
ಚಿತ್ರ: ಗೆಟ್ಟಿ
ಹಿಂದೂ ಸಂಪ್ರದಾಯದ ಪ್ರಕಾರ ಸಂಜೆ ಸಮಯದಲ್ಲಿ ನಿದ್ದೆ ಮಾಡುವುದು ಸೂಕ್ತವಲ್ಲ. ಸಂಜೆ ಸಮಯದಲ್ಲಿ ಲಕ್ಷ್ಮೀ ದೇವಿ ಮನೆಗೆ ಆಗಮಿಸುತ್ತಾಳೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಸಮಯದಲ್ಲಿ ನಿದ್ದೆ ಮಾಡಬಾರದು ಎಂಬ ನಂಬಿಕೆ ಇದೆ. ಈ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ. ಈ ಪದ್ದತಿಯ ಹಿಂದಿನ ಮಹತ್ವವೇನು ಎಂಬುದನ್ನು ನೋಡೋಣ.
ಹಿಂದೂ ಸಾಂಪ್ರದಾಯದ ಪ್ರಕಾರ ಮುಸ್ಸಂಜೆ ದೀಪ ಹಚ್ಚಲು ಅತ್ಯಂತ ಪವಿತ್ರ ಸಮಯವಾಗಿದೆ. ಈ ವೇಳೆ ದೇವತೆಗಳು ಭೂಮಿಗೆ ಭೇಟಿ ನೀಡಿ ಮನೆಯ ಸದಸ್ಯರಿಗೆ ಆಶೀರ್ವಾದ ಮಾಡುತ್ತಾರೆ. ಆದ್ದರಿಂದ ಈ ಸಮಯದಲ್ಲಿ ನಿದ್ದೆ ಮಾಡುವುದು ಸೂಕ್ತವಲ್ಲವೆಂದು ಹೇಳಲಾಗುತ್ತದೆ.
ಸಂಜೆಯ ಸಮಯದಲ್ಲಿ ದುರ್ಗಾ, ಲಕ್ಷ್ಮೀ ಹಾಗೂ ಸರಸ್ವತಿ ಮನೆಯೊಳಗೆ ಪ್ರವೇಶಿಸಿ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಮಕ್ಕಳು ಓದಿನತ್ತ ಗಮನ ಹರಿಸಬೇಕು. ಹಿರಿಯರು ಮಂತ್ರ ಪಠಿಸುವುದು ಭಕ್ತಿ ಗೀತೆಗಳನ್ನು ಕೇಳುವುದು ಹಾಗೂ ದೇವರ ಪೂಜೆ ಮಾಡುವುದರಿಂದ ದೇವತೆಗಳ ಆಶೀರ್ವಾದ ಲಭಿಸಿ ಸಕಲ ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಸಂಜೆ ವೇಳೆ ಮಲಗುವುದರಿಂದ ದಾರಿದ್ರ್ಯ ಬರುತ್ತದೆ ಎಂಬ ನಂಬಿಕೆ ಇದೆ.
ಸಂಜೆ ವೇಳೆ ಮಲಗುವುದರಿಂದ ಜೀರ್ಣಾಂಗ ವ್ಯವಸ್ಥೆ ನಿಧಾನಗೊಂಡು ಅಜೀರ್ಣ ಸಮಸ್ಯೆಗಳು ಉಂಟಾಗಬಹುದು. ಇದರಿಂದ ರಾತ್ರಿಯ ನಿದ್ರಾಹೀನತೆ ಉಂಟಾಗಬಹುದು.
ಸಂಜೆ ವೇಳೆ ದೈಹಿಕ ಚಟುವಟಿ ಅಥವಾ ಕುಟುಂಬ, ಸ್ನೇಹಿತರೊಂದಿಗೆ ಮಾತನಾಡಿ ಸಮಯ ಕಳೆಯುವುದು ಉತ್ತಮ ಎಂದು ಹೇಳಲಾಗುತ್ತದೆ.
ಆಲಸ್ಯ ವ್ಯಕ್ತಿಯನ್ನು ಸೋಮಾರಿಯನ್ನಾಗಿಸುತ್ತದೆ. ಸಂಜೆ ಮಲಗುವುದರಿಂದ ಆಲಸ್ಯ ಮತ್ತು ತಾಮಸಿಕ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಆದ್ದರಿಂದ ಹಿರಿಯರು ಸಂಜೆ ಸಮಯದಲ್ಲಿ ಮನೆಯೊಳಗೆ ಮಲಗಬಾರದು ಎಂದು ಹೇಳುತ್ತಾರೆ. ಅಲ್ಲದೇ ಶಾಸ್ತ್ರಗಳೂ ಇದನ್ನೇ ಹೇಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.