ಎಐ ಚಿತ್ರ
ವೇದ ಮಂತ್ರ ಹಾಗೂ ಉಪನಿಷತ್ತುಗಳನ್ನು ಪಠಿಸುವುದರಿಂದ ಧನಾತ್ಮಕತೆ ಹೆಚ್ಚಾಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ. ಜ್ಯೋತಿಷದ ಪ್ರಕಾರ ಮೃತ್ಯುಂಜಯ ಮಂತ್ರ ಪಠಿಸುವುದರಿಂದ ಹಲವು ಲಾಭಗಳು ದೊರೆಯುತ್ತವೆ. ಮೃತ್ಯುಂಜಯ ಮಂತ್ರ ಪಠಣೆಯಿಂದ ಆಗುವ ಪ್ರಯೋಜನಗಳೇನು? ಎಂಬ ಮಾಹಿತಿ ಇಲ್ಲದೆ.
ಮೃತ್ಯುಂಜಯ ಮಂತ್ರ ಪಠಣೆ ಲಾಭಗಳೇನು?
ನಿತ್ಯ ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
ವಿಧ್ಯಾಭ್ಯಾಸ, ಮದುವೆ ವಿಚಾರ, ಉದ್ಯೋಗ, ದೃಷ್ಟಿ ದೋಷ, ಮನಸ್ತಾಪ, ಕಲಹ, ಅಶಾಂತಿ, ಗೊಂದಲಗಳಿಗೆ ಪರಿಹಾರ ಸಿಗಲಿದೆ ಎಂದು ಜ್ಯೋತಿಷ ಹೇಳುತ್ತದೆ.
ಸಂಬಂಧಗಳಲ್ಲಿ ಲೋಪ, ಆರೋಗ್ಯ, ನೆಮ್ಮದಿಯ ಕೊರತೆ, ಅವಕಾಶಗಳ ಕೊರತೆ, ಗೆಲುವು, ವೃತ್ತಿಯಲ್ಲಿ ಬಡ್ತಿ, ಹಣಕಾಸಿನ ತೊಂದರೆ, ವ್ಯಾಪಾರದಲ್ಲಿ ನಷ್ಟಗಳಿಗೆ ಶೀಘ್ರ ಪರಿಹಾರ ಸಿಗಲಿದೆ ಎಂದು ಜ್ಯೋತಿಷಿ ಹೇಳುತ್ತಾರೆ.
ಮೃತ್ಯುಂಜಯ ಮಂತ್ರವನ್ನು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ 11 ಬಾರಿ ಶ್ರದ್ಧೆಯಿಂದ ಪಠಿಸಿದರೆ, ಕಷ್ಟಗಳು ದೂರವಾಗಿ, ಮನಃಶಾಂತಿ ಹಾಗೂ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷಿ ಎಲ್.ವಿವೇಕಾನಂದ ಆಚಾರ್ಯ ಹೇಳುತ್ತಾರೆ.
ಮೃತ್ಯುಂಜಯ ಮಂತ್ರ:
ಓಂ ಮೃತ್ಯುಂಜಯ ರುದ್ರಾಯ ನೀಲಕಂಠಾಯ ಶಂಬುವೇ
ಅಮೃತೇಶಾಯ ಶರ್ವಾಯಮಹಾದೇವಾಯತೆ ನಮಃ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.