ADVERTISEMENT

ಕೋವಿಡ್‌: ಕೇಂದ್ರ ಸರ್ಕಾರವನ್ನು ಟೀಕಿಸಿ ಟ್ವೀಟ್‌, ಅಳಿಸಿ ಹಾಕಿದ ಟ್ವಿಟರ್‌!

ಅಜಿತ್ ಅತ್ರಾಡಿ
Published 25 ಏಪ್ರಿಲ್ 2021, 3:49 IST
Last Updated 25 ಏಪ್ರಿಲ್ 2021, 3:49 IST
ದೆಹಲಿಯಲ್ಲಿ ಕೋವಿಡ್‌–19 ಪೀಡಿತರೊಬ್ಬರನ್ನು ಆರೋಗ್ಯ ಸಿಬ್ಬಂದಿ ಕರೆದೊಯ್ಯುತ್ತಿರುವುದು
ದೆಹಲಿಯಲ್ಲಿ ಕೋವಿಡ್‌–19 ಪೀಡಿತರೊಬ್ಬರನ್ನು ಆರೋಗ್ಯ ಸಿಬ್ಬಂದಿ ಕರೆದೊಯ್ಯುತ್ತಿರುವುದು   

ನವದೆಹಲಿ: ದೇಶದಲ್ಲಿ ಕೋವಿಡ್‌–19 ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಟೀಕಿಸಿ ಮಾಡಲಾಗಿದ್ದ ಸುಮಾರು 50 ಟ್ವೀಟ್‌ಗಳನ್ನು ಶನಿವಾರ ಟ್ವಿಟರ್‌ ತೆಗೆದು ಹಾಕಿದೆ.

ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ, ಕಾಂಗ್ರೆಸ್‌ ಸಂಸದ ರೇವಂತ್‌ ರೆಡ್ಡಿ ಹಾಗೂ ಪಶ್ಚಿಮ ಬಂಗಾಳದ ಸಚಿವ ಮಲಯ್‌ ಘಟಕ್‌ ಸೇರಿದಂತೆ ಹಲವು ಜನರ ಟ್ವೀಟ್‌ಗಳನ್ನು ತೆಗೆದು ಹಾಕಲಾಗಿದೆ. ಬಹುತೇಕ ಟ್ವೀಟ್‌ಗಳಲ್ಲಿ ಎನ್‌ಡಿಎ ಸರ್ಕಾರದ ಕ್ರಮಗಳನ್ನು ಟೀಕಿಸಲಾಗಿತ್ತು.

ಭಾರತದಲ್ಲಿ ಕೋವಿಡ್‌–19 ಹೆಚ್ಚಳ ಮತ್ತು ಕುಂಭ ಮೇಳದ ಕುರಿತು ಟ್ವೀಟ್‌ಗಳಲ್ಲಿ ಪ್ರಸ್ತಾಪಿಸಲಾಗಿತ್ತು. ಕೇಂದ್ರ ಸರ್ಕಾರದ ಮನವಿ ಮೇರೆಗೆ ಸಾಮಾಜಿಕ ಮಾಧ್ಯಮವು ಟ್ವೀಟ್‌ಗಳನ್ನು ಅಳಿಸಿ ಹಾಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ADVERTISEMENT

ದೆಹಲಿಯಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸಲಾದ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಕಟಗೊಂಡಿದ್ದ ಟ್ವೀಟ್‌ಗಳನ್ನು ತೆಗೆಯುವ ಕುರಿತು ಟ್ವಿಟರ್‌, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಡುವೆ ಜಟಾಪಟಿ ನಡೆದಿತ್ತು. ಸರ್ಕಾರದ ವಿರುದ್ಧ ಮಾಡಲಾದ ಟ್ವೀಟ್‌ಗಳನ್ನು ತೆಗೆಯಲು ನಿರಾಕರಿಸಿದ ಟ್ವಿಟರ್, ಅಂತಿಮವಾಗಿ ಎಲ್ಲ ಟ್ವೀಟ್‌ಗಳನ್ನು ತೆಗೆದು ಹಾಕಿತ್ತು.

ಭಾರತದ ಕಾನೂನು ಪಾಲಿಸಲು ವಿಫಲವಾದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರವು ಟ್ವಿಟರ್‌ಗೆ ಎಚ್ಚರಿಕೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.