
ರಾಂಚಿ: ಜಾರ್ಖಂಡ್‌ನ ನಡು ರಸ್ತೆಯೊಂದರಲ್ಲಿ ವಿಚಿತ್ರ ಜೀವಿಯೊಂದು ಪತ್ತೆಯಾಗಿದ್ದು, ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. ಇದರಿಂದ ವಿಚಲಿತಗೊಂಡಿರುವ ನಿರ್ಮಾಪಕಿ ಏಕ್ತಾ ಕಪೂರ್ ಸಹ ವಿಡಿಯೊ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ತುಣುಕು ವೈರಲ್ ಆಗಿದೆ. ಮಧ್ಯೆ ರಾತ್ರಿಯಲ್ಲಿ ರಸ್ತೆ ಮಧ್ಯೆ ಏಲಿಯನ್ ಸಾದೃಶ್ಯ ಜೀವಿಯೊಂದು ಪತ್ತೆಯಾಗಿದೆ.
30 ಸೆಕೆಂಡುಗಳ ಈ ವಿಡಿಯೊ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಜಾರ್ಖಂಡ್‌ನ ಹಜರಿಭಾಗ್‌ನ ಚಡ್ವಾ ಡ್ಯಾಮ್ ಸೇತುವೆ ಸಮೀಪದಲ್ಲಿ ಶನಿವಾರ ಕಂಡುಬಂದ ದೃಶ್ಯವನ್ನು ಸೆರೆಹಿಡಿಯಲಾಗಿದೆ.
ಹೆದ್ದಾರಿ ಮಧ್ಯೆ ಪ್ರತ್ಯಕ್ಷವಾಗಿದ್ದ ಈ ಜೀವಿಯನ್ನು ಹಲವಾರು ವಾಹನ ಸವಾರರು ವೀಕ್ಷಿಸುತ್ತಾರೆ. ಆದರೆ ಭಯದಿಂದಾಗಿ ಯಾರೂ ಕೂಡಾ ಹತ್ತಿರ ಹೋಗುವ ಗೋಜಿಗೆ ಹೋಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.