ADVERTISEMENT

ದೋಣಿಯಲ್ಲೇ ಚಹಾ ಅಂಗಡಿ ತೆರೆದ ವೃದ್ಧೆ; ನೆಟ್ಟಿಗರ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2025, 9:24 IST
Last Updated 10 ನವೆಂಬರ್ 2025, 9:24 IST
<div class="paragraphs"><p>ದೋಣಿಯಲ್ಲಿ ಚಹಾ ಅಂಗಡಿ ತೆರೆದ ವೃದ್ಧೆ</p></div>

ದೋಣಿಯಲ್ಲಿ ಚಹಾ ಅಂಗಡಿ ತೆರೆದ ವೃದ್ಧೆ

   

ಕೇರಳ: ಇಲ್ಲಿಯ ಕುಮಾರಕೊಂ ಎನ್ನುವ ಸ್ಥಳದಲ್ಲಿ ವೃದ್ಧೆಯೊಬ್ಬರು ದೋಣಿಯಲ್ಲಿ ಅಂಗಡಿ ತೆರೆದು ಮಸಾಲಾ ಚಹಾ ಮಾರುತ್ತಿರುವುದು ಪ್ರವಾಸಿಗರ ಗಮನ ಸೆಳೆದಿದೆ.

ಸ್ಥಳೀಯವಾಗಿ ‘ಚಾಯಾ ಚೇಚಿ’ (ಚಹಾ ನೀಡುವ ಅಕ್ಕಾ) ಎಂದೇ ಜನಪ್ರಿಯರಾಗಿರುವ ಈ ವೃದ್ಧೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಇನ್‌ಸ್ಟಾಗ್ರಾಂನಲ್ಲಿ ರನಾವತ್ ಎನ್ನುವವರು ವೃದ್ಧೆಯ ವಿಡಿಯೊ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ತೇಲುವ ದೋಣಿಯಲ್ಲಿ ತಾಮ್ರದ ಪಾತ್ರೆಯಲ್ಲಿ ಚಹಾ ಇಟ್ಟುಕೊಂಡು ಗಾಜಿನ ಲೋಟಗಳಿಗೆ ಬಿಸಿ ಬಿಸಿ ಚಹಾ ಹಾಕುತ್ತಿರುವ ದೃಶ್ಯವಿದೆ.

ವಿಡಿಯೊ 50 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ.

‘ಸ್ಟಾರ್‌ಬಕ್ಸ್‌ಗಳಲ್ಲಿ ಕುಳಿತು ಚಹಾ ಹೀರುವವರಿಗೆ ಈ ರೀತಿಯ ಜಾಗದಲ್ಲಿ ಚಹಾ ಕುಡಿಯುವುದು ವಿಶೇಷವಾಗಿಯೇ ಎನಿಸುತ್ತದೆ’ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. 

ಮತ್ತೊಬ್ಬರು, ‘ಕನಸುಗಳು ಇದರಿಂದಲೇ ರೂಪುಗೊಳ್ಳುತ್ತವೆ’ ಎಂದಿದ್ದಾರೆ.

ಇದೇ ವೃದ್ಧೆಯ ವಿಡಿಯೊವನ್ನು ‘ವೀಕೆಂಡ್ ಪ್ಲಾನ್’ ಎನ್ನುವ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಹಂಚಿಕೊಳ್ಳಲಾಗಿದೆ. ಕೇರಳದ ಕುಮಾರಕೊಂ ಜಾಗದಲ್ಲಿ ಹಿನ್ನೀರಿನಲ್ಲಿ ಇವರು ದೋಣಿಯಲ್ಲಿ ಚಹಾವನ್ನು ಮಾರುತ್ತಾರೆ. ಚಹಾದ ಜತೆಗೆ ಕೆಲವು ಸ್ನಾಕ್ಸ್‌ಗಳೂ ಇವರ ಬಳಿ ದೊರೆಯುತ್ತವೆ ಎಂದು ಒಕ್ಕಣೆಯಲ್ಲಿ ಮಾಹಿತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.