
ಚಿತ್ರ: ಗೆಟ್ಟಿ
ಗ್ರಹಗಳ ಚಲನೆ ರಾಶಿಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪ್ರಭಾವ ಬೀರುತ್ತವೆ. ಇದೇ 2025ರ ಡಿಸೆಂಬರ್ 12ರಂದು ಮಂಗಳ ಧನಸ್ಸು ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ. ಈ ರಾಶಿಗಾಗುವ ಲಾಭ ಹಾಗೂ ನಷ್ಟಗಳೇನು ಎಂಬುದನ್ನು ನೋಡೋಣ.
ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ ಮಂಗಳನನ್ನು ಗ್ರಹಗಳ ಯೋಧ ಎಂದು ಕರೆಯಲಾಗುತ್ತದೆ. ಈ ಗ್ರಹ ಪುರುಷ ಸ್ವಭಾವವಿರುವ ಕ್ರಿಯಾತ್ಮಕ ಮತ್ತು ಪ್ರಬಲ ಗ್ರಹವಾಗಿದೆ. ಧನು ರಾಶಿಯಲ್ಲಿ ಮಂಗಳನ ಸಂಚಾರವು ಧನಾತ್ಮಕ ಮತ್ತು ಋಣಾತ್ಮಕವಾದ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ.
ಮಂಗಳ ಗ್ರಹ ಮೇಷ ರಾಶಿಯಲ್ಲಿ ತನ್ನದೇ ಆದ ಮೂಲ ತ್ರಿಕೋನ ರಾಶಿಯಲ್ಲಿ ಇದ್ದರೆ, ಅದು ಹೆಚ್ಚು ಉತ್ಪಾದಕ ಫಲಿತಾಂಶಗಳನ್ನು ನೀಡುತ್ತದೆ. ತಾನು ಆಳುವ ಚಿಹ್ನೆಗಳಾದ ಮೇಷ ಅಥವಾ ವೃಶ್ಚಿಕ ರಾಶಿಯಲ್ಲಿ ಮಂಗಳ ಇದ್ದಾಗ ದೊಡ್ಡ ಪ್ರಯೋಜನಗಳಾಗುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.
ಈ ಬಾರಿ ಧನಸ್ಸು ರಾಶಿಗೆ ಪ್ರವೇಶ ಮಾಡಲಿರುವ ಮಂಗಳನು ಮೊದಲನೇ ಮನೆ ಮತ್ತು ಎಂಟನೇ ಮನೆಯನ್ನು ಆಳುತ್ತದೆ. ಇದರಿಂದಾಗಿ ಈ ರಾಶಿಯವರಿಗೆ ಅಧಿಕಾರ ಮತ್ತು ಸ್ಥಾನಮಾನದ ವಿಷಯದಲ್ಲಿ ಬಹಳಷ್ಟು ಪ್ರಯೋಜನಗಳಾಗುತ್ತವೆ. ಹಾಗೂ ಉನ್ನತ ಮಟ್ಟದ ಹುದ್ದೆಗೆ ಹೋಗುವ ಸಾಧ್ಯತೆಯೂ ಇದೆ.
ಧನು ರಾಶಿಗೆ ಪ್ರಯೋಜನ:
ಈ ರಾಶಿಯವರು ಜೀವನದ ಸಂಗಾತಿಯೊಂದಿಗೆ ಉತ್ತಮ ಪ್ರೀತಿ ಭಾಂದವ್ಯ ಹೊಂದಿರುತ್ತಾರೆ.
ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ.
ಕೆಲಸದಲ್ಲಿ ಉತ್ಸಾಹವಿರುತ್ತದೆ.
ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದಾರೆ ಎಂದು ಹೇಳಲಾಗುತ್ತದೆ.
ಕಷ್ಟ ಪಟ್ಟರೆ ಫಲ ನಿಮ್ಮದಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.