ADVERTISEMENT

ಪ್ರಿಯಾಂಕಾ ಗಾಂಧಿ ವಾದ್ರಾ ಜನ್ಮಕುಂಡಲಿ; ಖಳ ನಾಯಕನಾಗಲಿದ್ದಾನೆ ಕೇತು

ಮಹಾಬಲಮೂರ್ತಿ ಕೊಡ್ಲೆಕೆರೆ
Published 22 ಜನವರಿ 2026, 1:13 IST
Last Updated 22 ಜನವರಿ 2026, 1:13 IST
<div class="paragraphs"><p>ಪ್ರಿಯಾಂಕಾ ಗಾಂಧಿ ವಾದ್ರಾ</p></div>

ಪ್ರಿಯಾಂಕಾ ಗಾಂಧಿ ವಾದ್ರಾ

   

ಪ್ರಿಯಾಂಕಾ ಗಾಂಧಿಯವರ ಕುರಿತು ಅವರ ಜನ್ಮ ಕುಂಡಲಿಯ ವಿಶ್ಲೇಷಣೆ ಮಾಡುವಾಗ ಎದ್ದು ಕಾಣುವ ಅಂಶವೇ ಶುಕ್ರ ಗ್ರಹವಾಗಿದೆ. ಶುಕ್ರ ಗ್ರಹ ಶನೈಶ್ಚರ ಗ್ರಹದ ಜತೆ ಪರಿವರ್ತನ ಯೋಗದಲ್ಲಿದೆ. ಅಂದರೆ, ಶನಿ ಮತ್ತು ಶುಕ್ರ ಪರಸ್ಪರರ ಮನೆಗಳನ್ನು ಅದಲು ಬದಲಾಗಿಸಿಕೊಂಡಿವೆ. ಇದು ಸಮೃದ್ಧಿಯ ಸೂಚಕವೂ ಹೌದು. ಕೆಲಮಟ್ಟಿಗೆ ಕೆಲವು ಹಿನ್ನಡೆಗಳನ್ನು ಕಾಣುವ ನಷ್ಟ ಬಿಂದುಗಳಾಗಿಯೇ ಕುದಿಯುವಿಕೆಗೆ ಒಳಗಾಗುತ್ತವೆ. ಒಂದೊಮ್ಮೆ ಗುರು ಹಾಗೂ ಬುಧ ಗ್ರಹಗಳು ಸೂರ್ಯನ ಸಂಯೋಜನೆಯನ್ನು ತಾವಿರುವ ಧನಸ್ಸು ರಾಶಿಯಲ್ಲಿ ಜತೆಯಾಗಿ ಹೊಂದಿರದಿದ್ದರೆ ಪ್ರಿಯಾಂಕಾ ಅವರ ಜನ್ಮ ಕುಂಡಲಿ ಮಹಾ ಶೋಭಾವೃತ ಸಿದ್ಧಿಯ ರಾಜಯೋಗ ಪಡೆಯುವ ಅದೃಷ್ಟ ಹೊಂದುತ್ತಿತ್ತು. ಸೂರ್ಯ ಗ್ರಹವು ಒದಗಿಸುತ್ತಿರುವ ಸದ್ಯದ ಅಧಿಕ ಪ್ರಮಾಣದ ಒಳ ಏಟುಗಳಿಗೆ ತಡೆ ಇರುತ್ತಿತ್ತು. ಈಗ ರಾಹು ಹಾಗೂ ಕೇತು ಹೊರತಾಗಿ ಉಳಿದ ಏಳು ಗ್ರಹಗಳು, ಕುಂಡಲಿಯ ಐದು ಮನೆಗಳಲ್ಲಿ ಚದುರಿ ಬಿದ್ದಿದ್ದು ಅನೇಕ ಏಳು ಬೀಳುಗಳ ಜತೆ ಜತೆಗೇ ಎಲ್ಲ ರೀತಿಯ ಹೋರಾಟಗಳನ್ನು ಮಾಡುವ ಹಾಗೂ ಮಾಡುತ್ತಲೇ ಇರಬೇಕಾಗುತ್ತದೆ.

