ADVERTISEMENT

ದೇವರಿಗೆ ದೀಪ ಹಚ್ಚುವುದರ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ

ಎಲ್.ವಿವೇಕಾನಂದ ಆಚಾರ್ಯ
Published 20 ನವೆಂಬರ್ 2025, 5:32 IST
Last Updated 20 ನವೆಂಬರ್ 2025, 5:32 IST
   

ದೀಪ ಹಚ್ಚುವುದು ಹಿಂದೂ ಸಂಪ್ರದಾಯದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ದೇವರಿಗೆ ಪೂಜೆ ಸಲ್ಲಿಸುವಾಗ ದೀಪ ಹಚ್ಚಲಾಗುತ್ತದೆ. ದೀಪ ಹಚ್ಚುವುದರಿಂದ ಸಿಗುವ ಲಾಭಗಳೇನು ಎಂಬುದನ್ನು ನೋಡೋಣ. 

  • ದೇವರಿಗೆ ಪೂಜೆ ಸಲ್ಲಿಸುವಾಗ ಮಣ್ಣಿನಿಂದ ತಯಾರಿಸಿದ ದೀಪ ಹಚ್ಚುವುದರಿಂದ ಶುಭವಾಗುತ್ತದೆ.

  • ಮಣ್ಣಿನಿಂದ ತಯಾರಿಸಿದ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಫಲಿತಾಂಶ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. 

    ADVERTISEMENT
  • ದೀಪ ಹಚ್ಚುವುದರಿಂದ ಮನೆಯವರಿಗೆ ಇರುವ ತೊಂದರೆ ಹಾಗೂ ದೋಷಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.

  • ದೇವರ ಎಡ ಅಥವಾ ಬಲ ಭಾಗದಲ್ಲಿ ದೀಪವನ್ನು ಹಚ್ಚಿ, ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.

  • ದೀಪ ಹಚ್ಚಲು ಹಸುವಿನ ಶುದ್ಧ ತುಪ್ಪ ಬಳಸುವುದರಿಂದ ಒಳಿತಾಗುತ್ತದೆ. ಇದರಿಂದ ಶುಭ ಫಲಗಳು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

  • ಅಡುಗೆಗೆ ಉಪಯೋಗಿಸುವ ಎಣ್ಣೆಯನ್ನು ಬಳಸಿ ಕೂಡಾ ದೀಪ ಹಚ್ಚಬಹುದು.

  • ಎಳ್ಳೆಣ್ಣೆಯಿಂದಲೂ ದೀಪ ಹಚ್ಚಬಹುದು. ಇದು ಶನಿ ದೇವರಿಗೆ ಹೆಚ್ಚು ಸೂಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.