ADVERTISEMENT

ಕಾರಿಗೆ ನಾಯಿಯನ್ನು ಕಟ್ಟಿ ಎಳೆದೊಯ್ದ ವೈದ್ಯ: ಅಮಾನವೀಯ ಕೃತ್ಯದ ವಿಡಿಯೊ ವೈರಲ್

ನಾಯಿಯೊಂದನ್ನು ಸರಪಳಿ ಬಿಗಿದು ಕಾರಿಗೆ ಕಟ್ಟಿ ಎಳೆದೊಯ್ದ ರಾಜಸ್ಥಾನದ ವೈದ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2022, 8:32 IST
Last Updated 19 ಸೆಪ್ಟೆಂಬರ್ 2022, 8:32 IST
   

ಬೆಂಗಳೂರು: ರಾಜಸ್ಥಾನದ ವೈದ್ಯರೊಬ್ಬರು ತಮ್ಮ ಕಾರಿಗೆ ನಾಯಿಯೊಂದನ್ನು ಕಟ್ಟಿ, ಅದನ್ನು ಎಳೆದುಕೊಂಡು ಹೋಗಿರುವ ಅಮಾನವೀಯ ಕೃತ್ಯ ವರದಿಯಾಗಿದೆ.

ಡಾ. ರಜನೀಶ್ ಗ್ವಾಲಾ ಎಂಬ ವೈದ್ಯರು ಈ ಕೃತ್ಯ ಎಸಗಿದ್ದು, ಕಾರಿಗೆ ನಾಯಿಯನ್ನು ಕಟ್ಟಿ ಎಳೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಗಮನಿಸಿ ತಡೆದು ನಿಲ್ಲಿಸಿದ್ದಾರೆ.

ನಾಯಿ ಮನೆಯ ಮುಂಭಾಗದಲ್ಲೇ ಇರುತ್ತಿತ್ತು. ಓಡಿಸಿದರೂ ಮತ್ತೆ ಬಂದು ಬಾಗಿಲ ಬಳಿ ನಿಲ್ಲುತ್ತಿತ್ತು. ಹೀಗಾಗಿ ನಾಯಿಗೆ ಸರಪಳಿ ಬಿಗಿದು ಎಳೆದುಕೊಂಡು ಹೋಗಿರುವುದಾಗಿ ವೈದ್ಯ ರಜನೀಶ್ ತಿಳಿಸಿದ್ದಾರೆ.

ADVERTISEMENT

ಕಾರಿಗೆ ಕಟ್ಟಿ ಎಳೆದುಕೊಂಡು ಹೋಗಿರುವುದರಿಂದ ನಾಯಿಯ ಕಾಲು ಮುರಿದಿದೆ. ಅದನ್ನು ರಾಜಸ್ಥಾನದ ಡಾಗ್ ಹೋಮ್ ಫೌಂಡೇಶನ್‌ಗೆ ನೀಡಲಾಗಿದೆ.

ವೈದ್ಯರ ಕೃತ್ಯದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಜತೆಗೆ ಡಾಗ್ ಹೋಮ್ ಫೌಂಡೇಶನ್ ಸಿಬ್ಬಂದಿ ವೈದ್ಯರ ವಿರುದ್ಧ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.