ADVERTISEMENT

ವಿಡಿಯೊ: ಬೀದಿಗೆ ಬಂದು ಹೊಡೆದಾಡಿಕೊಂಡ ಸರ್ಕಾರಿ ಶಾಲೆ ಶಿಕ್ಷಕಿಯರು!

ಬಿಹಾರದ ಪಟ್ನಾ ಜಿಲ್ಲೆಯ ಬಿಹ್ತಾ ಎಂಬ ಪಟ್ಟಣದ ಸರ್ಕಾರಿ ಹೈಸ್ಕೂಲ್‌ನಲ್ಲಿ ಘಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮೇ 2023, 10:18 IST
Last Updated 26 ಮೇ 2023, 10:18 IST
ಘಟನೆ ಸಂದರ್ಭ
ಘಟನೆ ಸಂದರ್ಭ   

ಪಟ್ನಾ: ಶಿಕ್ಷಕಿಯರಿಬ್ಬರು ಬೀದಿಗೆ ಬಂದು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬಿಹಾರದ ಪಟ್ನಾ ಜಿಲ್ಲೆಯ ಬಿಹ್ತಾ ಎಂಬ ಪಟ್ಟಣದ ಸರ್ಕಾರಿ ಹೈಸ್ಕೂಲ್‌ನಲ್ಲಿ ನಡೆದಿದೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಎನ್‌ಐ ಸುದ್ದಿಸಂಸ್ಥೆ ಘಟನೆ ಬಗ್ಗೆ ಟ್ವೀಟ್ ಮಾಡಿದೆ. ಶಿಕ್ಷಕಿಯರ ವರ್ತನೆಗೆ ಅನೇಕರು ಛೀಮಾರಿ ಹಾಕಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕಿ ಕಾಂತಿ ಕುಮಾರಿ ಹಾಗೂ ಸಹ ಶಿಕ್ಷಕಿ ಸುನೀತಾ ಕುಮಾರಿ ನಡುವೆ ಯಾವುದೋ ವಿಷಯಕ್ಕೆ ವಾಗ್ವಾದ ನಡೆದಿದೆ. ಈ ವೇಳೆ ಸ್ಥಳದಲ್ಲಿ ಸುನೀತಾ ಕುಮಾರಿ ತಾಯಿ ಕೂಡ ಅಲ್ಲೇ ಇದ್ದರು. ಪರಸ್ಪರ ಮಾತಿಗೆ ಮಾತು ಬೆಳೆದು ಕಾಂತಿ ಕುಮಾರಿ ಹಾಗೂ ಸುನೀತಾ ಕುಮಾರಿ ಹೊಡೆದಾಡಿಕೊಂಡಿದ್ದಾರೆ.

ADVERTISEMENT

ಈ ವೇಳೆ ಸುನೀತಾ ಕುಮಾರಿ ತಾಯಿ ಕೂಡ ಜಗಳದಲ್ಲಿ ಭಾಗಿಯಾಗಿ ಮುಖ್ಯ ಶಿಕ್ಷಕಿಯನ್ನು ಥಳಿಸಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಶಾಲೆಯ ಪಕ್ಕದ ಹೊಲದ ಬದಿಗೆ ಹೋಗಿ ಕೂಡ ಹೊಡೆದಾಡಿಕೊಂಡಿದ್ದಾರೆ.

ಇಬ್ಬರು ಶಿಕ್ಷಕಿಯರು ವೈಯಕ್ತಿಕ ವಿಚಾರವಾಗಿ ಹೊಡೆದಾಡಿಕೊಂಡಿದ್ದಾರೆ. ಇಬ್ಬರಿಗೂ ನೋಟಿಸ್ ನೀಡಲಾಗಿದ್ದು, ಶೀಘ್ರದಲ್ಲೇ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ಬಿಹ್ತಾ ಕ್ಷೇತ್ರ ಶಿಕ್ಷಣಾಧಿಕಾರಿ ನವೀಶ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.