ADVERTISEMENT

ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ನೀಲಿ ಪಕ್ಷಿ ಲೋಗೊ ಬದಲಿಗೆ ‘X’

ಐಎಎನ್ಎಸ್
Published 31 ಜುಲೈ 2023, 10:33 IST
Last Updated 31 ಜುಲೈ 2023, 10:33 IST
ಟ್ವಿಟರ್‌ನ ಹೊಸ ಲೋಗೊ
ಟ್ವಿಟರ್‌ನ ಹೊಸ ಲೋಗೊ   

ಸ್ಯಾನ್‌ಫ್ರಾನ್ಸಿಸ್ಕೊ: ಟ್ವಿಟರ್‌ನ ನೀಲಿ ಪಕ್ಷಿ ಲೋಗೊ ಸ್ಥಾನದಲ್ಲಿ X (ಎಕ್ಸ್) ಎಂಬ ಚಿಹ್ನೆ ಇದೀಗ ಆಂಡ್ರಾಯ್ಡ್ ಮೊಬೈಲ್ ಹಾಗೂ ಐಒಎಸ್ ಸಾಧನಗಳಲ್ಲಿ ಗೋಚರಿಸಿದೆ.

ಈ ಬಗ್ಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಭಾನುವಾರದಂದು ಟ್ವಿಟರ್‌ ಬಳಕೆದಾರರಿಗೆ 'ವಿಶೇಷವಾದದ್ದು ಶೀಘ್ರದಲ್ಲೇ ಬರಲಿದೆ‘ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಇಂದು( ಸೋಮವಾರ) ಆಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಹಾಗೂ ಐಒಎಸ್ ಸಾಧನಗಳಲ್ಲಿ ನೀಲಿ ಪಕ್ಷಿಯ ಸ್ಥಾನದಲ್ಲಿ X (ಎಕ್ಸ್) ಎಂದು ಬದಲಾಗಿದೆ.

‘ ಜುಲೈ 23ರಂದು ಶೀಘ್ರದಲ್ಲೇ ನಾವು ಟ್ವಿಟರ್‌ ಬ್ರ್ಯಾಂಡ್‌ಗೆ ಮತ್ತು ಎಲ್ಲಾ ಪಕ್ಷಿಗಳಿಗೆ ವಿದಾಯ ಹೇಳುತ್ತೇವೆ’ ಎಂದು ಎಲಾನ್‌ ಮಸ್ಕ್‌ ಟ್ವೀಟ್ ಮಾಡಿದ್ದರು. ಸರಣಿ ಟ್ವೀಟ್‌ಗಳ ಮೂಲಕ ಮರುಬ್ರಾಂಡಿಂಗ್ ಬಗ್ಗೆ ಮಸ್ಕ್ ಸುಳಿವು ನೀಡಿದ್ದರು.

ADVERTISEMENT

ಜುಲೈ 24ರಂದು ಮಿನುಗುತ್ತಿರುವ ‘X’ ಚಿತ್ರವನ್ನು ಮಸ್ಕ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ ಹೊಸ ಲೋಗೊವನ್ನು ಘೋಷಣೆ ಮಾಡಿದ್ದರು.

ಕೇವಲ ಲೋಗೊವನ್ನು ಬದಲಾಯಿಸುತ್ತಿಲ್ಲ ಬದಲಿಗೆ ಟ್ವಿಟರ್‌ನ ಕಾರ್ಯ ವೈಖರಿಯೂ ವೇಗ ಪಡೆದುಕೊಳ್ಳಲಿದೆ. ಟ್ವಿಟರ್‌ ಬಳಕೆದಾರರಿಗೆ ವಿಶಿಷ್ಟ ಫೀಚರ್ಸ್ ಲಭ್ಯವಿದೆ ಎಂದು ಮಸ್ಕ್‌ ಟ್ವೀಟ್‌ ಮಾಡಿದ್ದರು.

ಇದರ ಜೊತೆಗೆ ಟ್ವಿಟರ್‌ ಅನ್ನು ‘ಎಕ್ಸ್’ ಆ್ಯಪ್ ಎಂದು ರೀಬ್ರ್ಯಾಂಡ್ ಮಾಡಿರುವ ಬಗ್ಗೆಯೂ ಟ್ವೀಟ್ ಮಾಡಿರುವ ಮಸ್ಕ್, ಈ ಆ್ಯಪ್ ಜಗತ್ತಿನಾದ್ಯಂತ ಲೈವ್ ಆಗಲಿದೆ ಎಂದು ಘೋಷಿಸಿದ್ದಾರೆ. ಈ ಆ್ಯಪ್ ಸಾಕಷ್ಟು ವಿಶೇಷವಾಗಿದ್ದು, ಜನರು ತಮ್ಮ ಅನಿಸಿಕೆಗಳನ್ನು ವಿಶ್ವದ ಮುಂದೆ ಹಂಚಿಕೊಳ್ಳುವ ಇರುವ ಒಂದು ಅತ್ಯುತ್ತಮ ವೇದಿಕೆಯಾಗಿದೆ ಎಂದು ಹೇಳಿದ್ದಾರೆ.

ಹೊಸ ಆ್ಯಪ್‌ನಲ್ಲಿ ಆಡಿಯೊ, ವಿಡಿಯೊ, ಸಂದೇಶ ಕಳುಹಿಸಬಹುದು, ಬ್ಯಾಂಕಿಂಗ್ ಪಾವತಿ ಆಯ್ಕೆಯೂ ಇದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.