ADVERTISEMENT

ಎಲೆಕ್ಟ್ರಿಕ್ ವಾಹನಗಳ ನೋಂದಣಿ ಶೇ 17ರಷ್ಟು ಹೆಚ್ಚಳ: SIAM

ಪಿಟಿಐ
Published 15 ಏಪ್ರಿಲ್ 2025, 14:33 IST
Last Updated 15 ಏಪ್ರಿಲ್ 2025, 14:33 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಹೊಸ ಮಾದರಿಗಳ ಪರಿಚಯ ಮತ್ತು ಸರ್ಕಾರದ ಹಲವು ನೀತಿಗಳ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಮಾರಾಟ ಪ್ರಗತಿ ಸಾಧಿಸಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 19.7 ಲಕ್ಷಕ್ಕೆ (ಶೇ 17ರಷ್ಟು) ಏರಿಕೆಯಾಗಿದೆ ಎಂದು ಕೈಗಾರಿಕಾ ಸಂಸ್ಥೆ ಎಸ್‌ಐಎಎಂ ಮಂಗಳವಾರ ಹೇಳಿದೆ.

ಆರ್ಥಿಕ ವರ್ಷ 2023–24ರಲ್ಲಿ 16.8 ಲಕ್ಷ ಬ್ಯಾಟರಿ ವಾಹನಗಳು ಮಾರಾಟವಾಗಿದ್ದವು. 2024–25ರಲ್ಲಿ 19.7 ಲಕ್ಷ ವಾಹನಗಳು ಮಾರಾಟವಾಗಿವೆ. ಒಟ್ಟು ಶೇ 17ರಷ್ಟು ಪ್ರಗತಿ ಸಾಧಿಸಿದೆ ಎಂದು ಹೇಳಿದೆ. ನೋಂದಣಿ ಸಂಖ್ಯೆಯ ಪ್ರಗತಿ ಶೇ 18ರಷ್ಟು ಏರಿಕೆಯಾಗಿದೆ.

ADVERTISEMENT

ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳ ನೋಂದಣಿಯು ಶೇ 21ರಷ್ಟು ಏರಿಕೆಯಾಗಿದೆ. ಒಟ್ಟು 11.5 ಲಕ್ಷ ವಾಹನಗಳು ಮಾರಾಟವಾಗಿದೆ. ತ್ರಿಚಕ್ರ ವಾಹನಗಳ ಮಾರಾಟ ಪ್ರಗತಿ ಶೇ 10.5ರಷ್ಟು ಹೆಚ್ಚಾಗಿದೆ. ಕಳೆದ ವರ್ಷ 7 ಲಕ್ಷ ವಾಹನಗಳು ಮಾರಾಟವಾಗಿದ್ದವು.

2024ರ ಏ. 1ರಿಂದ ಸೆ. 30ರವರೆಗೆ ಪ್ರಧಾನಮಂತ್ರಿ ಇ–ಡ್ರೈವ್‌, ಪ್ರಧಾನಮಂತ್ರಿ ಇ–ಬಸ್‌ ಸೇವಾ ಯೋಜನೆ ಒಳಗೊಂಡಂತೆ ಎಲೆಕ್ಟ್ರಿಕ್ ವಾಹನಗಳ ಸಂಚಾರ ಉತ್ತೇಜನ ಯೋಜನೆಯಡಿ ಹಲವು ಕಂಪನಿಗಳು ಹೊಸ ಉತ್ಪನ್ನಗಳನ್ನು ಹೊರತಂದ ಪರಿಣಾಮ, ಈ ಕ್ಷೇತ್ರ ಹೊಸ ಎತ್ತರಕ್ಕೆ ತಲುಪಿದೆ ಎಂದು ಎಸ್‌ಐಎಎಂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.