ADVERTISEMENT

ಕಾಫಿ ಮೌಲ್ಯವರ್ಧನೆಗೆ ತುಡಿದ ಸಿದ್ದಾರ್ಥ

ಪ್ರಜಾವಾಣಿ ವಿಶೇಷ
Published 30 ಜುಲೈ 2019, 10:50 IST
Last Updated 30 ಜುಲೈ 2019, 10:50 IST
   

ಚಿಕ್ಕಮಗಳೂರು: ಉದ್ಯಮಿ, ಕಾಫಿ ಬೆಳೆಗಾರ ವಿ.ಜಿ.ಸಿದ್ದಾರ್ಥ್ಅವರು ಕಾಫಿ ಉದ್ಯಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದವರು. ಕಾಫಿ ಬೆಳೆಯುವ ರೀತಿ, ಮಾರಾಟ ಮತ್ತುಖರೀದಿಯಲ್ಲಿ ತಮ್ಮದೇ ಸೂತ್ರಗಳನ್ನು ಅಳವಡಿಸಿ ಉದ್ಯಮಕ್ಕೆ ಹೊಸತನ ತಂದುಕೊಟ್ಟಿದ್ದರು.

ಮೂಡಿಗೆರೆ ತಾಲ್ಲೂಕಿನ ಗೌತಹಳ್ಳಿಯ (ಚೇತನಹಳ್ಳಿ ಎಸ್ಟೇಟ್‌) ಗಂಗಯ್ಯ ಹೆಗ್ಡೆ ಮತ್ತು ವಾಸಂತಿ ದಂಪತಿ ಪುತ್ರ ಸಿದ್ದಾರ್ಥ.ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಪುತ್ರಿ ಮಾಳವಿಕಾ ಅವರನ್ನು ಮದುವೆಯಾಗಿದ್ದರು. ನಗರದಲ್ಲಿ ಕಾಫಿ ಡೇ ಗ್ಲೋಬಲ್‌ ಲಿಮಿಟೆಡ್‌ ಘಟಕ, ಸೆರಾಯ್‌ ಐಷಾರಾಮಿ ಹೋಟೆಲ್‌ ಮತ್ತು ಆ್ಯಂಬರ್‌ ವ್ಯಾಲಿ ಶಾಲೆ ಹಾಗೂಜಿಲ್ಲೆಯ ವಿವಿಧೆಡೆ ಕಾಫಿ ತೋಟಗಳು ಅವರ ಒಡೆತನದಲ್ಲಿ ಇವೆ.

ಬೆಳೆಗಾರರೊಂದಿಗೆ ಸಿದ್ದಾರ್ಥ ಅವರ ಒಡನಾಟ, ಕಾರ್ಯನಿರ್ವಹಣೆ ಪರಿ ಕುರಿತುಕರ್ನಾಟಕ ಬೆಳೆಗಾರರ ಒಕ್ಕೂಟದ (ಕೆಜಿಎಫ್‌) ಅಧ್ಯಕ್ಷರೂ ಆಗಿರುವ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಾನಹಳ್ಳಿಯ ಬೆಳೆಗಾರರ ಯು.ಎಂ.ತೀರ್ಥಮಲ್ಲೇಶ್‌ ‘ಪ್ರಜಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡರು.

ADVERTISEMENT

‘ಆರಂಭದ ದಿನಗಳಲ್ಲಿಸಿದ್ದಾರ್ಥ ಒಬ್ಬ ಸಾಮಾನ್ಯ ಬೆಳೆಗಾರರಾಗಿದ್ದರು. ಕೆಫೆ ಕಾಫಿ ಡೇ ಸ್ಥಾಪಿಸಿ ಕಾಫಿ ಘಮಲನ್ನು ವಿಶ್ವದೆಲ್ಲೆಡೆ ಪಸರಿಸಿದರು. ಚಿಕೋರಿ ರಹಿತ ಶುದ್ಧ ಕಾಫಿ ಪೇಯವನ್ನು ಈ ಕೆಫೆಗಳಲ್ಲಿ ಸಿಗುವಂತೆ ಮಾಡಿ ಉದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟರು.

‘ಕಾಫಿಯ ಮೌಲ್ಯವರ್ಧನೆಗೆ ಒತ್ತು ನೀಡುವುದರೊಂದಿಗೆ,ಬೆಳೆಗಾರರಿಗೆ ವಿವಿಧೆಡೆಗಳಿಂದಹೊಸ ತಳಿಗಳನ್ನುಪರಿಚಯಿಸಿದರು. ನಾವು ಬೆಳೆದ ಬೆಳೆ, ನಾವು ಸಿದ್ಧಪಡಿಸಿದ ಪದಾರ್ಥಗಳನ್ನು ನಾವೇ ಮಾರಾಟ ಮಾಡಲು ದಾರಿ ಕಂಡುಕೊಳ್ಳಬೇಕುಎಂಬುದು ಅವರ ಸಿದ್ಧಾಂತ.1993ರಲ್ಲಿ ಅಮಾಲ್ಗಮೇಟೆಡ್‌ ಬೀನ್‌ ಕಂಪೆನಿ ಲಿಮಿಟೆಡ್‌ (ಎಬಿಸಿಎಲ್‌) ಸ್ಥಾಪಿಸಿದರು. ಕಾಫಿ ಬೆಳೆಯುವ, ಬಳಕೆಯಾಗುವ ಬಹುತೇಕ ಕಡೆ ಈ ಸಂಸ್ಥೆಯ ಶಾಖೆಗಳು ಇದ್ದವು.

‘ಕಾಫಿ ಬೆಳೆಗಾರರು ಬೆಳೆದುದೆಲ್ಲವನ್ನೂ ಒಮ್ಮೆಲೆ ಮಾರಬಾರದು. ಬೆಲೆ ಗಮನಿಸಿ ಮಾರಾಟ ಮಾಡಬೇಕು ಎಂಬುದು ಅವರು ಹೇಳುತ್ತಿದ್ದಕಿವಿಮಾತು. ಎಬಿಸಿಯಲ್ಲಿ ಬೆಳೆಯನ್ನು ಮಾರಾಟ ಮಾಡದೇ ವ್ಯಾಪಾರ ಒಪ್ಪಂದ ಮಾಡಿಕೊಂಡು ಇರಿಸಲು (ಕನ್‌ಸೈನ್‌ಮೆಂಟ್‌) ಅವಕಾಶ ಇತ್ತು.ಎಬಿಸಿಗೆಕಾಫಿ ಮಾರಿದರೆ ದುಡ್ಡು ಪಕ್ಕಾಎಂಬುದು ಜನಜನಿತವಾದ ಮಾತು.‘ಸಿದ್ದಾರ್ಥ ಓರ್ವ ಕನಸುಗಾರ. ಬೆಳೆಗಾರರೊಂದಿಗೆ ಉತ್ತಮ ಬಾಂಧವ್ಯ ಇತ್ತು. ದೊಡ್ಡಮಟ್ಟಕ್ಕೆ ಬೆಳೆದಿದ್ದರು’.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.