ADVERTISEMENT

ಒಂದೇ ವರ್ಷದಲ್ಲಿ 10 ಲಕ್ಷ ಎಲೆಕ್ಟ್ರಿಕ್ ಕಾರು ಮಾರಾಟ ಮಾಡಿದ ಟೆಸ್ಲಾ

ಏಜೆನ್ಸೀಸ್
Published 3 ಏಪ್ರಿಲ್ 2022, 10:26 IST
Last Updated 3 ಏಪ್ರಿಲ್ 2022, 10:26 IST
ಟೆಸ್ಲಾ ಎಲೆಕ್ಟ್ರಿಕ್ ಕಾರು
ಟೆಸ್ಲಾ ಎಲೆಕ್ಟ್ರಿಕ್ ಕಾರು   

ಎಲೊನ್ ಮಸ್ಕ್ ಒಡೆತನದ, ಅಮೆರಿಕ ಮೂಲದ ಎಲೆಕ್ಟ್ರಿಕ್ ಕಾರು ತಯಾರಿಕ ಕಂಪನಿ ಟೆಸ್ಲಾ, ಕಳೆದ ವರ್ಷ ದಾಖಲೆ ಸಂಖ್ಯೆಯ ಕಾರುಗಳನ್ನುಮಾರಾಟ ಮಾಡಿದೆ.

ಏಪ್ರಿಲ್ 2021ರಿಂದ ಮಾರ್ಚ್ 2022ರವರೆಗೆ 10.06 ಲಕ್ಷ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ಗ್ರಾಹಕರ ಕೈಸೇರಿವೆ. ಅದರಲ್ಲಿ ಮೊದಲ ತ್ರೈಮಾಸಿಕದಲ್ಲಿ 3,10,000 ಕಾರುಗಳುಡೆಲಿವರಿಯಾಗಿದ್ದು, ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯ ದಾಖಲೆಯಾಗಿದೆ.

ಈ ಸಂಖ್ಯೆ, ಇದೇ ಅವಧಿಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 67ರಷ್ಟು ಹೆಚ್ಚು ಎಂದು ವರದಿ ಹೇಳಿದೆ.

ADVERTISEMENT

ಕಳೆದ ಹಣಕಾಸು ವರ್ಷದಲ್ಲಿ ಕಾರು ಮಾರಾಟ ಕುರಿತಂತೆ ಟೆಸ್ಲಾ ಕಂಪನಿ ವರದಿ ಪ್ರಕಟಿಸಿದೆ.

ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಮತ್ತು ಚೀನಾದಲ್ಲಿದ್ದ ಕೋವಿಡ್ ನಿರ್ಬಂಧಗಳಿಂದಾಗಿ ಸಮಸ್ಯೆಯಾಗಿದ್ದರೂ, ಟೆಸ್ಲಾ ತಂಡ ಅತ್ಯಂತ ಯಶ‌ಸ್ವಿಯಾಗಿ ಕಾರು ಒದಗಿಸಿದೆ ಎಂದು ಕಂಪನಿ ಸಿಇಒ ಎಲೊನ್ ಮಸ್ಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.