ಸದ್ಯ 2030 ಮಾರ್ಚ್ ಮಧ್ಯ ಭಾಗದವರೆವಿಗೂ ಸೂರ್ಯ ಗ್ರಹ, ತೀರಾ ಒಳ ವಲಯದ ಜನರಿಂದಾಗಿಯೇ ಸಮಸ್ಯೆಗಳನ್ನು ಎದುರಿಸುತ್ತಿರಬೇಕಾದ ಸ್ಥಿತಿ ಎದುರಾಗುತ್ತವೆ. ಕೇತು ಗ್ರಹವು ಆಗುತ್ತಿರುವ ತೊಂದರೆಗಳನ್ನು ಹೇಳಿಕೊಳ್ಳಲು ಆಗದ ಸ್ಥಿತಿಯನ್ನು ಪ್ರಿಯಾಂಕಾ ಗಾಂಧಿಯವರ ಪಾಲಿಗೆ ಒದಗಿಸುತ್ತಾನೆ. ವ್ಯಾಜ್ಯಗಳ ವಿಚಾರಗಳಲ್ಲಿ ಚಂದ್ರನು ಅತ್ಯಂತ ಪರಿಶೋಭಿತ ನೀಚ ಭಂಗ ರಾಜಯೋಗವನ್ನು ಮಂಗಳ ಗ್ರಹದ ಶಕ್ತಿ ಮೂಲದಿಂದ ಒದಗಿಸಿಕೊಂಡಿದ್ದರೂ, ಶನಿ ಗ್ರಹದ ದೃಷ್ಟಿ ದೋಷದ ಕಾರಣವೇ ಚಂದ್ರ ಗ್ರಹದ ಶಾಂತ ಸಂವಿಧಾನಕ್ಕೆ ಭಂಗ ಒದಗಿಸಿದೆ.

ADVERTISEMENT

ಖಳ ನಾಯಕ ಕೇತು ಹಾಗೂ ಶನಿ ಬಾಧಿತ ಚಂದ್ರ

ಪ್ರಿಯಾಂಕಾ ಗಾಂಧಿಯವರ ಮಾತಿನ ಶಕ್ತಿಗೆ ಬುಧ ಗ್ರಹವು ಬೌದ್ಧಿಕ ಸತ್ವ ಹಾಗೂ ಹಲವು ಮಾಂತ್ರಿಕ ಸಿದ್ಧಿ ಕೊಡಲು ಸೂರ್ಯ ಗ್ರಹದ ಕಾರಣದಿಂದಲೇ ಹಿನ್ನಡೆಯನ್ನು ಕಾಣುತ್ತಿದೆ. ಹಲವು ಹದಿನಾರು ವಿಚಾರಗಳ ಕುರಿತು ಉರಿಯ ಕೆಂಡಗಳಂತಹ ಮಾತುಗಳಿಂದ ಕಟುವಾಗಿ ಸರಕಾರವನ್ನು ಇಕ್ಕಟ್ಟಿಗೆ ತಳ್ಳುವ ಅಥವಾ ತರಾಟೆಗೆ ತೆಗೆದುಕೊಳ್ಳುವ ತಯಾರಿಯನ್ನು (ಸ್ವಯಂ ವಾಕ್ಚಾತುರ್ಯ ತೋರಿಯೇ) ನಿರ್ಮಿಸಿಕೊಳ್ಳಲು ಪ್ರಿಯಾಂಕಾ ಅವರ ಜಾಣ್ಮೆ ಸದ್ಯದ ಹೊತ್ತಲ್ಲಿ ಹೊರ ಬರಬೇಕಾಗಿದೆ. ಗಾಂಧಿ ಕುಟುಂಬದ ಕುಡಿಯಾಗಿ ಪಡೆಯಬೇಕಾದ ಜನ ಮಾನಸದ ಎಲ್ಲಾ ಗಮನವನ್ನು ಪ್ರಿಯಾಂಕಾ ಅವರು ಪಡೆದಿದ್ದಾರೆ. ಎಚ್ಚರದ ನಡೆ ಇವರಿಗೆ ಅನಿವಾರ್ಯವಾಗಿದೆ. ಜನಪ್ರಿಯತೆಯ ದೃಷ್ಟಿಯಿಂದ ಅತ್ಯಂತ ಬಲಿಷ್ಠ ನಾಯಕನಾಗಿ ಹೊರಹೊಮ್ಮಿರುವ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸಮರ್ಥವಾಗಿ ಎದ್ದು ನಿಲ್ಲಬೇಕಾದರೆ, ಅವರ ದೌರ್ಬಲ್ಯಗಳನ್ನು ಸೂಕ್ತ ಕಾರಣಗಳ ಮೂಲಕ ಎತ್ತಿ, ಸರಿಯಾಗಿ ವಿಶ್ಲೇಷಿಸಿ, ಇದು ತಪ್ಪು ಎಂದು ಸಂಸತ್ ಕಲಾಪಗಳಲ್ಲಿ ಎದೆಗಾರಿಕೆಯಿಂದ ಮಾತನಾಡುವ ಧ್ವನಿ ಶಕ್ತಿಯನ್ನ ತೋರಿಸಲು ಮುಂದಾಗಬೇಕಿದೆ.

