ADVERTISEMENT

iOS 16.2: ಐಪೋನ್ 5G ಅಪ್‌ಡೇಟ್ ಬಿಡುಗಡೆ ಮಾಡಿದ ಆ್ಯಪಲ್

ಐಪೋನ್‌ ಬಳಕೆದಾರರಿಗೆ ನೂತನ ಅಪ್‌ಡೇಟ್ ಲಭ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2022, 9:35 IST
Last Updated 14 ಡಿಸೆಂಬರ್ 2022, 9:35 IST
   

ಬೆಂಗಳೂರು: ಆ್ಯಪಲ್ ಬಹುನಿರೀಕ್ಷಿತ ಐಓಎಸ್ ಅಪ್‌ಡೇಟ್ 16.2 ಕೊನೆಗೂ ಬಿಡುಗಡೆಯಾಗಿದೆ. ಅರ್ಹ ಐಪೋನ್ ಬಳಕೆದಾರರು ನೂತನ ಅಪ್‌ಡೇಟ್ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದಾಗಿದೆ.

ಹೊಸ 16.2 ಅಪ್‌ಡೇಟ್ ಬಿಡುಗಡೆಯಾಗುವುದರ ಮೂಲಕ, ದೇಶದಲ್ಲಿ ಐಫೋನ್‌ಗಳಲ್ಲಿ 5G ಸೇವೆ ಒದಗಿಸಲು ಸಾಧ್ಯವಾಗಿದ್ದು, ಡಿವೈಸ್ ಅಪ್‌ಡೇಟ್ ಆಗಿದೆ. ಪ್ರಸ್ತುತ ಭಾರತದಲ್ಲಿ ರಿಲಯನ್ಸ್ ಜಿಯೊ ಮತ್ತು ಏರ್‌ಟೆಲ್ 5G ಸೇವೆ ಒದಗಿಸುತ್ತಿದೆ.

5G ಸೇವೆ ಆರಂಭವಾದ ಬಳಿಕ ಸರ್ಕಾರ, ಎಲ್ಲ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಅಪ್‌ಡೇಟ್ ಒದಗಿಸುವಂತೆ ಸೂಚಿಸಿತ್ತು. ಅದರಂತೆ, ಪರೀಕ್ಷಾರ್ಥ ಬಳಕೆಯ ಬಳಿಕ ಆ್ಯಪಲ್, ಒನ್‌ಪ್ಲಸ್ ಮತ್ತು ಮೊಟೊರೊಲಾ 5G ಸಾಫ್ಟ್‌ವೇರ್ ಅಪ್‌ಡೇಟ್ ಬಿಡುಗಡೆ ಮಾಡಿದೆ.

ADVERTISEMENT

ಆ್ಯಪಲ್ ಐಫೋನ್‌ಗಳಿಗೆ 16.2 ಐಓಎಸ್ ಬಿಡುಗಡೆಯಾಗಿದ್ದು, 5G ಕವರೇಜ್ ಇರುವ ನಗರಗಳಲ್ಲಿ ರಿಲಯನ್ಸ್ ಜಿಯೊ ಬಳಕೆದಾರರಿಗೆ 5G ಸೇವೆ ಲಭ್ಯವಾಗುತ್ತಿದೆ.

ಆದರೆ, ಏರ್‌ಟೆಲ್ ನೆಟ್‌ವರ್ಕ್‌ನಲ್ಲಿ 5G ಸೇವೆ ಇಂದಿನಿಂದ ಲಭ್ಯವಾಗುತ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಬೆಂಗಳೂರು ಸಹಿತ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ 5G ಸೇವೆ ಒದಗಿಸುವುದಾಗಿ ಏರ್‌ಟೆಲ್ ಕಂಪನಿ ಹೇಳಿತ್ತು.

ಈ ಮೊದಲು ಹೇಳಿರುವಂತೆ, ಡಿಸೆಂಬರ್‌ ಆರಂಭದಲ್ಲೇ ಆ್ಯಪಲ್ ಐಫೋನ್ 12 ಮತ್ತು ನಂತರದ ಮಾದರಿಗಳಿಗೆ 5G ಅಪ್‌ಡೇಟ್ ಒದಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.