ADVERTISEMENT

ಟ್ವಿಟರ್‌ನಲ್ಲಿ ‘ಪುನೀತ್ ಚತುರ್ಥಿ‘ ಟ್ರೆಂಡ್‌: ಅಭಿಮಾನಿಗಳಿಂದ ಅಪ್ಪು ನೆನಪು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2022, 10:41 IST
Last Updated 30 ಆಗಸ್ಟ್ 2022, 10:41 IST
ಪುನೀತ್‌
ಪುನೀತ್‌   

ರಾಜ್ಯದಲ್ಲಿ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಪುನೀತ್‌ ಇಲ್ಲದ ಈ ಹಬ್ಬಕ್ಕೆ ‘ಪವರ್‌‘ ಅಭಿಮಾನಿಗಳು ಮಂಗಳವಾರದಿಂದ ‘ಪುನೀತ್ ಚತುರ್ಥಿ‘ ಮಾಡುತ್ತಿದ್ದಾರೆ.

ಹೌದು, ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಮಧ್ಯಾಹ್ನದಿಂದ‘ಪುನೀತ್‌ ಚತುರ್ಥಿ‘ ಮಾಡಲಾಗುತ್ತಿದೆ. ಸದ್ಯ ಟ್ವಿಟರ್‌ನಲ್ಲಿ#Puneeth_Chaturthi,#ಪುನೀತ್_ಚತುರ್ಥಿ ಟ್ರೆಂಡ್‌ ಆಗಿವೆ.

ಗಣೇಶ ಚತುರ್ಥಿಯನ್ನು ಪುನೀತ್ ರಾಜ್‌ಕುಮಾರ್ ಅವರ ನೆನಪಿನಲ್ಲಿ ಸಂಭ್ರಮಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಟ್ವಿಟರ್‌ನಲ್ಲಿ ಅಭಿಮಾನಿಗಳು,ಪುನೀತ್ ಚತುರ್ಥಿ ಮಾಡುತ್ತಿದ್ದು, ಇತರರಿಗೂ ಈ ಅಭಿಯಾನ ಮಾಡುವಂತೆ ಕರೆ ನೀಡಿದ್ದಾರೆ.

ADVERTISEMENT

ಈಪುನೀತ್ ಚತುರ್ಥಿಯಲ್ಲಿ ಲಕ್ಷಾಂತರ ಅಪ್ಪು ಅಭಿಮಾನಿಗಳು ಭಾಗವಹಿಸುತ್ತಿದ್ದಾರೆ. ಗಣೇಶನ ಜೊತೆ ಪುನೀತ್ ರಾಜ್‌ಕುಮಾರ್ ಇರುವ ಪೋಟೊಗಳನ್ನು ಹಂಚಿಕೊಂಡು, ಗಣೇಶ ಹಬ್ಬದಂದು ಪುನೀತ್‌ ಅವರನ್ನು ನೆನಪಿಸಿಕೊಳ್ಳೋಣ ಎಂದುಟ್ವೀಟ್‌ ಮಾಡುತ್ತಿದ್ದಾರೆ.

ಪುನೀತ್‌ ಚತುರ್ಥಿಯ ಕೆಲವು ಟ್ವೀಟ್‌ಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.