ADVERTISEMENT

Video| 20 ಅಡಿ ಆಳ ಸಮುದ್ರದಲ್ಲಿ ಭರತನಾಟ್ಯ; 14ರ ಬಾಲಕಿಯಿಂದ ವಿಶೇಷ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2025, 10:25 IST
Last Updated 22 ಡಿಸೆಂಬರ್ 2025, 10:25 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೃಪೆ: ಎಐ

ಪುದುಚೇರಿ: ಜಗತ್ತಿನಲ್ಲಿ ದಿನನಿತ್ಯ ಒಂದಿಲ್ಲ ಒಂದು ವಿಶೇಷ ದಾಖಲೆಗಳು, ವಿಭಿನ್ನ ಪ್ರತಿಭೆಗಳು ಬೆಳಕಿಗೆ ಬರುತ್ತಿರುತ್ತವೆ. ಇತ್ತೀಚೆಗೆ ಉಡುಪಿ ಜಿಲ್ಲೆಯ ವಿದುಷಿ ದೀಕ್ಷಾ ಎಂಬ ಯುವತಿ ನಿರಂತರವಾಗಿ 216 ಗಂಟೆಗಳ ಕಾಲ ಭರತನಾಟ್ಯ ಮಾಡಿ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‘ನಲ್ಲಿ ಹೆಸರು ದಾಖಲಿಸಿಕೊಂಡಿದ್ದರು. ಇದೀಗ, ಪುದುಚೇರಿಯ ಬಾಲಕಿಯೊಬ್ಬರು 20 ಅಡಿ ಆಳದ ಸಮುದ್ರದಲ್ಲಿ ಭರತನಾಟ್ಯ ಮಾಡಿ ಗಮನ ಸೆಳೆದಿದ್ದಾರೆ.

ADVERTISEMENT

ಪುದುಚೇರಿಯ 14 ವರ್ಷದ ಬಾಲಕಿಯೊಬ್ಬರು 20 ಅಡಿ ಆಳದ ಸಮುದ್ರದೊಳಗೆ ಭರತನಾಟ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಕುರಿತಾದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಅಶ್ವಿನ್ ಬಾಲಾಳು ಎಂಬ 14 ವರ್ಷದ ಯುವತಿ ಈ ವಿಶೇಷ ಸಾಧನೆ ಮಾಡಿದ್ದಾರೆ. ಭಾರತದ ಪ್ರಮುಖ ನೃತ್ಯಗಳಲ್ಲಿ ಒಂದಾಗಿರುವ ಭರತ ನಾಟ್ಯದ ಮೂಲಕ ಯುವತಿ ಗಮನಸೆಳೆದಿದ್ದಾರೆ.

ಅಂತರರಾಷ್ಟ್ರೀಯ ನೃತ್ಯ ದಿನ ನಿಮಿತ್ತ ಈ ಪ್ರದರ್ಶನ ನೀಡಿದ ಯುವತಿ, ಸಮುದ್ರಕ್ಕೆ ಫ್ಲಾಸ್ಟಿಕ್ ಎಸೆಯಬೇಡಿ ಎಂದು ತನ್ನ ನೃತ್ಯದ ಮೂಲಕ ಜಾಗೃತಿ ಮೂಡಿಸಿದ್ದಾರೆ. ಸಮುದ್ರವನ್ನು ಮಾಲಿನ್ಯ ಮಾಡದಿರಿ ಎಂಬ ಜಾಗೃತಿ ಸಂದೇಶ ನೀಡಿದ್ದರು.

ಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಮಾಡಿದ ಈ ನೃತ್ಯ ಮತ್ತೊಮ್ಮೆ ಹಂಚಿಕೆಯಾಗಿದ್ದು, ವ್ಯಾಪಕವಾಗಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.