ADVERTISEMENT

ಪ್ರೀತಿಪಾತ್ರರಿಗಾಗಿ ಕೈಯಲ್ಲೇ ತಯಾರಿಸಿ ವಿಶೇಷವಾದ ಹೂಗುಚ್ಛ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2026, 12:50 IST
Last Updated 7 ಫೆಬ್ರುವರಿ 2026, 12:50 IST
<div class="paragraphs"><p>ಹೂಗುಚ್ಛ  </p></div>

ಹೂಗುಚ್ಛ

   

ಫೆಬ್ರುವರಿ ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಾಗೋದು ಪ್ರೇಮಿಗಳ ದಿನ. ಈ ದಿನಕ್ಕಾಗಿ ಪ್ರೇಮಿಗಳು ಒಂದು ತಿಂಗಳ ಮುಂಚಿತವಾಗಿಯೇ ತಯಾರಿ ನಡೆಸುತ್ತಾ ಇರುತ್ತಾರೆ. ಈ ದಿನದಂದು ಕೆಂಪು ಗುಲಾಬಿ, ಉಡುಗೊರೆ ಹಾಗೂ ಚಾಕೊಲೇಟ್‌ ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ಇಂದಿನಿಂದ (ಫೆ.7) ಪ್ರೇಮಿಗಳ ವಾರವು ಶುರುವಾಗಿದೆ. ಫೆ.7ರಿಂದ 14ರವರೆಗೂ ಪ್ರೇಮಿಗಳು ಒಂದೊಂದು ದಿನ ಒಂದೊಂದು ಆಚರಣೆ ಮಾಡುತ್ತಾರೆ. ಇಂದು ರೋಸ್‌ ಡೇ. ಪ್ರೇಮಿಗಳು ಇಂದು ತಮ್ಮ ತಮ್ಮ ಪ್ರೀತಿಪಾತ್ರರಿಗೆ ಹೂಗುಚ್ಛ ನೀಡಿ ಪ್ರೇಮ ನಿವೇದನೆ ಮಾಡುತ್ತಾರೆ. ಹೂಗುಚ್ಛವನ್ನು ನೋಡುತ್ತಿದ್ದಂತೆ ಸಂಗಾತಿ ಸಖತ್‌ ಖುಷಿಯಾಗುತ್ತಾರೆ. ಆದರೆ, ಕೇವಲ ಗುಲಾಬಿ ಹೂಗುಚ್ಛ ನೀಡುವ ಬದಲು, ನಿಮ್ಮ ಕೈಯಾರೆ ಮನೆಯಲ್ಲೇ ಹೂಗುಚ್ಛವನ್ನು ರೆಡಿ ಮಾಡಿ ಕೊಟ್ಟರೆ ಸಂಗಾತಿಗೆ ಅಚ್ಚರಿ ಮೂಡಿಸಬಹುದು.

ADVERTISEMENT

ಗುಲಾಬಿಯ ಪ್ರತಿಯೊಂದು ಬಣ್ಣವು ವಿಭಿನ್ನ ಸಂದೇಶವನ್ನು ನೀಡುತ್ತದೆ. ಇಂದು ಹುಡುಗರು ಮತ್ತು ಹುಡುಗಿಯರು ಹಾಗೂ ದಂಪತಿಗಳು ಗುಲಾಬಿ ದಿನವನ್ನು ಆಚರಿಸುವುದನ್ನು ಕಾಣಬಹುದು. ಅದರಲ್ಲೂ ಈ ದಿನವನ್ನು ಇನ್ನು ವಿಶೇಷವಾಗಿಸಲು ಈ ರೀತಿಯ ಹೂಗುಚ್ಛವನ್ನು ಮನೆಯಲ್ಲೇ ರೆಡಿ ಮಾಡಿ ಕೊಡಬಹುದು.

ಮೊದಲು ಎಲ್ಲಾ ವಿಧದ ಹೂವುಗಳನ್ನು ಸಂಗ್ರಹಿಸಿ. ಬಳಿಕ ಒಂದೊಂದಾಗಿ ಅದನ್ನು ಜೋಡಿಸುತ್ತಾ ಹೋಗಿ. ಕೆಂಪು, ಹಳದಿ, ಬಿಳಿ, ಕೇಸರಿ, ನೇರಳೆ ಹೀಗೆ ಬಣ್ಣ ಬಣ್ಣದ ಹೂವುಗಳನ್ನು ಜೋಡಿಸಿ. ಅದಕ್ಕೆ ಒಂದು ಸುಂದರವಾದ ರಿಬ್ಬನ್‌ನಿಂದ ಕಟ್ಟಿ. ಹೀಗೆ ಭಿನ್ನ ವಿಭಿನ್ನದ ಹೂವುಗಳಿಂದ ಹೂಗುಚ್ಛವನ್ನು ಮನೆಯಲ್ಲೇ ರೆಡಿ ಮಾಡಬಹುದು. ಬಹು ಮುಖ್ಯವಾಗಿ ಹೂಗಳನ್ನು ತಾಜಾವಾಗಿಡಲು ಅದರ ಕಾಂಡಗಳನ್ನು ಕತ್ತರಿಸಿ. ಇದರಿಂದ ನೀರು ಸಾರಾಗವಾಗಿ ಮೇಲಕ್ಕೆ ಹೋಗಲು ಸಹಾಯವಾಗುತ್ತವೆ. ಇದರಿಂದ ಹೂವು ಮತ್ತು ಅದರ ಎಲೆಗಳು ಹೆಚ್ಚು ಕಾಲ ಹೊಸದಾಗಿ ಕಾಣುವಂತೆ ಮಾಡುತ್ತದೆ.

ನೀರಿನ ಬಗ್ಗೆ ಗಮನವಿರಲಿ

ಸಾಮಾನ್ಯವಾಗಿ ಹೂವುಗಳು ಗಾಳಿಗೆ ಬಹುಬೇಗನೇ ಹಾಳಾಗುತ್ತವೆ. ಹೀಗಾಗಿ ಹೂಗುಚ್ಛವನ್ನು ರೆಡಿ ಮಾಡುವ ಮೊದಲು ನೀರಿನ ಕಡೆ ಗಮನಕೊಡಿ. ಎರಡು ದಿನಗಳಿಗೊಮ್ಮೆ ನೀರನ್ನು ಬದಲಾಯಿಸುವುದರಿಂದ ಕಾಂಡಗಳು ತೇವಾಂಶದಿಂದ ಕೂಡಿರುತ್ತದೆ. ಹೀಗೆ ಮಾಡುವುದರಿಂದ ಹೂಗಳ ಬಣ್ಣಗಳು ಪ್ರಕಾಶಮಾನವಾಗಿರುತ್ತವೆ.

ಹೂವುಗಳನ್ನು ಈ ವಸ್ತುಗಳಿಂದ ದೂರವಿಡಿ

ಹೂಗುಚ್ಛವನ್ನು ರೆಡಿ ಮಾಡಿದ ಬಳಿಕ ಸೂರ್ಯನ ಬೆಳಕು, ಹೀಟರ್‌ಗಳು, ಓವನ್‌ಗಳು ಹೀಗೆ ಶಾಖ ಬಿಡುವ ಎಲೆಕ್ಟ್ರಾನಿಕ್ಸ್‌ ವಸ್ತುಗಳಿಂದ ದೂರವಿಡಿ. ಇದು ನಿಮ್ಮ ಕೆಲಸಕ್ಕೆ ತೊಂದರೆ ಆಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.