ADVERTISEMENT

ಹೊಸ ವರ್ಷಾಚರಣೆ: ಗೂಗಲ್‌ನಿಂದ ವಿಶೇಷ ಡೂಡಲ್ ರಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2025, 6:47 IST
Last Updated 31 ಡಿಸೆಂಬರ್ 2025, 6:47 IST
<div class="paragraphs"><p>ಗೂಗಲ್ ಡೂಡಲ್</p></div>

ಗೂಗಲ್ ಡೂಡಲ್

   

2025ನೇ ವರ್ಷಕ್ಕೆ ಬೀಳ್ಕೊಟ್ಟು 2026 ಅನ್ನು ಸ್ವಾಗತಿಸಲು ಜಗತ್ತು ಸಜ್ಜಾಗುತ್ತಿದೆ. ಈ ನಡುವೆ ಹೊಸ ವರ್ಷದ ಮುನ್ನಾ ದಿನವಾಗಿರುವ ಇಂದು (ಡಿಸೆಂಬರ್ 31) ವಿಶೇಷ ಡೂಡಲ್ ಮೂಲಕ ಬಳಕೆದಾರರಿಗೆ ಗೂಗಲ್ ಶುಭ ಕೋರಿದೆ.

ಗೂಗಲ್ ಮುಖಪುಟದಲ್ಲಿ ಕಾಣಿಸಿಕೊಂಡಿರುವ ವಿಶೇಷ ಡೂಡಲ್, ಹಬ್ಬದ ಕಲಾಕೃತಿಗಳಿಂದ ಕಂಗೊಳಿಸುತ್ತಿದೆ. ಇದು ಒಂದು ಅಧ್ಯಾಯದ ಅಂತ್ಯ ಮತ್ತು ಇನ್ನೊಂದು ಅಧ್ಯಾಯದ ಆರಂಭವನ್ನು ಸೂಚಿಸುತ್ತವೆ. ಮಾತ್ರವಲ್ಲ, ಹೊಸ ವರ್ಷ ಶೀಘ್ರದಲ್ಲೇ ಸಮೀಪಿಸುತ್ತಿದೆ ಎಂದು ಬಳಕೆದಾರರಿಗೆ ನೆನಪಿಸುವಂತಿದೆ.

ADVERTISEMENT

ಹೇಗಿದೆ ಡೂಡಲ್ ವಿನ್ಯಾಸ?

ಗೂಗಲ್ ಮುಖಪುಟದಲ್ಲಿ ಕಾಣಿಸಿಕೊಂಡಿರುವ ವಿಶೇಷ ಡೂಡಲ್, ಬಲೂನ್‌ಗಳು, ಕಲರ್ ಪೇಪರ್, ವಿಶೇಷ ಎಮೋಜಿಗಳಿಂದ ಅಲಂಕೃತಗೊಂಡು ಹಬ್ಬದಂತೆ ಕಂಗೊಳಿಸುತ್ತಿದೆ. ಡೂಡಲ್‌ನ ಮಧ್ಯಭಾಗದಲ್ಲಿ ‘2025’ ರಿಂದ ‘2026’ ಕ್ಕೆ ಪರಿವರ್ತನೆಗೊಳ್ಳುವ ಅನಿಮೇಷನ್ ಪ್ರದರ್ಶನವಾಗುತ್ತಿದೆ. ಇದು ಗಡಿಯಾರ ಮಧ್ಯರಾತ್ರಿಗೆ ಮೊದಲು ಬರುವ ಅಂತಿಮ ಸೆಕೆಂಡುಗಳನ್ನು ಸಂಕೇತಿಸುವಂತಿದೆ.

ಡೂಡಲ್ ಮೇಲೆ ಕ್ಲಿಕ್ ಮಾಡಿದಾಗ, ‘ಪ್ರಪಂಚದಾದ್ಯಂತ ಹೊಸ ವರ್ಷದ ಮುನ್ನಾ ದಿನವನ್ನು ವಿಶೇಷವಾಗಿ ಬರಮಾಡಿಕೊಳ್ಳಲಾಗುತ್ತದೆ. ಕೋಟ್ಯಂತರ ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕಳೆದ ವರ್ಷ ಸಿಹಿ ಕ್ಷಣಗಳನ್ನು ಮೆಲಕು ಹಾಗುತ್ತ, ಮುಂಬರುವ ಹೊಸ ವರ್ಷವನ್ನು ಸ್ವಾಗತಿಸಲು ಒಂದು ಕಡೆ ಸೇರುತ್ತಾರೆ. ಶೀಘ್ರದಲ್ಲೇ 2026 ಅನ್ನು ಅಧಿಕೃತವಾಗಿ ಬರಮಾಡಿಕೊಳ್ಳಲು ಗಡಿಯಾರ ಮಧ್ಯರಾತ್ರಿಯನ್ನು ತಲುಪಲಿದೆ’ ಎಂದು ಗೂಗಲ್ ಸಿದ್ಧಪಡಿಸಿರುವ ವಿಶೇಷ ಡೂಡಲ್‌ನ ವಿವರಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.