ಶರ್ಮಿಷ್ಠ ಪನೋಲಿ
ಎಕ್ಸ್‌ಖಾತೆ: X/@rsbisht
ಗುರುಗ್ರಾಮ: ಆಪರೇಷನ್ ಸಿಂಧೂರದ ಬಗ್ಗೆ ಬಾಲಿವುಡ್ ನಟರು ಮೌನವಾಗಿದ್ದಾರೆ ಎಂದು ಹೇಳುವ ಕೋಮುವಾದಿ ಹೇಳಿಕೆಗಳ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪದಡಿ ಇನ್‌ಫ್ಲುಯೆನ್ಸರ್‌ರೊಬ್ಬರನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದಾರೆ.
ಪುಣೆಯ ಕಾನೂನು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಶರ್ಮಿಷ್ಠ ಪನೋಲಿಯನ್ನು ಪೊಲೀಸರು ಗುರುಗ್ರಾಮದಲ್ಲಿ ಬಂಧಿಸಿದ್ದಾರೆ.
ಆಪರೇಷನ್ ಸಿಂಧೂರದ ಬಗ್ಗೆ ಬಾಲಿವುಡ್ ನಟರು ಮೌನವಾಗಿದ್ದಾರೆ ಎಂದು ಆರೋಪಿಸಿ ಕೋಮುವಾದಿ ಹೇಳಿಕೆಗಳ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ವಿಡಿಯೊವನ್ನು ಅಳಿಸಿ ಹಾಕಿ, ಆಕೆ ಕ್ಷಮೆಯಾಚಿಸಿದ್ದರು ಎಂದು ತಿಳಿದು ಬಂದಿದೆ.
ಆದರೆ ಅಷ್ಟರ ವೇಳೆಗೆ ಆಕೆಯ ವಿರುದ್ಧ ಕೋಲ್ಕತ್ತದಲ್ಲಿ ಪ್ರಕರಣ ದಾಖಲಾಗಿತ್ತು. ಆಕೆ ಹಾಗೂ ಆಕೆಯ ಕುಟುಂಬಕ್ಕೆ ನೋಟಿಸ್ ಬಂದಿದ್ದವು. ನೋಟಿಸ್‌ಗೆ ಉತ್ತರಿಸದೆ, ಕುಟುಂಬದ ಜತೆ ಪರಾರಿಯಾಗಿದ್ದ ಶರ್ಮಿಷ್ಠರ ಬಂಧನಕ್ಕೆ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.