ADVERTISEMENT

ಬಂಧನವಾದರೂ ಸಂತ್ರಸ್ತ ಬಾಲಕಿಯ ಫೋಟೊಗಳನ್ನು Instaದಿಂದ ಡಿಲೀಟ್ ಮಾಡದ ಸೋನು ಗೌಡ

ಇನ್‌ಸ್ಟಾಗ್ರಾಂನಿಂದ ಫೋಟೊಗಳನ್ನು ಡಿಲೀಟ್ ಮಾಡದ ರೀಲ್ಸ್ ನಟಿ ಸೋನು ಗೌಡ: ಫೋಟೊಗಳನ್ನು ಬಳಸಿರುವುದಕ್ಕೂ ದೂರುದಾರರ ಆಕ್ಷೇಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮಾರ್ಚ್ 2024, 7:45 IST
Last Updated 23 ಮಾರ್ಚ್ 2024, 7:45 IST
<div class="paragraphs"><p>ನಟಿ ಸೋನು ಗೌಡ</p></div>

ನಟಿ ಸೋನು ಗೌಡ

   

ಬೆಂಗಳೂರು: ಬಾಲಕಿ ಒಬ್ಬರನ್ನು ಅಕ್ರಮವಾಗಿ ದತ್ತು ಪಡೆದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿಬಿಟ್ಟ ಆರೋಪದಡಿ ರೀಲ್ಸ್ ಸ್ಟಾರ್ ಹಾಗೂ ಕಿರು ತೆರೆ ನಟಿ ಸೋನು ಶ್ರೀನಿವಾಸ್ ಗೌಡ ಅಲಿಯಾಸ್ ಶಾಂಭವಿ (29) ಅವರನ್ನು ನಿನ್ನೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಲಕಿಯನ್ನು ಅಕ್ರಮ ದತ್ತು ಪಡೆದಿದ್ದಲ್ಲದೇ ಸಂತ್ರಸ್ತ ಬಾಲಕಿ ಜೊತೆ ರೀಲ್ಸ್ ವಿಡಿಯೊಗಳನ್ನು ಮಾಡಿ ಅವುಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿರುವುದು ಅವರ ಮೇಲೆ ಇರುವ ಗಂಭೀರ ಆರೋಪ. ಆದರೆ, ಸೋನು ಗೌಡ ಬಂಧನವಾದರೂ ಇನ್ನೂ ಅವರು ಆ ಫೋಟೊಗಳನ್ನು ಅಳಿಸಿ ಹಾಕಿಲ್ಲ.

ADVERTISEMENT

ಮಕ್ಕಳ ದತ್ತು ನಿಯಮಾವಳಿಗಳ ಪ್ರಕಾರ ಮಕ್ಕಳನ್ನು ಬಳಸಿಕೊಂಡು ವಿಡಿಯೊ–ಫೋಟೊ ಮಾಡಿ ಅಂತಹವುಗಳನ್ನು ಡಿಜಿಟಲ್ ವೇದಿಕೆಗಳಲ್ಲಿ ಹಂಚಿಕೊಳ್ಳುವಂತಿಲ್ಲ.

ಬಂಧನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸೋನು ಗೌಡ, ‘ಎಲ್ಲವೂ ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ. ಯಾವುದೇ ಸಮಸ್ಯೆ ಇಲ್ಲ’ ಎಂದು ಹೇಳಿದ್ದಾರೆ.

ನ್ಯಾಯಾಲಯದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯ ನೀಡಿದ ಅವರು, ‘ಒಂದು ಹುಡುಗಿಯನ್ನು ರಕ್ಷಣೆ ಮಾಡಲು ಕರೆದುಕೊಂಡು ಬಂದಿದ್ದೆ. ಆ ಹುಡುಗಿ ಈಗ ಸುರಕ್ಷಿತವಾಗಿ ಇದ್ದಾಳೆ’ ಎಂದು ಹೇಳಿದ್ದಾರೆ.

ಆರೋಪ ಏನು?

‘ರಾಯಚೂರು ದಂಪತಿಯ ಎಂಟು ವರ್ಷದ ಮಗಳನ್ನು ಅಕ್ರಮವಾಗಿ ದತ್ತು ಪಡೆದಿದ್ದ ಸೋನು, ತನ್ನ ಮನೆಯಲ್ಲಿ ಇರಿಸಿಕೊಂಡಿದ್ದರು. ಬಾಲಕಿ ಜೊತೆ ರೀಲ್ಸ್ ವಿಡಿಯೊ ಸಹ ಮಾಡುತ್ತಿದ್ದರು. ಕಾನೂನುಬದ್ಧವಾಗಿ ದತ್ತು ಪಡೆಯುತ್ತಿರುವುದಾಗಿ ಹೇಳಿಕೊಂಡು, ಬಾಲಕಿಯ ಜೊತೆ ವಿಡಿಯೊ ಮಾಡಿ ಯುಟ್ಯೂಬ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಅಪ್‌ಲೋಡ್ ಮಾಡಿದ್ದರು’ ಎಂಬ ಅವರ ಮೇಲೆ ಆರೋಪ ಕೇಳಿ ಬಂದಿದೆ. ಈ ಕುರಿತು ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.