ADVERTISEMENT

ಗ್ರ್ಯಾಂಡ್‌ ವಿಟಾರಾ ಮಾರುಕಟ್ಟೆಗೆ

ಪಿಟಿಐ
Published 26 ಸೆಪ್ಟೆಂಬರ್ 2022, 11:07 IST
Last Updated 26 ಸೆಪ್ಟೆಂಬರ್ 2022, 11:07 IST
   

ನವದೆಹಲಿ: ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಮಧ್ಯಮ ಗಾತ್ರದ ಎಸ್‌ಯುವಿ ವಾಹನ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದುವ ಉದ್ದೇಶದಿಂದ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ‘ಗ್ರ್ಯಾಂಡ್ ವಿಟಾರಾ’ವನ್ನು ಸೋಮವಾರ ಬಿಡುಗಡೆ ಮಾಡಿದೆ.

ಈ ವಾಹನದ ಎಕ್ಸ್‌ಷೋರೂಂ (ನವದೆಹಲಿ) ಬೆಲೆ ₹ 10.45 ಲಕ್ಷದಿಂದ ₹ 19.65 ಲಕ್ಷದವರೆಗೆ ಇದೆ. ಗ್ರ್ಯಾಂಡ್‌ ವಿಟಾರಾ ವಾಹನವು 1.5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಹುಂಡೈ ಕ್ರೇಟಾ, ಕಿಯಾ ಸೆಲ್ಟೋಸ್, ಟಾಟಾ ಹ್ಯಾರಿಯರ್ ಎಸ್‌ಯುವಿಗೆ ಪೈಪೋಟಿ ನೀಡುವ ನಿರೀಕ್ಷೆ ಇದೆ.

‘ಗ್ರ್ಯಾಂಡ್‌ ವಿಟಾಟಾ ಬಿಡುಗಡೆಯು ಸುಸ್ಥಿರ ಜಗತ್ತಿನೆಡೆ ಇರಿಸಿರುವ ಒಂದು ಹೆಜ್ಜೆ. ಈ ವಾಹನದ ಆರಂಭಿಕ ಬೆಲೆಯನ್ನು ನಾವು ₹ 10.45 ಲಕ್ಷ ಇರಿಸಿದ್ದೇವೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹಿಸಾಷಿ ಟಕೆಯುಚಿ ಹೇಳಿದ್ದಾರೆ. ಗ್ರ್ಯಾಂಡ್‌ ವಿಟಾರಾ ವಾಹನ ಬಯಸಿ 57 ಸಾವಿರಕ್ಕೂ ಹೆಚ್ಚು ಬುಕಿಂಗ್‌ ಬಂದಿವೆ.

ADVERTISEMENT

ಈ ವಾಹನವನ್ನು ಮಾರುತಿ ಸುಜುಕಿ ಕಂಪನಿಯು ತನ್ನ ನೆಕ್ಸಾ ಡೀಲರ್‌ಶಿಪ್‌ ಮೂಲಕ ಮಾರಾಟ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.