ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಕಿರಿಯ ಪುತ್ರ ಅಭಿಮನ್ಯು ಯಾದವ್ ಅವರ ನಿಶ್ಚಿತಾರ್ಥ ಭಾನುವಾರ ಸರಳವಾಗಿ ಭೋಪಾಲ್‌ನ ಅವರ ಮನೆಯಲ್ಲಿ ನೆರವೇರಿತು.
ಬೆಂಗಳೂರು: ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಕಿರಿಯ ಪುತ್ರ ಅಭಿಮನ್ಯು ಯಾದವ್ ಅವರ ನಿಶ್ಚಿತಾರ್ಥ ಭಾನುವಾರ ಭೋಪಾಲ್‌ನ ಅವರ ಮನೆಯಲ್ಲಿ ಸರಳವಾಗಿ ನೆರವೇರಿತು.
ಅಭಿಮನ್ಯು ಯಾದವ್, ವೈದ್ಯೆ ಡಾ. ಇಶಿತಾ ಯಾದವ್ ಅವರನ್ನು ವರಿಸುತ್ತಿದ್ದಾರೆ. ಅಭಿಮನ್ಯು ಸಹ ವೈದ್ಯರಾಗಿದ್ದಾರೆ.
ವಿಶೇಷವೆಂದರೆ ಸಿ.ಎಂ ಮೋಹನ್ ಯಾದವ್ ಅವರ ಮಗ ರೈತನ ಮಗಳನ್ನು ಮದುವೆಯಾಗುತ್ತಿದ್ದಾರೆ. ಇಶಿತಾ ಅವರು ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಸೆಲ್ಡಾ ಗ್ರಾಮದ ಪ್ರಗತಿಪರ ರೈತ ದಿನೇಶ್ ಯಾದವ್ ಅವರ ಮಗಳಾಗಿದ್ದಾರೆ.
ದಿನೇಶ್ ಯಾದವ್ ಅವರು ಖಾರ್ಗೋನ್ ಜಿಲ್ಲೆಯಲ್ಲಿ ರೈತಾಪಿ ವಲಯದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ ಎಂದು ದೈನಿಕ್ ಭಾಸ್ಕರ್ ವೆಬ್‌ಸೈಟ್ ವರದಿ ಮಾಡಿದೆ.
ಸಿಎಂ ಮೋಹನ್ ಯಾದವ್ ಅವರ ಹಿರಿಯ ಪುತ್ರ ಹಾಗೂ ಪುತ್ರಿಯ ಮದುವೆ ಈಗಾಗಲೇ ನೆರವೇರಿದೆ. ನಿಶ್ಚಿತಾರ್ಥ ವಿಷಯವನ್ನು ಮೋಹನ್ ಯಾದವ್ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.