
ಚಿತ್ರ;ಗೆಟ್ಟಿ
2026ಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷ ಬರಮಾಡಿಕೊಳ್ಳಲು ಜಗತ್ತು ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಕೆಲವು ವಸ್ತುಗಳು ಮನೆಯಲ್ಲಿ ಇರಬಾರದು ಎಂದು ಹೇಳಲಾಗುತ್ತದೆ. ಜ್ಯೋತಿಷದ ಪ್ರಕಾರ ಹೊಸ ವರ್ಷಕ್ಕೂ ಮೊದಲು ಮನೆಯ ಒಳಗೆ ಯಾವ ವಸ್ತುಗಳು ಇರಬಾರದು ಎಂಬುದನ್ನು ನೋಡೋಣ.
ಹಳೆಯ, ಹರಿದು ಹೋದ ಅಥವಾ ಕಿತ್ತು ಹೋದ ಚಪ್ಪಲಿ, ಹರಿದ ಅಥವಾ ಉಪಯೋಗಕ್ಕೆ ಬಾರದ ಬಟ್ಟೆಗಳು ಮನೆಯಲ್ಲಿದ್ದರೆ ಮೊದಲು ಅವುಗಳನ್ನು ಮನೆಯಿಂದ ಹೊರಕ್ಕೆ ಹಾಕಿ. ಇದರಿಂದ ನಿಮ್ಮ ದಾರಿದ್ರ್ಯ ನಿವಾರಣೆ ಯಾಗುತ್ತದೆ.
ನಿಂತು ಹೋದ ಅಥವಾ ಮುರಿದ ಗಡಿಯಾರವನ್ನು ದುರಸ್ತಿ ಮಾಡಿಸಿ ಅಥವಾ ಹೊರಕ್ಕೆ ಹಾಕಿರಿ. ಇದರಿಂದ ನಿಮ್ಮ ಅದೃಷ್ಟ ಕುಲಾಯಿಸುತ್ತದೆ.
ಮುರಿದ ಅಥವಾ ಭಿನ್ನವಾಗಿರುವ ದೇವರ ವಿಗ್ರಹಗಳು ಮನೆಯಲ್ಲಿದ್ದರೆ, ಅವುಗಳನ್ನು ಹರಿಯುವ ನೀರಿಗೆ ಬಿಡಿ.
ಒಡೆದು ಹೋಗಿರುವ ದೇವರ ಫೋಟೋಗಳಿದ್ದರೆ, ಅವುಗಳನ್ನು ಒಂದೆಡೆ ಇಟ್ಟು ಕರ್ಪೂರ ಮತ್ತು ಅರಳಿ ಕಡ್ಡಿಗಳಿಂದ ಸುಟ್ಟು ಹಾಕುವುದು. ಆ ಬೂದಿಯನ್ನು ಹರಿಯುವ ನೀರಿನಲ್ಲಿ ಬಿಡಿ. ಇದರಿಂದ ನಿಮ್ಮ ಬಡತನ ನಿವಾರಣೆಯಾಗುತ್ತದೆ.
ಯಾವುದೇ ಕಾರಣಕ್ಕೂ ದೇವರುಗಳ ಹಳೆಯ ಅಥವಾ ಒಡೆದು ಹೋಗಿರುವ ಫೋಟೋಗಳನ್ನು ಚರಂಡಿ ಕೊಳಕು ಪ್ರದೇಶ ಅಥವಾ ಯಾವುದಾದರೂ ದೇವಸ್ಥಾನದ ಮರದ ಕೆಳಗಡೆ ಇಡುವುದನ್ನು ತಪ್ಪಿಸಿ.
ಮನೆಯಲ್ಲಿ ಪೀಠೋಪಕರಣಗಳು. ಕನ್ನಡಿಯಂತಹ ವಸ್ತುಗಳು ಹೊಡೆದು ಹೋಗಿದ್ದರೆ, ಹೊರಕ್ಕೆ ಹಾಕಿ. ಇಲ್ಲವಾದಲ್ಲಿ ಆ ಮನೆಗೆ ಅಶುಭ ಫಲಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ.
ಹಳೆಯ ಮುರಿದು ಹೋಗಿರುವ ಪ್ಲಾಸ್ಟಿಕ್ ವಸ್ತುಗಳಿದ್ದರೆ, ಅವುಗಳನ್ನು ಸಹ ಹೊರಕ್ಕೆ ಹಾಕಿರಿ. ಇದರಿಂದ ನಿಮ್ಮ ದಾರಿದ್ರ್ಯ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.