ADVERTISEMENT

ಟ್ವಿಟರ್‌ನ ಎಕ್ಸ್‌ಪ್ಲೋರ್‌ ಪುಟದಲ್ಲಿ ‘ಕ್ರಿಕೆಟ್‌’ ಎಂಬ ಹೊಸ ಟ್ಯಾಬ್ ನೋಡಿದ್ರಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2022, 14:23 IST
Last Updated 29 ಮಾರ್ಚ್ 2022, 14:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದಿನನಿತ್ಯ ಐಪಿಎಲ್ ಟೂರ್ನಿ (ಕ್ರಿಕೆಟ್‌) ಕ್ಷಣ ಕ್ಷಣದ ಅಪ್‌ಡೇಟ್ಸ್‌ ಕುರಿತು ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟ್ವಿಟರ್‌ ತನ್ನ ಎಕ್ಸ್‌ಪ್ಲೋರ್ ಪುಟದಲ್ಲಿ ‘ಕ್ರಿಕೆಟ್‌’ ಎಂಬ ಹೊಸ ಟ್ಯಾಬ್ ಅನ್ನು ಪರಿಚಯಿಸಿದೆ.

ಭಾರತದಲ್ಲಿ ಆಂಡ್ರಾಯ್ಡ್ ಫೋನ್‌ಗಳಲ್ಲಿ ಟ್ವಿಟರ್‌ ಬಳಸುವ ಕೆಲವರಿಗೆ ಈ ಸೇವೆ ದೊರೆಯಲಿದೆ ಎಂದು ಕಂಪನಿ ತಿಳಿಸಿದೆ.

‘ಕ್ರಿಕೆಟ್‌’ ಟ್ಯಾಬ್‌ನಲ್ಲಿ #CricketTwitter ಕ್ರಿಕೆಟ್‌ಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು, ಸುದ್ದಿಗಳು, ಲೈವ್ ಸ್ಕೋರ್‌ಕಾರ್ಡ್‌, ಚರ್ಚೆಗಳು ಇತರೆ ಮಾಹಿತಿ ಲಭ್ಯವಾಗಲಿದೆ.

ADVERTISEMENT

ಸ್ಟಾರ್ ಸ್ಪೋರ್ಟ್ಸ್, ಕ್ರಿಕ್‌ಬಝ್‌, ಬೊರಿಯಾ ಮಜುಂದಾರ್‌ ಸಹಯೋಗದೊಂದಿಗೆ ಕ್ರಿಕೆಟ್‌ಗೆ ಸಂಬಂಧಿಸಿದ ಹೊಸ ವಿಷಯಗಳನ್ನು ಒಂದೇ ಟ್ಯಾಬ್‌ನಲ್ಲಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಕಂಪನಿ ವಿವರಿಸಿದೆ.

ಕ್ರಿಕೆಟ್‌ ಅಭಿಮಾನಿಗಳು ಇಂಗ್ಲಿಷ್, ತಮಿಳು, ಕನ್ನಡ, ತೆಲುಗು ಸೇರಿದಂತೆ ಆಯಾ ಸ್ಥಳೀಯ ಭಾಷೆಗಳಲ್ಲಿ ತಮ್ಮ ನೆಚ್ಚಿನ ತಂಡದ ಪರ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡುವ ಮೂಲಕ ಬೆಂಬಲ ಸೂಚಿಸಬಹುದಾಗಿದೆ.

2021ರ ಜನವರಿಯಿಂದ 2022ರ ಜನವರಿವರೆಗೆ ಟ್ವಿಟರ್‌ನಲ್ಲಿ 4.4 ಮಿಲಿಯನ್ (44 ಲಕ್ಷ) ಭಾರತೀಯರು ಕ್ರಿಕೆಟ್‌ಗೆ ಸಂಬಂಧಿಸಿದಂತೆ 96.2 ಮಿಲಿಯನ್ (9.62 ಕೋಟಿ) ಟ್ವೀಟ್‍ಗಳನ್ನು ಹಂಚಿಕೊಂಡಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.