
ನಿರ್ಮಾಣ ಹಂತದ ಕಟ್ಟಡಗಳ ಮೇಲೆ ಕಾಣಿಸಿಕೊಳ್ಳುತ್ತಿದ್ದ ಮಹಿಳೆಯ ಫೋಟೊ
ಎಕ್ಸ್ ಚಿತ್ರ
ದೊಡ್ಡ ದೊಡ್ಡ ನಿರ್ಮಾಣ ಹಂತದ ಕಟ್ಟಡಗಳಲ್ಲಿ, ಅಂಗಡಿ ಸಾಲುಗಳಲ್ಲಿ ಹಾಗೂ ಹೊಲ ಗದ್ದೆಗಳಲ್ಲಿ ಬಟ್ಟಲು ಕಣ್ಣಿನ, ಅಗಲವಾದ ಕುಂಕುಮ ಇಟ್ಟ ಮಹಿಳೆಯ ಫೋಟೊವೊಂದು ದೃಷ್ಟಿ ಗೊಂಬೆಯಂತೆ ನೇತಾಡುತ್ತಿರುವುದನ್ನು ನೋಡಿಯೇ ಇರುತ್ತೇವೆ. ಆಕೆ ಯಾರು ಎಂಬ ಪ್ರಶ್ನೆ ನಿಮಗೂ ಕಾಡಿರುತ್ತದೆ. ಆದಕ್ಕೆ ಉತ್ತರ ಸಿಕ್ಕಿದೆ.
ಕೋವಿಡ್ ನಂತರದ ದಿನಗಳಲ್ಲಿ ಈ ಫೋಟೊ ಎಲ್ಲೆಡೆ ಕಾಣಿಸಿಕೊಳ್ಳಲಾರಂಭಿಸಿತು. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿಯೂ ಆಕೆಯ ಫೋಟೊ ಕಟ್ಟಡಗಳ ಮೇಲೆ ವರ್ಷಗಟ್ಟಲೇ ರಾರಾಜಿಸಿದೆ. ಅವರ ಫೋಟೊ ದೃಷ್ಟಿ ಗೊಂಬೆಯಾಗಿಯೇ ಹೆಚ್ಚು ಜನಪ್ರಿಯ. ಆದರೆ ಇದೀಗ ಫೋಟೊದಲ್ಲಿರುವವರು ‘ನಿಹಾರಿಕಾ ರಾವ್’ ಎಂದು ಪತ್ತೆ ಮಾಡಲಾಗಿದೆ.
ಮಹಾರಾಷ್ಟ್ರದ ಮಹಿಳೆಯೊಬ್ಬರು, ’ಬೆಂಗಳೂರಿನ ಹೊರಗೆ ಹಾಗೂ ಕರ್ನಾಟಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಲ್ಲಿ ಈ ಮಹಿಳೆಯ ಪೋಟೊವನ್ನು ನಾನು ನೋಡಿದ್ದೇನೆ. ಕುತೂಹಲದಿಂದ ಆಕೆ ಯಾರೆಂದು ತಿಳಿಯಲು ಗೂಗಲ್ ಲೆನ್ಸ್ ಬಳಸಿದೆ. ಆದರೆ ಯಾವುದೇ ವಿವರಗಳು ಸಿಗಲಿಲ್ಲ. ಅವಳು ಯಾರು?’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.
ಜನವರಿ 5 ರಂದು ಯುಎನ್‌ಸಿ ನೆಟಿಜನ್ ಹಂಚಿಕೊಂಡ ಈ ಪೋಸ್ಟ್ 3.5 ಮಿಲಿಯನ್ ವೀಕ್ಷಣೆಗಳೊಂದಿಗೆ ವ್ಯಾಪಕ ಗಮನ ಸೆಳೆಯಿತು. ಇದೇ ರೀತಿಯ ಕುತೂಹಲವಿದ್ದವರು ತಮಗೆ ತಿಳಿದಿದ್ದ ಮಾಹಿತಿಯನ್ನು ಹಂಚಿಕೊಂಡಿದ್ದರು. ಬಳಕೆದಾರರೊಬ್ಬರು ’ಇದು ನಿರ್ಮಾಣಕ್ಕಾಗಿ ನಜರ್‌ಬಟ್ಟು‘ (ನಕಾರಾತ್ಮಕ ಶಕ್ತಿಗಳನ್ನು ದೂರವಿಡಲು ದೃಷ್ಟಿ ಗೊಂಬೆ ಎಂದು ಹೇಳಿದರು) ಎಂದು ಬರೆದಿದ್ದಾರೆ.
ಇನ್ನೊಬ್ಬರು ‘ಈ ಪೋಟೊವನ್ನು ನಿರ್ಮಾಣ ಸ್ಥಳಗಳಲ್ಲಿ ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸಲು ನೇತುಹಾಕಲಾಗಿದೆ ಎಂದು ಹೇಳಿದರು. ಮೂರನೆಯವರು, ಜನರು ಈ ಫೋಟೊವನ್ನು ಬಳಸುತ್ತಿರುವುದು ನಿಜಕ್ಕೂ ವಿಚಿತ್ರ. ಕೆಂಪು ನಾಲಿಗೆಯನ್ನು ಹೊಂದಿರುವ ದೆವ್ವದ ಆಕಾರದ ಮುಖವಾಗಿದೆ. ಬಹುಶಃ ಮೀಮ್ ಟ್ರೆಂಡ್ ಆಗಿರಬಹುದು’ ಎಂದು ಬರೆದಿದ್ದಾರೆ.
ಬಳಿಕ ಆ ಮಹಿಳೆ ಯಾರೆಂದು ಪತ್ತೆಹಚ್ಚಲು ವಿವಿಧ ರೀತಿಯಲ್ಲಿ ಹುಡುಕಾಟ ನಡೆದಿತ್ತು. ಆಗ ಆಕೆ ಕರ್ನಾಟಕ ಮೂಲಕದ ಯೂಟ್ಯೂಬರ್ ‘ನಿಹಾರಿಕಾ ರಾವ್’ ಎಂದು ತಿಳಿದಿದೆ.
2023ರಲ್ಲಿ ನಿಹಾರಿಕಾ ರಾವ್ ಅವರ ವಿಡಿಯೊ ಕ್ಲಿಪ್‌ವೊಂದು ವೈರಲ್ ಆಗಿತ್ತು. ಆದರಿಂದ ಈ ಪೋಟೊ ಸೃಷ್ಟಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.