ADVERTISEMENT

6 ಲಕ್ಷ ಭಾರತೀಯರ ದತ್ತಾಂಶ ಕಳ್ಳತನ: ಬಾಟ್‌ ಮಾರ್ಕೆಟ್‌ನಲ್ಲಿ ಮಾರಾಟ

ಬಾಟ್ ಮೂಲಕ ಕಳ್ಳತನ ಮಾಡಿದ ದತ್ತಾಂಶ ದುರ್ಬಳಕೆ ಸಾಧ್ಯತೆ

ರಾಯಿಟರ್ಸ್
Published 8 ಡಿಸೆಂಬರ್ 2022, 9:29 IST
Last Updated 8 ಡಿಸೆಂಬರ್ 2022, 9:29 IST
   

ಬೆಂಗಳೂರು: ಜಾಗತಿಕವಾಗಿ 50 ಲಕ್ಷ ಮಂದಿಯ ದತ್ತಾಂಶ ಕಳ್ಳತನವಾಗಿದ್ದು, ಅದರಲ್ಲಿ ಭಾರತ ಮೂಲದ 6 ಲಕ್ಷ ಜನರ ಪ್ರಮುಖ ಮಾಹಿತಿ ಕೂಡ ಸೇರಿದೆ ಎಂದು ವರದಿಯಾಗಿದೆ.

ಜಾಗತಿಕ ವಿಪಿಎನ್ ಒದಗಿಸುವ ನಾರ್ಡ್‌ವಿಪಿಎನ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜಗತ್ತಿನಲ್ಲೇ ಅತಿ ಹೆಚ್ಚು ದತ್ತಾಂಶ ಕಳ್ಳತನವಾಗಿರುವುದು ಭಾರತೀಯರದ್ದಾಗಿದೆ ಎಂದು ಹೇಳಿದೆ.

ಬಾಟ್ ಮಾಲ್ವೇರ್ ಮೂಲಕ ಬಳಕೆದಾರರ ಸ್ಮಾರ್ಟ್‌ಫೋನ್, ಕಂಪ್ಯೂಟರ್ ಪ್ರವೇಶಿಸಿ, ಅದರ ಮೂಲಕ ದತ್ತಾಂಶ ಕಳವು ಮಾಡಲಾಗಿದೆ.

ADVERTISEMENT

ಬಳಕೆದಾರರ ಲಾಗಿನ್ ವಿವರ, ಡಿಜಿಟಲ್ ದಾಖಲೆ, ಬೆರಳಚ್ಚು ವಿವರ, ಸ್ಕ್ರೀನ್‌ಶಾಟ್, ಬ್ಯಾಂಕಿಂಗ್ ವಿವರ ಸಹಿತ ಪ್ರಮುಖ ಮಾಹಿತಿ ಸೋರಿಕೆಯಾಗಿದೆ. ಜತೆಗೆ, ಪ್ರತಿ ಭಾರತೀಯ ವ್ಯಕ್ತಿಯ ಸೋರಿಕೆಯಾದ ವಿವರ ₹490 ರಂತೆ ಹ್ಯಾಕರ್‌ಗಳಿಗೆ ಮಾರಾಟವಾಗಿದೆ ಎಂದು ನಾರ್ಡ್‌ವಿಪಿಎನ್ ವರದಿ ತಿಳಿಸಿದೆ.

ಬಾಟ್ ಮಾರ್ಕೆಟ್‌ಗಳು 2018ರಿಂದ ಕಾರ್ಯನಿರ್ವಹಿಸುತ್ತಿದ್ದು, ನಾರ್ಡ್‌ವಿಪಿಎನ್ ಕಳೆದ ನಾಲ್ಕು ವರ್ಷಗಳಲ್ಲಿ ನಡೆದಿರುವ ದತ್ತಾಂಶ ಕಳ್ಳತನವನ್ನು ಉಲ್ಲೇಖಿಸಿ ವರದಿ ಸಿದ್ಧಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.