
ಕೆಲವು ಗಿಡಗಳನ್ನು ಮನೆಯ ಸುತ್ತಮುತ್ತ ನೆಡುವುದರಿಂದ ಶುಭಫಲ ದೊರೆಯಲಿದೆ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಿದೆ. ಮನೆಯ ಸಮೀಪ ಕೆಲವು ಸಸಿಗಳನ್ನು ದಿಕ್ಕುಗಳಿಗೆ ಅನುಸಾರವಾಗಿ ನೆಡುವುದರಿಂದ ಜಾತಕದಲ್ಲಿ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.
ಪೂರ್ವ ದಿಕ್ಕಿನಲ್ಲಿ ತುಳಸಿ ಅಥವಾ ಬೇವಿನ ಸಸಿ ನೆಡುವುದರಿಂದ ಉಸಿರಾಟದ ಸಮಸ್ಯೆಗಳು ದೂರವಾಗುತ್ತದೆ.
ಪಶ್ಚಿಮ ದಿಕ್ಕಿನಲ್ಲಿ ಅಶೋಕ ಅಥವಾ ಜಾಜಿ ಸಸಿಗಳನ್ನು ನೆಡುವುದರಿಂದ ಕುಟುಂಬದಲ್ಲಿ ಸಾಮರಸ್ಯ ವೃದ್ಧಿಯಾಗಲಿದೆ.
ಉತ್ತರ ದಿಕ್ಕಿನಲ್ಲಿ ಮಾವು ಅಥವಾ ನಿಂಬೆ ಸಸಿಗಳನ್ನು ನೆಟ್ಟು ಬೆಳೆಸುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.
ದಕ್ಷಿಣ ದಿಕ್ಕಿನಲ್ಲಿ ರಕ್ತಚಂದನ ಅಥವಾ ಕಿತ್ತಳೆ ಸಸಿಗಳನ್ನು ನೆಡುವುದರಿಂದ ಶತ್ರು ಕಾಟ ನಿವಾರಣೆಯಾಗುತ್ತದೆ.
ಮನೆಯ ಈಶಾನ್ಯ ದಿಕ್ಕಿನಲ್ಲಿ ತುಳಸಿ ನೆಡುವುದರಿಂದ ಮನೆಯಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ.
ವಾಯವ್ಯ ದಿಕ್ಕಿನಲ್ಲಿ ನಿಂಬೆ ಸಸಿಯನ್ನು ನೆಟ್ಟರೆ, ಮನೆಯ ವಾತಾವರಣ ಹಾಗೂ ವಾಯು ಸಮತೋಲನದಲ್ಲಿ ಇರುತ್ತದೆ.
ಆಗ್ನೇಯ ದಿಕ್ಕಿನಲ್ಲಿ ತೆಂಗು ಅಥವಾ ಬಾಳೆ ಸಸಿಗಳನ್ನು ಬೆಳೆಸುವುದರಿಂದ, ದೇವತೆಗಳ ಅನುಗ್ರಹ ಪ್ರಾಪ್ತಿಯಾಗಲಿದೆ.
ನೈರುತ್ಯ ದಿಕ್ಕಿನಲ್ಲಿ ಅರಳಿ ಅಥವಾ ಬೇವಿನ ಸಸಿಗಳನ್ನು ಬೆಳೆಸುವುದರಿಂದ ವಾಸ್ತು ದೋಷ ಪರಿಹಾರವಾಗುತ್ತವೆ.
ಈ ದಿಕ್ಕಿನಲ್ಲಿ ಗಿಡಗಳನ್ನು ನೆಡುವುದರಿಂದ ಕುಟುಂಬದ ಆರೋಗ್ಯದ ವೃದ್ದಿಯಾಗಿಲಿದೆ, ಗ್ರಹ ದೋಷಗಳು ಪರಿಹಾರವಾಗಲಿವೆ ಹಾಗೂ ಮನೆಯ ವಾಸ್ತು ದೋಷ ಪರಿಹಾರವಾಗಲಿದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.