ನವದೆಹಲಿ: ತ್ವರಿತ ಸೇವೆ ಪಡೆಯಲು ಇಚ್ಛಿಸುವ ಗ್ರಾಹಕರು ಕ್ಯಾಬ್ ಬುಕಿಂಗ್‌ಗೂ ಮೊದಲೇ ಹಣ ಪಾವತಿ ಮಾಡುವಂತೆ ಸೂಚಿಸುವ ಹೊಸ ಪ್ಯೂಚರ್ ಅನ್ನು ಉಬರ್ ಕಂಪನಿಯು ತನ್ನ ಆ್ಯಪ್‌ನಲ್ಲಿ ಅಭಿವೃದ್ಧಿಪಡಿಸಿದೆ. ಇದು ನ್ಯಾಯಸಮ್ಮತವಲ್ಲದ ಕ್ರಮ ಎಂದಿರುವ ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಉಬರ್‌ಗೆ ನೋಟಿಸ್ ನೀಡಿದೆ.
ಕ್ಯಾಬ್ ಬುಕಿಂಗ್‌ಗೂ ಮೊದಲೇ ಟಿಪ್ಸ್ ನೀಡುವಂತೆ ಗ್ರಾಹಕರಿಗೆ ಆ್ಯಪ್ ಸೂಚಿಸುತ್ತದೆ ಎಂದು ಹೇಳಲಾಗಿದೆ.
ತ್ವರಿತ ಸೇವೆಗೆ ಬಳಕೆದಾರರಿಂದ ಸೇವೆಗೂ ಮೊದಲೇ ಹಣ ಪಡೆಯುವುದು ಸರಿಯಾದ ಕ್ರಮವಲ್ಲ. ಈ ಕ್ರಮವು ಗ್ರಾಹಕರ ಮೇಲೆ ಒತ್ತಡ ಹೇರಿದಂತಾಗುತ್ತದೆ. ಅಲ್ಲದೆ, ನ್ಯಾಯಸಮ್ಮತವಲ್ಲದ ವ್ಯಾಪಾರ ಚಟುವಟಿಕೆಯಾಗಿದೆ. ಕಂಪನಿಯು ತನ್ನ ಸೇವೆಯಲ್ಲಿ ನ್ಯಾಯೋಚಿತ ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳಬೇಕಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು, ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಉಬರ್‌ನ ಈ ಧೋರಣೆ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರಕ್ಕೆ ಸಚಿವರು ನಿರ್ದೇಶನ ನೀಡಿದ್ದಾರೆ. ಹಾಗಾಗಿ, ಉಬರ್ ಕಂಪನಿಗೆ ವಿವರಣೆ ಕೋರಿ, ಪ್ರಾಧಿಕಾರವು ನೋಟಿಸ್ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.