ADVERTISEMENT

ಮತ್ತೊಂದು ಡಿಜಿಟಲ್ ಕ್ರಾಂತಿ: 5ಜಿ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಅಕ್ಟೋಬರ್ 2022, 6:38 IST
Last Updated 1 ಅಕ್ಟೋಬರ್ 2022, 6:38 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 5ಜಿ ದೂರಸಂಪರ್ಕ ಸೇವೆಗಳಿಗೆ ಇಂದು (ಶನಿವಾರ) ಚಾಲನೆ ನೀಡಿದರು.

ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ 5ಜಿ ಸೇವೆಗೆ ಚಾಲನೆ ನೀಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಹೆಚ್ಚು ವೇಗದ ಇಂಟರ್ನೆಟ್ ಬಳಕೆ ಆರಂಭವಾಗಿದೆ.

ಆಯ್ದ ನಗರಗಳಲ್ಲಿ 5ಜಿ ದೂರಸಂಪರ್ಕ ಸೇವೆಗೆ ಚಾಲನೆ ನೀಡಲಾಗಿದ್ದು, ಎರಡು ವರ್ಷಗಳಲ್ಲಿ ಇದು ಇಡೀ ದೇಶದಲ್ಲಿ ಹಂತ ಹಂತವಾಗಿ ಲಭ್ಯವಾಗಲಿದೆ.

ADVERTISEMENT

5ಜಿ ಸೇವೆಗಳು ಆರಂಭವಾಗಿರುವುದರಿಂದ ಹೊಸ ಆರ್ಥಿಕ ಅವಕಾಶಗಳು ತೆರೆದುಕೊಳ್ಳುವ ನಿರೀಕ್ಷೆ ಇದೆ. 5ಜಿ ತಂತ್ರಜ್ಞಾನವು 4ಜಿ ತಂತ್ರಜ್ಞಾನಕ್ಕಿಂತ ಹಲವು ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ಸಂಪರ್ಕವನ್ನು ಒದಗಿಸುತ್ತದೆ.

ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೊ, ಸುನೀಲ್ ಭಾರ್ತಿ ಮಿತ್ತಲ್ ಮಾಲೀಕತ್ವದ ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು 5ಜಿ ಸೇವೆಗಳನ್ನು ಆರಂಭಿಸಲು ಅಗತ್ಯವಿರುವ ತರಂಗಾಂತರಗಳನ್ನು ಹರಾಜಿನ ಮೂಲಕ ಖರೀದಿಸಿವೆ. ಖಾಸಗಿ ನೆಟ್‌ವರ್ಕ್‌ ಸ್ಥಾಪಿಸಲು ಅಗತ್ಯವಿರುವ 5ಜಿ ತರಂಗಾಂತರಗಳನ್ನು ಅದಾನಿ ಸಮೂಹ ಖರೀದಿ ಮಾಡಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.