ADVERTISEMENT

ಮೌಂಟ್ ಎವರೆಸ್ಟ್ ಶಿಖರದ 360 ಡಿಗ್ರಿ ದೃಶ್ಯ: ವಿಡಿಯೊ ಹಂಚಿಕೊಂಡ ಆನಂದ್ ಮಹೀಂದ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2022, 7:33 IST
Last Updated 5 ಏಪ್ರಿಲ್ 2022, 7:33 IST
ಮೌಂಟ್ ಎವರೆಸ್ಟ್ ಶಿಖರದ ದೃಶ್ಯ (ಟ್ವಿಟರ್ ಚಿತ್ರ)
ಮೌಂಟ್ ಎವರೆಸ್ಟ್ ಶಿಖರದ ದೃಶ್ಯ (ಟ್ವಿಟರ್ ಚಿತ್ರ)   

ನವದೆಹಲಿ: ಮೌಂಟ್‌ ಎವರೆಸ್ಟ್‌ ಶಿಖರದ ಮೇಲಿಂದ 360 ಡಿಗ್ರಿ ದೃಶ್ಯ ನೋಡುವುದೇ ಒಂದು ಅದ್ಭುತ ಅನುಭವ.

ಮೌಂಟ್‌ ಎವರೆಸ್ಟ್‌ ಶಿಖರದ ವಿಡಿಯೊವನ್ನು ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಮೌಂಟ್ ಎವರೆಸ್ಟ್ ಶಿಖರದಿಂದ 360 ಡಿಗ್ರಿ ನೋಟ. ಕೆಲವೊಮ್ಮೆ ನೀವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸನ್ನಿವೇಶ ಬಂದಾಗ ಪ್ರಪಂಚದ ಅಡೆತಡೆಯಿಲ್ಲದ ನೋಟದೊಂದಿಗೆ ನೀವು ಎವರೆಸ್ಟ್‌ ಶಿಖರದ ಮೇಲಿರುವಿರಿ ಎಂದು ಊಹಿಸಲು ಸಹಾಯ ಮಾಡುತ್ತದೆ. ‘ದೊಡ್ಡ ಚಿತ್ರ’ ನೋಡಲು ಸುಲಭವಾಗುತ್ತದೆ ಎಂದು ಆನಂದ್ ಬರೆದುಕೊಂಡಿದ್ದಾರೆ.

ADVERTISEMENT

ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಅದ್ಭುತ ಎಂದು ಪ್ರತಿಕ್ರಿಯಿಸಿದ್ದಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.