ಪ್ರಿಯಾಂಕಾ ಅವರಿಗೆ ಇದು ಸಾಧ್ಯವಾಗುವಂತೆ ಮಾಡಲು ಮಂಗಳ ಬಲಾಢ್ಯನಾಗಿದ್ದಾನೆ‌. ಆದರೆ ಇವರ ಇಡೀ ಲವಲವಿಕೆ ಮತ್ತು ಉತ್ಸಾಹಗಳಿಗೆ ಬುಧನೇ,(ಕೇತು ಗ್ರಹದ ಪೀಡೆಗೆ ಒಳಗಾಗಿರುವ ಕಾರಣದಿಂದ) ಕೈ ಚೆಲ್ಲಿದ್ದಾನೆ.ಚಂದ್ರ ಗ್ರಹ ಪ್ರಿಯಾಂಕಾ ವಿರುದ್ಧವೇ ಹಲವು ಆಪಾದನೆಗಳನ್ನು ತಂದಿಡುವ ಆವರಣದಲ್ಲಿ ಬಂಧಿಯಾಗಿದ್ದು, ಪ್ರಿಯಾಂಕಾ ಅವರ ರಾಜಕೀಯ ಶಕ್ತಿ ಸಂಚಯನಕ್ಕೆ ತೊಡಕಾಗಿದ್ದಾನೆ. ಕುಟುಂಬ ಸಂಬಂಧೀ ಎಚ್ಚರ ವಹಿಸುವ ವಿಚಾರಗಳಲ್ಲಿ ಹಲವಾರು ರೀತಿಯ ಒತ್ತಡಗಳನ್ನು ಕೊಡುವ ಚಂದ್ರನೇ ಸ್ವತಃ ತಾನು ಖಳನಾಯಕನಾಗಿದ್ದಾನೆ. ಒಂದು ರೀತಿಯ ಬಂಧನವೇ ಅನ್ನುವ ಹಾಗೆ ವರ್ತಮಾನವನ್ನು ಕುದಿ ಬಿಂದುವಿನಲ್ಲಿ ನಿಲ್ಲಿಸಿದ್ದಾನೆ.

ತನ್ನ ಮಕ್ಕಳನ್ನು ವಾದ್ರಾ ಎನ್ನುವ ಬದಲು, ಗಾಂಧಿ ಎಂಬ ಕುಟುಂಬದಡಿಯಲ್ಲೇ ಪ್ರಿಯಾಂಕಾ ಪ್ರಚುರ ಪಡಿಸಲು ಮುಂದಾಗಿದ್ದಾರೆ ಎಂದು ಹಲವರು ಅಪಸ್ವರವನ್ನು ಎತ್ತುತ್ತಿದ್ದಾರೆ. ಇದು ನಿಜವಾದರೆ 2030ರ ನಂತರ ಹಲವು ಜಿಣುಕುಗಳನ್ನು ಪ್ರಿಯಾಂಕಾ ಅವರು ಎದುರಿಸಬೇಕಾಗಿ ಬರುವ ವೇದಿಕೆಯನ್ನು ಸದ್ಯ ರವಿಯು ನಿರ್ಮಿಸುತ್ತಿದ್ದಾನೆ. ನಂತರದ ಹತ್ತು ವರ್ಷಗಳ ಚಂದ್ರ ದಶಾ ಹಲವು ರೀತಿಯಲ್ಲಿ ಬಿಕ್ಕಟ್ಟು ತರಬಹುದಾಗಿದೆ. ಹಾಗೆ ನೋಡಿದರೆ ಸಾಮಾನ್ಯವಾಗಿ ಚಂದ್ರ ನೆಹರು ಮನೆತನಕ್ಕೆ ಎಲ್ಲಾ ರೀತಿಯ ಒಳಿತುಗಳನ್ನೇ ಈ ಏಳೆಂಟು ದಶಕಗಳಿಂದಲೂ ಒದಗಿಸಿದ್ದಾನೆ. ಆದರೆ ಪ್ರಿಯಾಂಕಾ ವಾದ್ರಾ ಅವರ ಕುಂಡಲಿಯ ಚಂದ್ರ ಈ ರೀತಿಯ ಮೃದುತ್ವ ಹೊಂದಿರುವುದಿಲ್ಲ.

