
ಚತುರ್ದಶಿ ತಿಥಿಯ ದಿನ ಮಾಸ ಶಿವರಾತ್ರಿ ಆಚರಣೆ ಮಾಡಲಾಗುತ್ತದೆ. ಈ ದಿನ ಉಪವಾಸ ಕೈಗೊಂಡು ದೇವರನ್ನು ಆರಾಧಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ ನಂಬಲಾಗಿದೆ. ಈ ಬಾರಿಯ ಮಾಸ ಶಿವರಾತ್ರಿ ಇಂದು (ಡಿಸೆಂಬರ್ 18) ರಂದು ಬಂದಿದೆ. ಇದರ ಪೂಜೆಯ ಮಹತ್ವ ಹಾಗೂ ಏನು ಮಾಡಿದರೆ, ಒಳಿತಾಗುತ್ತದೆ ಎಂಬುದನ್ನು ನೋಡೋಣ.
ಮಾಸ ಶಿವರಾತ್ರಿ ಪೂಜೆಯ ವಿಧಾನ:
ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಾಸ ಶಿವರಾತ್ರಿಯ ವ್ರತಾಚರಣೆ ಮಾಡಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಶಿವನು ಮೊದಲು ಶಿವಲಿಂಗದ ರೂಪದಲ್ಲಿ ಕಾಣಿಸಿಕೊಂಡನು ಎಂಬ ನಂಬಿಕೆ ಇದೆ. ಶಿವನನ್ನು ಶಿವಲಿಂಗದ ರೂಪದಲ್ಲಿ ನೋಡಿದ ಬ್ರಹ್ಮ ಮತ್ತು ವಿಷ್ಣು ಮೊದಲು ಪೂಜಿಸಿದರು ಎಂದು ಹೇಳಲಾಗುತ್ತದೆ.
ಮಾಸ ಶಿವರಾತ್ರಿಯ ದಿನ ಮಧ್ಯರಾತ್ರಿಯಲ್ಲಿ ಶಿವಪೂಜೆ ಮಾಡಬೇಕು. ಅವಿವಾಹಿತ ಮಹಿಳೆಯರು ವಿವಾಹವಾಗಲು ಮತ್ತು ವಿವಾಹಿತ ಮಹಿಳೆಯರು ತಮ್ಮ ವೈವಾಹಿಕ ಜೀವನದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಲು ಈ ದಿನ ಉಪವಾಸ ವ್ರತ ಆಚರಿಸಿದರೆ ಒಳಿತಾಗುತ್ತದೆ ಎಂದು ನಂಬಲಾಗಿದೆ.
ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ ಅಥವಾ ಮನೆಯ ಪೂರ್ವ ದಿಕ್ಕಿನಲ್ಲಿ ಕುಳಿತು ಶಿವಪಂಚಾಕ್ಷರಿ ಮಂತ್ರವನ್ನು ಪಠಿಸುವುದರಿಂದ ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಮಾಸ ಶಿವರಾತ್ರಿಯ ಪೂಜೆಯಾದ ನಂತರ ಆಹಾರ ಸ್ವೀಕರಿಸುವುದು ಉತ್ತಮ.
ಈ ದಿನದಂದು ಮಾಸ ಶಿವರಾತ್ರಿಯನ್ನು ಆಚರಣೆ ಮಾಡುವುದರಿಂದ ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳು ದೂರವಾಗಿ, ಸಂತೋಷ ಪ್ರಾಪ್ತಿಯಾಗುತ್ತದೆ. ಉಪವಾಸ ಮಾಡುವುದರಿಂದ ಸಂಪತ್ತು, ಆರೋಗ್ಯ ಮತ್ತು ಸಂತಾನ ಅಪೇಕ್ಷೆ ಇರುವಂತವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಈ ಉಪವಾಸ ವೃತವನ್ನು ಭಕ್ತಿಯಿಂದ ಆಚರಿಸುವುದರಿಂದ ನಮ್ಮೆಲ್ಲಾ ಪಾಪಗಳು ನಾಶವಾಗುತ್ತವೆ ಎಂಬ ಧಾರ್ಮಿಕ ನಂಬಿಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.