ADVERTISEMENT

ಆಂಡ್ರಾಯ್ಡ್‌ನಿಂದ ಐಫೋನ್‌ಗೆ ವಾಟ್ಸ್‌ಆ್ಯಪ್ ಚಾಟ್ ವರ್ಗಾವಣೆ: ಶೀಘ್ರ ಲಭ್ಯ

ಐಎಎನ್ಎಸ್
Published 23 ಜನವರಿ 2022, 10:22 IST
Last Updated 23 ಜನವರಿ 2022, 10:22 IST
ಐಫೋನ್‌ನಿಂದ ಆ್ಯಂಡ್ರಾಯ್ಡ್‌ಗೆ ಚಾಟ್ ವರ್ಗಾವಣೆ ಸೌಲಭ್ಯವಿದೆ.
ಐಫೋನ್‌ನಿಂದ ಆ್ಯಂಡ್ರಾಯ್ಡ್‌ಗೆ ಚಾಟ್ ವರ್ಗಾವಣೆ ಸೌಲಭ್ಯವಿದೆ.   

ನವದೆಹಲಿ: ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಆ್ಯಪಲ್ ಐಪೋನ್‌ಗೆ ಬದಲಾಗುವಾಗ ಎದುರಾಗುವ ವಾಟ್ಸ್‌ಆ್ಯಪ್ ಚಾಟ್ ವರ್ಗಾವಣೆ ಸಮಸ್ಯೆಗೆ ಮುಕ್ತಿ ಹಾಡಲು ಮೆಟಾ ಒಡೆತನದ ವಾಟ್ಸ್‌ಆ್ಯಪ್ ಮುಂದಾಗಿದೆ.

ವಾಬೀಟಾಇನ್ಫೋ ವರದಿ ಪ್ರಕಾರ, ವಾಟ್ಸ್‌ಆ್ಯಪ್, ಆ್ಯಂಡ್ರಾಯ್ಡ್ ಚಾಟ್ ಅನ್ನು ಐಫೋನ್‌ನಲ್ಲಿ ಬಳಸಲು ಅನುಕೂಲವಾಗುವಂತೆ, ಇಂಪೋರ್ಟ್ ಚಾಟ್ ಹಿಸ್ಟರಿ ಎನ್ನುವ ಆಯ್ಕೆಯನ್ನು ಪರಿಶೀಲಿಸುತ್ತಿದೆ.

ಐಓಎಸ್ ವಾಟ್ಸ್‌ಆ್ಯಪ್ ಬೀಟಾ ಆವೃತ್ತಿಯಲ್ಲಿ ನೂತನ ಆಯ್ಕೆಯನ್ನು ಕಂಪನಿ ಪರಿಶೀಲಿಸುತ್ತಿದೆ.

ADVERTISEMENT

ಐಫೋನ್‌ನಿಂದ ಆ್ಯಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗೆ ವಾಟ್ಸ್‌ಆ್ಯಪ್ ಚಾಟ್ ಅನ್ನು ವರ್ಗಾಯಿಸುವ ಅವಕಾಶವನ್ನು ಆ್ಯಪ್‌ನಲ್ಲೇ ಒದಗಿಸಲಾಗಿದೆ.

ಅದೇ ಮಾದರಿಯಲ್ಲಿ, ಆ್ಯಂಡ್ರಾಯ್ಡ್ ಚಾಟ್ ಅನ್ನು ಕೂಡ ಐಪೋನ್‌ಗೆ ವರ್ಗಾಯಿಸಲು ಯಾವುದೇ ಥರ್ಡ್ ಪಾರ್ಟಿ ಆ್ಯಪ್ ನೆರವಿಲ್ಲದೆಯೇ, ನೇರವಾಗಿ ವಾಟ್ಸ್ಆ್ಯಪ್ ಮೂಲಕವೇ ಮಾಡಿಕೊಳ್ಳುವಂತಾಗಲು ಹೊಸ ಆಯ್ಕೆ ಸಹಕಾರಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.