ADVERTISEMENT

ಛೀ.. ಛೀ.. ಛೀ..ರೆ ನೂನಿ ಛೀ! ಟ್ರೆಂಡ್ ಆದ ಒಡಿಯಾ ಹಾಡಿನ ಹಿನ್ನೆಲೆ ಏನು?

ಮಾಹಿತಿ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2025, 12:35 IST
Last Updated 24 ಜನವರಿ 2025, 12:35 IST
<div class="paragraphs"><p>ಬಿಭೂತಿ ಬಿಸ್ವಾಲ್ (ಮಧ್ಯದಲ್ಲಿ)</p></div>

ಬಿಭೂತಿ ಬಿಸ್ವಾಲ್ (ಮಧ್ಯದಲ್ಲಿ)

   

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಯಾವ ವಿಡಿಯೊ, ಯಾವ ಹಾಡು ಯಾವಾಗ ಸದ್ದು ಮಾಡುತ್ತದೋ ಹೇಳುವುದು ಕಷ್ಟ.

ಇದೀಗ ಇಂತಹದ್ದೇ ಮತ್ತೊಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದೆ. ಛೀ.. ಛೀ.. ಛೀ..ರೆ ನೂನಿ ಛೀ! (Chhi Chhi Chhi Re Nani) ಎಂಬ ಒಡಿಯಾ ಭಾಷೆಯ ಹಾಡು ಜನಪ್ರಿಯವಾಗಿದೆ.

ADVERTISEMENT

ಅಸಲಿಗೆ ಒಡಿಯಾ ಸಂಭಾಲ್ಪುರ ಶೈಲಿಯ ಈ ಹಾಡು 1995 ರಲ್ಲೇ ಬಂದಿರುವುದು. ಒಡಿಶಾ ಸಿನಿಮಾ ಹಾಗೂ ಧಾರಾವಾಹಿ ನಿರ್ದೇಶಕ ಮಹಾರಂಜನ್ ನಾಯಕ್ ಅವರು ನಿರ್ದೇಶಿಸಿ ಎಡಿಟ್ ಮಾಡಿರೋ ಈ ಅಲ್ಬಂ ಹಾಡನ್ನು ಸತ್ಯಾ ಅಧಿಕಾರಿ ಎನ್ನುವರು ಬರೆದು, ಹಾಡಿದ್ದಾರೆ. ‘Sidharth ಮ್ಯೂಸಿಕ್’ ಕಂಪನಿಯ ಕೊಡುಗೆ ಇದಾಗಿದೆ.

ಬಡ ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆಯಾಗಲು ಹುಡುಗಿ ಮನೆಯವರು ಒಪ್ಪದಿದ್ದಾಗ ಯುವಕನ ಒಡಲಾಳದ ದನಿ ಇಲ್ಲಿ ಹಾಡಾಗಿ ಹೊರಹೊಮ್ಮಿದೆ. ಈ ಹಾಡಿನ ಪ್ರಿಯತಮನ ಪಾತ್ರದಲ್ಲಿ ಒಡಿಶಾ ಸಂಭಾಲ್ಪುರದ ರಂಗಭೂಮಿ ಕಲಾವಿದ, ಶಿಕ್ಷಕ ಬಿಭೂತಿ ಬಿಸ್ವಾಲ್ ಅಭಿನಯಿಸಿದ್ದಾರೆ. ಹುಡುಗಿ ಪಾತ್ರದಲ್ಲಿ ಶೈಲಜಾ ಪಟೇಲ್ ಅಭಿನಯಿಸಿದ್ದಾರೆ.

30 ವರ್ಷವಾದ ಮೇಲೆ ಈ ಹಾಡು ಇಷ್ಟೊಂದು ಜನಪ್ರಿಯ ಆಗಿರುವುದಕ್ಕೆ ಹಾಡಿನಲ್ಲಿ ಅಭಿನಯಿಸಿದ ಬಿಭೂತಿ ಬಿಸ್ವಾಲ್ ಅವರನ್ನು ಸ್ಥಳೀಯ ಮಾಧ್ಯಮಗಳು ಮಾತನಾಡಿಸಿವೆ.

ಜಾನಪದ ಶೈಲಿಯ ಈ ಹಾಡು ಆರಂಭದಲ್ಲಿ ಸ್ಥಳೀಯರ ಗಮನ ಸೆಳೆದಿದ್ದರೂ ಅಷ್ಟೊಂದು ಜನಪ್ರಿಯ ಆಗಿರಲಿಲ್ಲ. ಇದೀಗ ಇಷ್ಟೊಂದು ಹಿಟ್ ಆಗಿರುವುದು ಖುಷಿ ತರಿಸಿದೆ. ಎಲ್ಲರೂ ನನ್ನನ್ನು ಗುರುತಿಸುತ್ತಿದ್ದಾರೆ. ಅದೇ ಹಾಡಿಗೆ ರೀಲ್ಸ್ ವಿಡಿಯೊ ಮಾಡಿ ಸಂಭ್ರಮಿಸುತ್ತಿರುವುದನ್ನು ನೋಡಿದ್ದೇನೆ ಎಂದಿದ್ದಾರೆ.

ನಾನು ಆಗ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಸಿನಿಮಾ, ಧಾರಾವಾಹಿ, ಅಲ್ಬ್ಂ ಹಾಡುಗಳಲ್ಲಿ ನಟಿಸಿರಲಿಲ್ಲ. ಸಹಜ ಅಭಿನಯ ಬೇಕೆಂದು ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿದ್ದರು ಎಂದು ಒಡಿಶಾದ ಕನಕ್ ನ್ಯೂಸ್ ಸಂದರ್ಶನದಲ್ಲಿ ಬಿಭೂತಿ ಬಿಸ್ವಾಲ್ ಹೇಳಿದ್ದಾರೆ.

ಈ ಹಾಡನ್ನು ಹಂಚಿಕೊಂಡು ಖುಷಿ ವ್ಯಕ್ತಪಡಿಸಿರುವ ಅನೇಕ ನೆಟ್ಟಿಗರು ‘ಸಂಗೀತಕ್ಕೆ ದೇಶ, ಭಾಷೆಯ ಗಡಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ’ ಎಂದಿದ್ದಾರೆ.

Sidharth Sambalpuri ಎಂಬ ಯೂಟ್ಯೂಬ್‌ನಲ್ಲಿ Chhi Chhi Chhi Re Nani ಅಧಿಕೃತ ಹಾಡು ಮತ್ತೆ ಅದರ ಸಾಹಿತ್ಯದ ಟೆಕ್ಟ್ಸ್ ಇದೆ. 12 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.