
ಚಿತ್ರ: ಗೆಟ್ಟಿ
ಓಂಕಾರ ಸೃಷ್ಟಿಯ ಮೂಲವೆಂಬ ನಂಬಿಕೆ ಇದೆ. ಓಂಕಾರ ಜಪಿಸುವುದರಿಂದ ಧಾರ್ಮಿಕ ಲಾಭಗಳು ಮಾತ್ರವಲ್ಲ, ವೈಜ್ಞಾನಿಕ ಲಾಭಗಳು ದೊರೆಯಲಿವೆ. ಹಾಗಾದರೆ, ಓಂಕಾರದ ಮೂಲವೇನು? ಇದರ ಉಚ್ಚರಣೆಯಿಂದ ದೊರೆಯುವ ಲಾಭಗಳೇನು ಎಂಬುದನ್ನು ತಿಳಿಯೋಣ.
ಓಂಕಾರ ಮಂತ್ರ ಪಠಣೆ ಮಾಡುವಾಗ ಮೂರು ಅಕ್ಷರಗಳ ಉಚ್ಚಾರಣೆಯಿದೆ. ಅವುಗಳೆಂದರೆ, ಆ ,ಉ ಮತ್ತು ಮ ಅಕ್ಷರಗಳಾಗಿವೆ.
ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ ಎಲ್ಲಾ ಮಂತ್ರಗಳ ಉಚ್ಚರಣೆಯು ಓಂಕಾರದಿಂದಲೇ ಪ್ರಾರಂಭವಾಗುತ್ತದೆ. ಓಂಕಾರದ ಪ್ರತಿ ಅಕ್ಷರವೂ ಒಂದೊಂದು ವಿಶೇಷತೆಯನ್ನು ಹೊಂದಿದೆ.
ಅ ಅಕ್ಷರ: ಚರಣದಲ್ಲಿ ಬ್ರಹ್ಮನ ಸಂಕೇತ, ಅರ್ಥಾತ್ ಬ್ರಹ್ಮ ಸೃಷ್ಟಿಕರ್ತ.
ಉ ಅಕ್ಷರ: ಚರಣದಲ್ಲಿ ವಿಷ್ಣುವಿನ ಸಂಕೇತ, ಅರ್ಥಾತ್ ಸ್ಥಿತಿ ಎಂದರ್ಥ.
ಮ ಅಕ್ಷರ: ಚರಣದಲ್ಲಿ ಶಿವನ ಸಂಕೇತ, ಅರ್ಥಾತ್ ಲಯ ಎಂದು ಹೇಳಲಾಗಿದೆ.
ಓಂ ಎಲ್ಲಾ ಮಂತ್ರಗಳ ಮೂಲ ಹಾಗೂ ಶ್ರೇಷ್ಠವೆಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಧಾರ್ಮಿಕ ವೇದ ಗ್ರಂಥಗಳ ಪ್ರಕಾರ ಓಂಕಾರ ಮಂತ್ರಗಳ ಸೃಷ್ಟಿಯ ಮೂಲ ಮಂತ್ರವೆಂದು ಪರಿಗಣಿಸಲಾಗಿದೆ.
ಓಂಕಾರ ಮಂತ್ರದ ಪಠಣೆ ಪಾಪಗಳನ್ನು ತೊಡೆದು ಹಾಕಿ ಮನಸ್ಸನ್ನು ಶುದ್ಧಗೊಳಿಸುತ್ತದೆ. ಜ್ಞಾನ ವೃದ್ಧಿಗೆ ಸಹಾಯವಾಗುತ್ತದೆ. ಆಂತರಿಕ ಶುದ್ಧೀಕರಣ ಹಾಗೂ ಮೋಕ್ಷಕ್ಕೆ ದಾರಿಯಾಗುತ್ತದೆ ಎಂದು ಉಪನಿಷತ್ತುಗಳಲ್ಲಿ ಹೇಳಲಾಗಿದೆ.
ವೈಜ್ಞಾನಿಕವಾಗಿ ಓಂ ಮಂತ್ರದ ಲಾಭಗಳು
ಓಂ ಮಂತ್ರದ ಉಚ್ಚಾರಣೆಯಿಂದ ಗಂಟಲಿನ ಧ್ವನಿಪೆಟ್ಟಿಗೆಯಲ್ಲಿ ಕಂಪನ ಉಂಟಾಗುತ್ತದೆ. ಇದರಿಂದಾಗಿ ತೊದಲಿಕೆ ದೂರವಾಗುತ್ತದೆ.
ಓಂಕಾರ ಮಂತ್ರದ ಪಠಣೆಯಿಂದ ಒತ್ತಡ ಕಡಿಮೆಯಾಗುತ್ತದೆ.
ಓಂಕಾರ ಮಂತ್ರವು ನರಮಂಡಲದ ಮೇಲೆ ಪ್ರಭಾವ ಬೀರಿ ಒತ್ತಡ, ಆತಂಕ ಹಾಗೂ ಕೋಪ ಕಡಿಮೆ ಮಾಡುತ್ತದೆ.
ಓಂಕಾರ ಮಂತ್ರದ ಪಠಣದಿಂದ ಶ್ವಾಸಕೋಶಕ್ಕೆ ಸಹಕಾರಿಯಾಗಲಿದೆ. ಇದು ಉಸಿರಾಟದ ಸಮಸ್ಯೆಗಳನ್ನು ನಿವಾರಿಸುತ್ತದೆ.
ಓಂಕಾರ ಮಂತ್ರ ಪಠಿಸುವುದರಿಂದ ಮಿದುಳಿನ ತರಂಗಗಳು ಚುರುಕಾಗಿ ಮನಸ್ಸನ್ನು ವಿಶಾಲ ಸ್ಥಿತಿಗೆ ಕೊಂಡೊಯ್ಯುತ್ತದೆ.
ಓಂಕಾರ ಮಂತ್ರವನ್ನು ಪಠಣೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಓಂಕಾರ ಮಂತ್ರ ಪಠಿಸುವುದರಿಂದ ಸ್ಮರಣೆ ಮತ್ತು ಏಕಾಗ್ರತೆ ಸದೃಢವಾಗುತ್ತದೆ.
ಓಂಕಾರ ಮಂತ್ರವನ್ನು ಪಠಿಸುವುದರಿಂದ ದೇಹ ಮತ್ತು ಮನಸ್ಸಿನ ಸ್ಥಿತಿಯನ್ನು ಸದೃಢವಾಗಿಸಲು ಸಹಾಯವಾಗುತ್ತದೆ.
ಪುರಾಣ ಕಥೆಗಳ ಪ್ರಕಾರ ಋಷಿಮುನಿಗಳು ಈ ಓಂಕಾರ ಮಂತ್ರವನ್ನು ಪಠಿಸಿ ಬ್ರಹ್ಮ ಜ್ಞಾನ ಪಡೆದರು ಎಂದು ಹೇಳಲಾಗುತ್ತದೆ.