
ಧನುರ್ಮಾಸದಲ್ಲಿ ದೇವರ ಪೂಜೆಗೆ ಹೇಳಿ ಮಾಡಿಸಿದ ಕಾಲ. ಬೆಳಿಗ್ಗೆ ಎದ್ದು ದೇವರ ಪೂಜೆ ಮಾಡುವುದರಿಂದ ಶುಭ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷ ಶಾಸ್ತ್ರದಲ್ಲಿ ಹೇಳಲಾಗಿದೆ. ಧನುರ್ಮಾಸವು ರಾಶಿಗಳಿಗೆ ಶುಭ ತಂದುಕೊಡಲಿದೆ. ಯಾವ ಯಾವ ರಾಶಿಗೆ ಏನೆಲ್ಲ ಶುಭಫಲ ಸಿಗಲಿದೆ ಎಂಬುದನ್ನು ತಿಳಿಯೋಣ.
ಮೇಷ ರಾಶಿ: ಧನು ರಾಶಿಯಲ್ಲಿ ಸೂರ್ಯನ ಸಂಚಾರವಿರುತ್ತದೆ. ಇದರಿಂದಾಗಿ ಮೇಷ ರಾಶಿಯವರಿಗೆ ಅದೃಷ್ಟದ ಮತ್ತು ಲಾಭ ಉಂಟಾಗಲಿದೆ. ಆದಾಯ ಹೆಚ್ಚಾಗಲಿದೆ. ಈ ರಾಶಿಯವರು ತಂದೆಯಿಂದ ಮಾರ್ಗದರ್ಶನ ಪಡೆಯುವುದು ಶುಭವೆಂದು ಪರಿಗಣಿಸಲಾಗುತ್ತದೆ.
ವೃಷಭ ರಾಶಿ: ಸೂರ್ಯನು ಧನಸ್ಸು ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ ವೃಷಭ ರಾಶಿಯವರಿಗೆ ಶುಭವಾಗಲಿದೆ. ಈ ರಾಶಿಯವರಿಗೆ ಆಯಸ್ಸು, ಆರೋಗ್ಯಕ್ಕೆ ಸಂಬಂಧಿಸಿದಂತೆ ಸುಧಾರಣೆ ಕಾಣಲಿದ್ದಾರೆ.
ಮಿಥುನ ರಾಶಿ: ಈ ರಾಶಿಯವರು ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಮೋಸವಾಗುವ ಸಾಧ್ಯತೆ ಇರುತ್ತದೆ. ದಾಂಪತ್ಯದಲ್ಲಿ ವಾದವಿವಾದ ಸರಿಯಲ್ಲ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಜಾಗೃತೆ ವಹಿಸಬೇಕು.
ಕಟಕ ರಾಶಿ: ಈ ರಾಶಿಯವರಿಗೆ ಶತ್ರು ನಿವಾರಣೆನ, ಆರೋಗ್ಯದಲ್ಲಿ ಸುಧಾರಣೆ ಹಾಗೂ ಕೆಲಸದಲ್ಲಿ ಒತ್ತಡ ಕಡಿಮೆಯಾಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿ ಸೂರ್ಯನ ಸ್ವಭಾವಕ್ಕೆ ಹೊಂದುವ ರಾಶಿಯಾಗಿರುವುದರಿಂದ, ಪ್ರೇಮ ಹಾಗೂ ದಾಂಪತ್ಯಜೇವನದ ಸಂಬಂಧಗಳು ಗಟ್ಟಿಯಾಗಲಿವೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕುಟುಂಬದಲ್ಲಿ ಕಲಹವಾಗುವ ಸಾಧ್ಯತೆ ಇರುತ್ತದೆ. ಸಂವಹನ ಮಾಡುವಾಗ ಜಾಗ್ರತೆ ವಹಿಸಿರಿ.
ತುಲಾ ರಾಶಿ: ತುಲಾ ರಾಶಿಯವರಿಗೆ ಕುಟುಂಬದಲ್ಲಿ ಸಂತೋಷ ಲಭಿಸಲಿದೆ. ಹೊಸ ಕಲಿಕೆ ಚಿಕ್ಕ ಪ್ರಯಾಣದ ಯೋಗ ಬರಲಿದೆ.
ವೃಶ್ಚಿಕ ರಾಶಿ: ಈ ರಾಶಿಯವರು ಆರ್ಥಿಕವಾಗಿ ಸುಧಾರಣೆ ಕಾಣಲಿದ್ದಾರೆ. ಹೊಸ ಆಸ್ತಿ ಖರೀದಿಗೆ ದಾರಿಯಾಗಬ ಹುದು.
ಧನಸ್ಸು ರಾಶಿ: ಈ ರಾಶಿಯವರಿಗೆ ಸಿಡುಕು ಸ್ವಭಾವ ಬರಲಿದೆ. ಸಣ್ಣ ಸಣ್ಣ ವಿಚಾರಗಳಿಗೂ ಜಗಳವಾಗುವ ಸಾಧ್ಯತೆ ಇದೆ. ಆದ್ದರಿಂದ ಸಾಧ್ಯವಾದಷ್ಟು ತಾಳ್ಮೆಯಿಂದ ಇರಿ.
ಮಕರ ರಾಶಿ: ಮಕರ ರಾಶಿಯವರಿಗೆ ಆರ್ಥಿಕ ಪ್ರಗತಿಯಾಗಲಿದೆ. ಮನೆಯಲ್ಲಿ ಸುಖ,ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನಿಮ್ಮದಾಗಲಿದೆ.
ಕುಂಭ ರಾಶಿ : ಈ ರಾಶಿಯವರು ಸ್ನೇಹಿತರೊಂದಿಗೆ ಅಂತರ ಕಾಯ್ದುಕೊಳ್ಳುವುದು ಉತ್ತಮ. ಅನಗತ್ಯ ಖರ್ಚು ಉಂಟಾಗುವ ಸಾಧ್ಯತೆ ಇರುತ್ತದೆ.
ಮೀನ ರಾಶಿ: ಈ ರಾಶಿಯವರ ವೃತ್ತಿ ಜೀವನ ಇನ್ನಷ್ಟು ಎತ್ತರಕ್ಕೆ ಕೊಂಡ್ಯುತ್ತದೆ. ದಾಂಪತ್ಯ ಜೀವನದಲ್ಲಿ ಸುಧಾರಣೆ ಕಾಣಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.