ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ಕಂಪನಿಯು ತನ್ನ ಹೊಸ ಹ್ಯಾಚ್ಬ್ಯಾಕ್ ಗ್ರ್ಯಾಂಡ್ ಐ10 ನಿಯೋಸ್ (NIOS) ಬಿಡುಗಡೆ ಮಾಡಿದೆ. ಇದರ ಎಕ್ಸ್ ಷೋರೂಂ ಬೆಲೆ ₹ 4.99 ಲಕ್ಷದಿಂದ ₹ 7.99 ಲಕ್ಷದವರೆಗಿದೆ.ಕಂಪನಿಯ ವಿತರಣಾ ಕೇಂದ್ರಗಳು ಮತ್ತು ಆನ್ಲೈನ್ ಮೂಲಕ ₹ 11 ಸಾವಿರ ಮುಂಗಡ ಪಾವತಿಸಿ ಕಾಯ್ದಿರಿಸಬಹುದಾಗಿದೆ.
‘ಕಳೆದ 21 ವರ್ಷಗಳಿಂದ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ವಿಶ್ವದರ್ಜೆಯ ವಾಹನಗಳನ್ನು ನೀಡುವ ಮೂಲಕ ಹುಂಡೈ ಮೋಟರ್ಸ್ ಇಂಡಿಯಾ, ಭಾರತೀಯ ಆಟೊಮೊಬೈಲ್ ಕ್ಷೇತ್ರದಲ್ಲಿ ಮೈಲುಗಲ್ಲನ್ನು ಸ್ಥಾಪಿಸಿದೆ. ನಾವು ಇದೀಗ ಹೊಚ್ಚ ಹೊಸದಾದ 3 ನೇ ತಲೆಮಾರಿನ ಕಾರನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತಸವೆನಿಸುತ್ತಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್. ಎಸ್. ಕಿಮ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.