
ಚಿತ್ರ: ಗೆಟ್ಟಿ
ಯಾವುದೇ ಕೆಲಸ ಮಾಡಬೇಕಾದರೆ ಏಕಾಗ್ರತೆ ಬಹಳ ಮುಖ್ಯ. ಏಕಾಗ್ರತೆ ಪಡೆಯಲು ಯಾವ ಮಂತ್ರಗಳನ್ನು ಪಠಿಸಬೇಕು ಎಂಬುದನ್ನು ಜ್ಯೋತಿಷದಲ್ಲಿ ತಿಳಿಸಿದೆ. ಹಾಗಾದರೆ ಏಕಾಗ್ರತೆ ಪಡೆಯಲು ಪಠಿಸಬೇಕಾದ ಮಂತ್ರಗಳು ಯಾವುವು ಎಂಬುದನ್ನು ತಿಳಿಯೋಣ.
ಮಕ್ಕಳಲ್ಲಿ ಏಕಾಗ್ರತೆ ಕೊರತೆ ಹೆಚ್ಚಿರುತ್ತದೆ. ಮನಸ್ಸು ಬೇರೆ ಬೇರೆ ವಿಚಾರಗಳ ಕಡೆಗೆ ಆಕರ್ಷಿತಗೊಳ್ಳುತ್ತದೆ. ಅವರು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಲು ಏಕಾಗ್ರತೆ ಸಾಧಿಸಬೇಕಾಗುತ್ತದೆ. ಆಗ ಮಂತ್ರ ಪಠಣೆ ಮಾಡುವುದರಿಂದ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು.
ಒಂದು ವೇಳೆ ಮಕ್ಕಳು ಈ ಮಂತ್ರ ಪಠಿಸದಿದ್ದರೆ, ಅವರ ತಾಯಂದಿರು ಶ್ರದ್ದೆಯಿಂದ ಮಂತ್ರವನ್ನು ಜಪಿಸಿದರೆ ಮಕ್ಕಳಿಗೂ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.
ಮಂತ್ರ:
’ಓಂ ವೆಂಕಟನಾಥಾಯ ವಿದ್ಮಹೆ ತಿಮ್ಮಣ್ಣಪುತ್ರಾಯ ದಿಮಹಿ ತನ್ನೂ ರಾಘವೇಂದ್ರ ಪ್ರಚೋದಯಾತ್’
‘ಓಂ ಪ್ರಹಲ್ಲಾದಾಯ ವಿದ್ಮಹೆ ವ್ಯಾಸರಾಜಾಯ ಧೀಮಹಿ. ತನ್ಮೂ ರಾಘವೇಂದ್ರ ಪ್ರಚೋ ದಯಾತ್’
ಈ ಮಂತ್ರವನ್ನು ಪ್ರತಿನಿತ್ಯ 21 ಬಾರಿ ಜಪಿಸುವುದರಿಂದ ಮನುಷ್ಯರಿಗೆ ಜ್ಞಾನ ವೃದ್ದಿಯಾಗುವುದರ ಜೊತೆಗೆ ಸರಸ್ವತಿಯ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.