ADVERTISEMENT

ಟ್ವಿಟರ್‌ನಲ್ಲಿ ಟ್ರೆಂಡ್‌ ಆದ #tonorrow! ಮೋದಿ ಪೋಸ್ಟ್‌ನ ತಪ್ಪು ವೈರಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2020, 4:16 IST
Last Updated 26 ಜುಲೈ 2020, 4:16 IST
ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಮಾಡಿದ್ದ ಟ್ವೀಟ್‌ ಮತ್ತು ನಂತರ ಬಿಜೆಪಿ ನಾಯಕರು ಮಾಡಿದ್ದ ಟ್ವೀಟ್‌ಗಳು
ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಮಾಡಿದ್ದ ಟ್ವೀಟ್‌ ಮತ್ತು ನಂತರ ಬಿಜೆಪಿ ನಾಯಕರು ಮಾಡಿದ್ದ ಟ್ವೀಟ್‌ಗಳು    

ದೆಹಲಿ: ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಭಾನುವಾರ ಬೆಳಗ್ಗೆ #tonorrow ಎಂಬ ಹ್ಯಾಶ್‌ ಟ್ಯಾಗ್‌ ದಿಢೀರ್‌ ಟ್ರೆಂಡ್‌ ಆಗಿದೆ.

ಭಾನುವಾರ ಬೆಳಗ್ಗೆ 11 ಗಂಟೆಗೆ ರೇಡಿಯೊ ಕಾರ್ಯಕ್ರಮ ‘ಮನ್‌ ಕೀ ಬಾತ್‌’ ಕಾರ್ಯಕ್ರಮದಲ್ಲಿ ಮಾತನಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ 9.32ರಲ್ಲಿ ಟ್ವೀಟ್‌ ಮಾಡಿದ್ದರು.

‘Do tune in tonorrow, 26th july at 11 AM. #MannkiBatt’ ಎಂದು ಪ್ರಧಾನಿ ಟ್ವಿಟರ್‌ ಖಾತೆ ಮೂಲಕ ಟ್ವೀಟ್‌ ಮಾಡಲಾಗಿತ್ತು. ಇದರಲ್ಲಿ Tomorrow (ನಾಳೆ) tonorrow ಎಂದು ತಪ್ಪಾಗಿ ಬರೆಯಲಾಗಿತ್ತು. ಇದನ್ನೇ ಹಲವು ಬಿಜೆಪಿ ನಾಯಕರು ಯಥಾವತ್‌ ಕಾಪಿ ಮಾಡಿ ತಮ್ಮ ಟ್ವಿಟರ್‌ ಖಾತೆಯಲ್ಲೂ ಪೋಸ್ಟ್‌ ಮಾಡಿಕೊಂಡಿದ್ದಾರೆ. ಅಲ್ಲಿಯೂ ತಪ್ಪು ಹಾಗೆಯೇ ಉಳಿದುಕೊಂಡಿದೆ.

ADVERTISEMENT

ಪೋಸ್ಟ್‌ನಲ್ಲಿ ಪ್ರಮಾದವಾಗಿದೆ ಎಂದು ತಿಳಿದ ಕೂಡಲೇ ಪ್ರಧಾನಿ ಮೋದಿ ಖಾತೆಯಿಂದ ಅದನ್ನು ಡಿಲಿಟ್‌ ಮಾಡಿ, ರಾತ್ರಿ 9.52ರಲ್ಲಿ ಹೊಸದಾಗಿ ಪೊಸ್ಟ್‌ ಮಾಡಲಾಗಿದೆ.

ಅದರೆ, ತಪ್ಪಿದ್ದ ಪೋಸ್ಟ್‌ನ ಸ್ಕ್ರೀನ್‌ಶಾಟ್‌ ಅನ್ನು ಹಲವರು ಅದಾಗಲೇ ತೆಗೆದಿಟ್ಟುಕೊಂಡಿದ್ದು, ಅದನ್ನು ಭಾನುವಾರ ಬೆಳಗ್ಗೆ ಹಂಚಿಕೊಂಡಿದ್ದಾರೆ. ಹೀಗಾಗಿ #tonorrow ಎಂಬ ಹ್ಯಾಶ್‌ ಟ್ಯಾಗ್‌ ದಿಢೀರ್‌ ಟ್ರೆಂಡ್‌ ಆಗಿದೆ.

ಮೋದಿ ಅವರ ಟ್ವೀಟ್‌ನಲ್ಲಿ ಆದ ತಪ್ಪನ್ನು ಹಲವರು ಹಲವು ರೀತಿಯಲ್ಲಿ ಗೇಲಿ ಮಾಡಿದ್ದಾರೆ.

ಮೊದಲ ಟ್ವೀಟ್‌ ಡಿಲಿಟ್‌ ಮಾಡಿದನಂತರ ಮಾಡಲಾದ ಟ್ವೀಟ್‌

ಚರ್ಚೆಗಳನ್ನು ನೋಡಲು ಲಿಂಕ್‌ ಕ್ಲಿಕ್‌ ಮಾಡಿ: #tonorrow

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.