ಸೂರತ್: ತರಕಾರಿ ಕಳ್ಳಿಯರೆಂದು ಇಬ್ಬರು ವ್ಯಾಪಾರಿಗಳ ಮೇಲೆ ಇಬ್ಬರು ಭದ್ರತಾ ಸಿಬ್ಬಂದಿ ಸಾರ್ವಜನಿಕವಾಗಿ ಮನಸೋ ಇಚ್ಛೆ ಥಳಿಸಿರುವ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ.
ಕಾನೂನು ಕೈಗೆತ್ತಿಕೊಂಡ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಠಾಣೆಗೆ ಕರೆತಂದು ‘ಆತಿಥ್ಯ’ ನೀಡಿದ ಪೊಲೀಸರ ಕ್ರಮದ ಕುರಿತ ವಿಡಿಯೊವನ್ನೂ ಕೆಲವರು ‘ಕೆಲ ಹೊತ್ತಿನ ನಂತರ’ ಎಂಬ ಶೀರ್ಷಿಕೆಯಡಿ ಹಂಚಿಕೊಂಡಿದ್ದಾರೆ.
ಸೂರತ್‌ನ ಸರ್ದಾರ್ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಮಹಿಳೆ ಮತ್ತು ಅವರ ಮಗಳನ್ನು ಕೂದಲು ಹಿಡಿದು ಎಳೆದು ತಂದ ಭದ್ರತಾ ಸಿಬ್ಬಂದಿ, ಕಾಲಿನಿಂದ ಒದ್ದಿದ್ದಾರೆ. ಇದರ ವಿಡಿಯೊ ವ್ಯಾಪಕವಾಗಿ ಹರಿದಾಡಿದೆ. ಇದಾದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇಬ್ಬರು ಭದ್ರತಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಅನಿಲ್ ತಿವಾರಿ ಮತ್ತು ಆದಿತ್ಯಸಿಂಗ್ ರಾಜೇಶ್ ಸಿಂಗ್ ಎಂದು ಗುರುತಿಸಲಾಗಿದೆ.
ಈ ಕುರಿತು ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಮಾಹಿತಿ ನೀಡಿ, ‘ಘಟನೆ ಏ. 6ರಂದು ನಡೆದಿದೆ. ಮಹಿಳೆ, ಅವರ ಪತಿ ಹಾಗೂ ಪುತ್ರಿ ಮಾರುಕಟ್ಟೆ ಪ್ರವೇಶಿಸಿದ್ದಾರೆ. ಈ ಸಂದರ್ಭದಲ್ಲಿ ಇವರು ತರಕಾರಿ ಕದ್ದಿದ್ದಾರೆ ಎಂದು ಆರೋಪಿಸಿದ್ದು ಜಗಳಕ್ಕೆ ಕಾರಣವಾಗಿದೆ. ನಂತರ ಮಹಿಳೆಯರನ್ನು ಈ ಇಬ್ಬರು ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರ ಇವರಿಬ್ಬರ ಮೇಲೆ ಮಹಿಳೆಯ ಪತಿ ಹಲ್ಲೆ ನಡೆಸಿದ್ದಾನೆ. ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.