ADVERTISEMENT

Signal App: ಇರಾನ್ ಸಿಗ್ನಲ್ ಆ್ಯಪ್ ಬಳಕೆದಾರರ ಸಂಪರ್ಕ ಕಡಿತ

ಏಜೆನ್ಸೀಸ್
Published 27 ಜನವರಿ 2021, 2:13 IST
Last Updated 27 ಜನವರಿ 2021, 2:13 IST
ಸಿಗ್ನಲ್ ಆ್ಯಪ್
ಸಿಗ್ನಲ್ ಆ್ಯಪ್   

ಟೆಹ್ರಾನ್: ಇರಾನ್‌ನ ಬಹುತೇಕ ಬಳಕೆದಾರರಿಗೆ ಸಿಗ್ನಲ್ ಆ್ಯಪ್ ಸಂಪರ್ಕ ಕಡಿತವಾಗಿದೆ. ಈ ಕುರಿತು ದಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದ್ದು, ಸೋಮವಾರದಿಂದ ಸಿಗ್ನಲ್ ಆ್ಯಪ್ ಬಳಕೆದಾರರಿಗೆ ಸಂಪರ್ಕ ಲಭ್ಯವಾಗುತ್ತಿಲ್ಲ ಎಂದಿದೆ. ಇರಾನ್ ರಾಜಧಾನಿ ಟೆಹ್ರಾನ್ ಸಹಿತ ಇತರ ಮೂರು ಪ್ರಮುಖ ನಗರಗಳಲ್ಲಿ ಜನರು ಸಂಪರ್ಕ ಕಡಿದುಕೊಂಡಿದ್ದಾರೆ. ಸಿಗ್ನಲ್ ಆ್ಯಪ್ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎನ್ನಲಾಗಿದೆ.

ಇರಾನ್‌ನಲ್ಲಿ ಎಷ್ಟು ಜನರು ಸಿಗ್ನಲ್ ಆ್ಯಪ್ ಬಳಸುತ್ತಾರೆ ಎಂದು ಖಚಿತವಾಗಿಲ್ಲ. ಆದರೆ ವಾಟ್ಸ್ ಆ್ಯಪ್ ಅಪ್‌ಡೇಟ್ ವಿವಾದದ ಬಳಿಕ ಸಿಗ್ನಲ್ ಆ್ಯಪ್ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಸಿಗ್ನಲ್ ಆ್ಯಪ್ ನಿರ್ಬಂ‌ಧಿಸಿರುವ ಕುರಿತು ಸರ್ಕಾರಿ ಮಾಧ್ಯಮ ಯಾವುದೇ ರೀತಿಯ ವರದಿ ಮಾಡಿಲ್ಲ.

ಇರಾನ್ ಸರ್ಕಾರ ಈ ಹಿಂದೆಯೂ ಹಲವು ಬಾರಿ ವಿವಿಧ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ತಾಣಗಳನ್ನು ನಿರ್ಬಂ‌ಧಿಸಿತ್ತು. ಯೂಟ್ಯೂಬ್, ಫೇಸ್‌ಬುಕ್, ಟ್ವಿಟರ್ ಮತ್ತು ಟೆಲಿಗ್ರಾಂ ಅನ್ನು ಕೂಡ ಇರಾನ್ ಸರ್ಕಾರ ನಿಷೇಧಿಸಿತ್ತು.

ADVERTISEMENT

ಇರಾನ್‌ನಲ್ಲಿ ಬಹುತೇಕ ಯುವಕರು ವಿಪಿಎನ್ ಮತ್ತು ಪ್ರಾಕ್ಸಿ ಬಳಸಿಕೊಂಡು ವಿವಿಧ ನಿರ್ಬಂಧಿತ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ. ಇರಾನ್‌ನಲ್ಲಿ ಸಾಮಾಜಿಕ ಮಾಧ್ಯಮಗಳ ಬಗ್ಗೆ ಅಲ್ಲಿನ ಸರ್ಕಾರ ಕಠಿಣ ನಿಯಮಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.