ADVERTISEMENT

₹10ಕ್ಕೆ ದೇವರ ಆಶೀರ್ವಾದ ಮಾರಾಟ; ಬಾಲಕನ ಹೊಸ ವ್ಯವಹಾರ ಹೇಗಿದೆ ಗೊತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಫೆಬ್ರುವರಿ 2026, 6:59 IST
Last Updated 4 ಫೆಬ್ರುವರಿ 2026, 6:59 IST
<div class="paragraphs"><p>ಬಾಲಕ</p></div>

ಬಾಲಕ

   

ಚಿತ್ರ ಕೃಪೆ; ಎಕ್ಸ್‌

ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ದೇವರ ಆಶೀರ್ವಾದ ಪಡೆಯುವುದು ಸಹಜ. ಆದರೆ ನೀವು ದೇವರ ಆಶೀರ್ವಾದವನ್ನು ಹಣಕ್ಕಾಗಿ ಮಾರಾಟ ಮಾಡುವುದನ್ನು ಎಂದಾದರೂ ನೋಡಿದ್ದಿರಾ? ₹10ಕ್ಕೆ ದೇವರ ಆಶೀರ್ವಾದವನ್ನು ಮಾರಾಟ ಮಾಡುತ್ತಿರುವ ಬಾಲಕನ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

ADVERTISEMENT

ವಿಡಿಯೊದಲ್ಲಿ ಬಾಲಕನು ಒಂದು ಕಟ್ಟೆಯ ಮೇಲೆ ಶಿವಲಿಂಗವನ್ನು ಇಟ್ಟುಕೊಂಡಿದ್ದಾನೆ. ಅವನ ಬಳಿ ಬಂದ ಮಹಿಳೆಯರು ಬಾಲಕನಿಗೆ ₹10 ನೀಡಿ ಶಿವಲಿಂಗವನ್ನು ಮುಟ್ಟುತ್ತಾರೆ. ಆಗ ಬಾಲಕ ತಾನೂ ಲಿಂಗವನ್ನು ಮುಟ್ಟಿ ಮಹಿಳೆಯರ ತಲೆ ಮೇಲೆ ಕೈ ಇಟ್ಟಿ ದೇವರ ಪರವಾಗಿ ತಾನೇ ಆಶೀರ್ವಾದ ಮಾಡುತ್ತಾನೆ.

‘₹10 ಕೊಡಿ, ಆಶೀರ್ವಾದ ಪಡೆಯಿರಿ. ವಿಭಿನ್ನ ವ್ಯವಹಾರ ಪ್ರಯತ್ನಿಸಿ ಬಾಲಕ ಯಶಸ್ವಿಯಾಗಿದ್ದಾನೆ. ಬುದ್ದಿವಂತನಾದ ಬಾಲಕ ಸಮಾಜದ ತಿರುಳನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾನೆ. ಅವನು ಇದರಿಂದ ಹೆಚ್ಚು ಹಣಗಳಿಸುತ್ತಾನೆ’ ಎಂದು ವಿಡಿಯೊಗೆ ಅಡಿಬರಹ ನೀಡಲಾಗಿದೆ.

ಧಾರ್ಮಿಕ ನಂಬಿಕೆಯನ್ನು ಬಳಸಿಕೊಂಡು ಹೀಗೂ ಹಣ ಗಳಿಕೆ ಮಾಡಬಹುದು ಎಂಬುದನ್ನು ಬಾಲಕ ತೋರಿಸಿಕೊಟ್ಟಿದ್ದಾನೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ವಿಡಿಯೊ 50 ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಪಡೆದಿದೆ.

‘ಬೇಡಿಕೆ ಹೆಚ್ಚಾದ ತಕ್ಷಣ ಬೆಲೆ ಹೆಚ್ಚಾಗುತ್ತದೆ. ಭವಿಷ್ಯದತ್ತ ಗಮನ ಹರಿಸುತ್ತಿರುವ ಬಾಲಕನು ಭಾರತದಲ್ಲಿ ಬದುಕುಳಿಯುವ ತಂತ್ರವನ್ನು ಕರಗತ ಮಾಡಿಕೊಂಡಿದ್ದಾನೆ’ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

ಕೆಲವರು ‘ಅಧ್ಯಾತ್ಮಿಕ ನಾಯಕ’, ‘ಭವಿಷ್ಯದ ಬಾಬಾಗಿರಿಯ ಅಭ್ಯಾಸ, ಇವನು ದೇವರ ಸಂದೇಶವಾಹಕ‘ ಎಂದು ಕಮೆಂಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.