ರಾಹು ಉಪಟಳ

ಪ್ರಿಯಾಂಕಾ ಅವರ ಜಾತಕ ಕುಂಡಲಿಯ ರಾಹು ಗ್ರಹ, ಆರೋಗ್ಯ ಹಾಗೂ ಚೈತನ್ಯದ ವಿಚಾರದಲ್ಲಿ ವ್ಯಗ್ರತೆ ತೋರುವ ಅಂಶ ಬಲವಾಗಿದೆ. ಆದರೆ ಶುಕ್ರ ಗ್ರಹದ ಮಮತಾ ಪೂರ್ಣ ಅನುಗ್ರಹವು ಪ್ರಿಯಾಂಕಾರನ್ನು (ದಿಢೀರಾಗಿ ತನ್ನ ದುಷ್ಟತನ ತೋರುವಂತೆ ಎದ್ದು ನಿಲ್ಲುವ) ಸರ್ಪದ ಅಂದರೆ ರಾಹುವಿನ ವಿಷ ತುಂಬಿದ ಹೆಡೆಯನ್ನು ನಿಯಂತ್ರಿಸುವ ಬಲ ಪಡೆದಿದೆ. ಮಕ್ಕಳಿಗೆ ಅನುಕೂಲ ಒದಗಿಸುವ ವರ್ತಮಾನವನ್ನು ಪ್ರಿಯಾಂಕಾ ಗಾಂಧಿಯವರ ಜನ್ಮ ಕುಂಡಲಿ ಮೂಲಕ ಗ್ರಹಿಸಬಹುದಾಗಿದೆ. ಆದರೆ ಸದ್ಯದ ವರ್ತಮಾನ ಮಾತ್ರ ರವಿ ಗ್ರಹ ಸಂಬಂಧವಾದ ತೊಡಕಿನಿಂದ ಹಲವು ಹಿನ್ನಡೆಗಳಿಗೇ ಸಿಲುಕುವ ರೀತಿಯಲ್ಲಿ ಸಂಯೋಜನೆ ಪಡೆದಿದೆ.

ಆಳುವ ಪಕ್ಷದ ಬಲ ವರ್ತಮಾನದಲ್ಲಿ ಎಷ್ಟೇ ಸಶಕ್ತ ಧಾತುವನ್ನು ಹೊಂದಿರಬಹುದಾಗಿದ್ದರೂ ಸಕಾರಾತ್ಮಕವಾದ ಹಾಗೂ ಹಿಂದೆ ಸರಿಯಾದ ಇಚ್ಛಾ ಶಕ್ತಿಯನ್ನು ತೋರುವ ಚತುರತೆ ಹಾಗೂ ಈಗ ಈ ದೇಶದ ಸಲುವಾಗಿ ಮುಂದಾಗಿ ನಿಲ್ಲುವ, ಬದ್ಧತೆ ತೋರುವ, ಜನತೆಯ ನಿರೀಕ್ಷಿಸುವ ಕೆಚ್ಚನ್ನು ಪ್ರಿಯಾಂಕಾ ಗಾಂಧಿ ಪಡೆಯಬೇಕಾಗಿದೆ. ಈ ವಿಸ್ತಾರವಾದ ದೇಶದ ಭಾಷೆ ಹಾಗೂ ಸಂಸ್ಕೃತಿ ಒಂದೇ ರೀತಿಯಲ್ಲಿ ಎಲ್ಲರನ್ನೂ ಸಾಗಿಸಿಕೊಂಡು ಹೋಗುವ ನಿಟ್ಟಿನಲ್ಲಿ ವಿಶಿಷ್ಟತೆಯನ್ನು ಇವರು ತೋರಿಸಬೇಕಾಗಿದೆ.

ಇದು ಇವರ ಅಣ್ಣ ರಾಹುಲರಿಗೂ ತಂಗಿಯ ಮೂಲಕವೇ ಇಂದಿನ ರಾಜಕೀಯಕ್ಕೆ ಹೆಚ್ಚಿನದಾದ ಅನುಕೂಲವಾಗುವ ಸಿದ್ಧಿ ಕೂಡಿಸಿಕೊಳ್ಳಲು ಸಾಧ್ಯವಾಗುತ್ತದೆ. ವಾಸ್ತವ ಏನೆಂದರೆ, ಏನಿದ್ದರೂ ಇವೆಲ್ಲವೂ ಕ್ರಮೇಣವಾಗಿ ಚಂದ್ರ ಮಹಾ ದಶಾದ ಕಾಲ ಘಟ್ಟದಲ್ಲಿ ಕೂಡಿ ಬರುವ ಪಕ್ವತೆಯನ್ನು ತೋರಬಹುದಾಗಿದೆ. ಸದ್ಯದ ರವಿಯ ಉಪಟಳದ ಉರಿ, ಹಲವು ಕಗ್ಗಂಟುಗಳನ್ನು ಇವರದ್ದೇ ಆದ ದಾರಿಯಲ್ಲಿ ಇರಿಸಿಯೇ, ಕಿರುಕುಳ ನೀಡುವ ಆವರಣಗಳನ್ನು ಪಡೆದಿದೆ. ಏನೇ ಇರಲಿ ದೈವ ಶಕ್ತಿ, ಹೆಚ್ಚಾಗಿ ದುರ್ಗಾಳ ಅನುಗ್ರಹ ಒದಗುವ ಪವಾಡ ಇವರ ಪರವಾಗಿ ಸಂಭವಿಸಲಿ. ಒಳಿತಿನ ದಾರಿ ತೆರೆಯಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.