ ಮೋದಿ  (ಸಂಗ್ರಹ  ಚಿತ್ರ)
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಜತೆ ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ಚೆನ್ನೈ:ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಎರಡು ದಿನಗಳ ಭೇಟಿಗಾಗಿ ಶುಕ್ರವಾರ ಭಾರತಕ್ಕೆ ಬರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಷಿ ಅವರನ್ನು ಸ್ವಾಗತಿಸಲು ತಮಿಳುನಾಡಿನ ಕಡಲತಡಿಯ ಪ್ರವಾಸಿತಾಣ ಮಾಮಲ್ಲಪುರಂ ಸಜ್ಜುಗೊಂಡಿದೆ.ನರೇಂದ್ರ ಮೋದಿಯವರು ಈಗ ಚೆನ್ನೈ ತಲುಪಿದ್ದಾರೆ.

ಷಿ ಜಿನ್‌ಪಿಂಗ್ ಅವರು ಶುಕ್ರವಾರ ಬೆಳಗ್ಗೆ ಬೀಜಿಂಗ್‌ನಿಂದ ಚೆನ್ನೈಗೆ ಹೊರಟಿದ್ದು ಮಧ್ಯಾಹ್ನ 2.10ಕ್ಕೆ ತಲುಪಲಿದ್ದಾರೆಎಂದು ಎಎನ್ಐ ಸುದ್ದಿಸಂಸ್ಥೆ ಟ್ವೀಟಿಸಿದೆ.

ತಮಿಳುನಾಡಿಗೆ ಮೋದಿ ಭೇಟಿ ನೀಡುತ್ತಿರುವ ಹೊತ್ತಲ್ಲಿ ಬಿಜೆಪಿ ಅಭಿಮಾನಿಗಳು ಮತ್ತು ವಿರೋಧಿಗಳ ನಡುವೆ ಟ್ವಿಟರ್‌ ಸಮರವೇರ್ಪಟ್ಟಿದೆ.

ADVERTISEMENT

ಮೋದಿ ಭೇಟಿ ವಿರೋಧಿಸಿ ಟ್ವಿಟರ್‌ನಲ್ಲಿ #GoBackModi ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.

2018ರ ಏಪ್ರಿಲ್‌ 12ರಂದು ಮೋದಿ ಅವರು ಚೆನ್ನೈಗೆ ಭೇಟಿ ಕೊಟ್ಟಾಗ ‘ಗೋಬ್ಯಾಕ್‌ ಮೋದಿ’ ಹ್ಯಾಶ್‌ಟ್ಯಾಗ್‌ ಮೊದಲ ಬಾರಿಗೆ ಜೋರು ಸದ್ದು ಮಾಡಿತ್ತು. ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಕೇಂದ್ರದ ನಿಷ್ಕ್ರಿಯತೆಯನ್ನು ವಿರೋಧಿಸಿ ಈ ಹ್ಯಾಶ್‌ಟ್ಯಾಗ್ಆರಂಭಿಸಲಾಗಿತ್ತು. ಇದಕ್ಕೆ ಭಾರಿ ಬೆಂಬಲವೂ ವ್ಯಕ್ತವಾಗಿತ್ತು.

ಇದರ ಜತೆಗೆ #TNWelcomesModi ಎಂಬ ಹ್ಯಾಶ್‌ಟ್ಯಾಗ್ ಮೂಲಕ ಕೆಲವು ಟ್ವೀಟಿಗರು ಮೋದಿಗೆ ಸ್ವಾಗತ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.