
ಧಾರ್ಮಿಕ ನಂಬಿಕೆಗಳ ಪ್ರಕಾರ, ಉಪವಾಸ ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸು ಪರಿಶುದ್ಧವಾಗಿರುತ್ತದೆ ಎಂದು ಹೇಳಲಾಗುತ್ತದೆ. ಆರೋಗ್ಯ ದೃಷ್ಟಿಯಿಂದಲೂ ವಾರದಲ್ಲಿ ಒಂದು ದಿನ ಉಪವಾಸ ಮಾಡಿದರೆ, ನಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ವಾರದ 7 ದಿನಗಳಲ್ಲಿ ಯಾವ ದಿನ ಯಾವ ದೇವರನ್ನುಆರಾಧಿಸಿ ಉಪವಾಸ ಮಾಡಿದರೆ ಒಳಿತು ಎಂಬುದನ್ನು ಶಾಸ್ತ್ರಾನುಸಾರವಾಗಿ ತಿಳಿಯೋಣ.
ಸೋಮವಾರವನ್ನು ಶಿವನಿಗೆ ಸಮರ್ಪಿಸಲಾಗಿದೆ. ಚಂದ್ರನಿಗೆ ಕೂಡಾ ಪೂಜೆ ಸಲ್ಲಿಸಬಹುದಾಗಿದೆ. ಜಾತಕದಲ್ಲಿ ಚಂದ್ರನ ದೋಷ ಇರುವವರು ಈ ದಿನ ಉಪವಾಸವನ್ನು ಕೈಗೊಂಡರೆ ಚಂದ್ರನಿಂದ ವಿಶೇಷ ಆಶೀರ್ವಾದ ಪಡೆಯಲಿದ್ದಾರೆ ಎಂಬ ನಂಬಿಕೆ ಇದೆ.
ಮಂಗಳವಾರ ಉಪವಾಸ ಮಾಡುವುದರಿಂದ ಸ್ವಭಾವದಲ್ಲಿ ಸಂಯಮವು ಹೆಚ್ಚಾಗುತ್ತದೆ. ಈ ದಿನವನ್ನು ಆಂಜನೇಯನಿಗೆ ಸಮರ್ಪಿಸಲಾಗಿದೆ. ಜಾತಕದಲ್ಲಿ ಮಂಗಳನ ದೋಷವಿದ್ದರೆ ಅಂತಹವರಿಗೆ ಈ ಉಪವಾಸವು ತುಂಬಾ ಪ್ರಯೋಜನಕಾರಿಯಾಗಿದೆ. ಮಂಗಳವಾರ ಉಪವಾಸ ಕೈಗೊಳ್ಳುವವರು ಉಪ್ಪನ್ನು ಸೇವಿಸಬಾರದು. ಆರ್ಥಿಕ ಸಮಸ್ಯೆ ಪರಿಹರವಾಗಲು ಈ ದಿನದ ಉಪವಾಸ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.
ಬುಧುವಾರ ಉಪವಾಸ ಮಾಡುವುದು ಹೆಚ್ಚು ಲಾಭದಾಯಕವಾಗಿದೆ. ಈ ದಿನವನ್ನು ಬುಧ ಗ್ರಹ ಮತ್ತು ಗಣೇಶನಿಗೆ ಸಮರ್ಪಿಸಲಾಗಿದೆ. ಇಂದು ಉಪವಾಸವನ್ನು ಆಚರಿಸುವವರು ಗಣೇಶನನ್ನು ಭಕ್ತಿಯಿಂದ ಪೂಜಿಸಬೇಕು. ನವಗ್ರಹ ದೇವಾಲಯಕ್ಕೆ ಭೇಟಿ ನೀಡುವುದು ಉತ್ತಮವಾಗಿದೆ. ಹಸಿರು ವಸ್ತ್ರ, ಹಸಿರು ಬಳೆ ಉಡುಗೊರೆಯಾಗಿ ನೀಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಗುರುವಾರ ಉಪವಾಸವನ್ನು ಆಚರಣೆ ಮಹಿಳೆಯರಿಗೆ ಸೂಕ್ತ. ಮಹಿಳೆಯರು ಈ ಉಪವಾಸವನ್ನು ಶ್ರದ್ಧೆಯಿಂದ ಆಚರಿಸಬೇಕು. ಹಳದಿ ಬಟ್ಟೆ ಧರಿಸಿ, ಹಳದಿ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಈ ಉಪವಾದಿಂದ ವಿಷ್ಣುವಿನ ಅನುಗ್ರಹ ದೊರೆಯುತ್ತದೆ. ಜಾತಕದಲ್ಲಿ ಗುರು ಕೂಡ ಬಲಶಾಲಿಯಾಗುತ್ತಾನೆ.
ಶುಕ್ರವಾರವನ್ನು ಚಾಮುಂಡಿ ದೇವಿಯ ಆರಾಧನೆಯ ದಿನ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಈ ಉಪವಾಸದಿಂದ ಮಕ್ಕಳ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಉಪವಾಸವನ್ನು ಆಚರಿಸಿದರೆ ಪುರುಷರ ವೀರ್ಯವು ಬಲಗೊಳ್ಳುತ್ತದೆ ಎಂದು ನಂಬಲಾಗಿದೆ. ಶನಿಯ ಕೆಟ್ಟ ಪರಿಣಾಮ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
ಭಾನುವಾರ ಉಪವಾಸ ಮಾಡುವುದರಿಂದ ಸೂರ್ಯನಾರಾಯಣನ ಕೃಪೆ ನಮ್ಮದಾಗಲಿದೆ. ಜ್ಯೋತಿಷದ ಪ್ರಕಾರ ಪ್ರತಿ ಭಾನುವಾರ ಉಪವಾಸವನ್ನು ಆಚರಿಸಿದರೆ ಜಾತಕದಲ್ಲಿ ಸೂರ್ಯನ ಸ್ಥಾನವು ಉತ್ತಮವಾಗಿರುತ್ತದೆ.
ಆರೋಗ್ಯ ಸಮಸ್ಯೆ ಇರುವವರು ಉಪವಾಸ ಮಾಡುವುದರಿಂದ ದೂರ ಇರುವುದು ಉತ್ತಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.