ADVERTISEMENT

ಸೆಲೆಬ್ರಿಟಿಗಳ ರೀತಿ ನೀವೂ ಕಾಣಬೇಕೇ? ಕುಂದನ್‌ ಆಭರಣಗಳ ಆಯ್ಕೆ ಹೀಗೆ ಮಾಡಿ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2025, 8:00 IST
Last Updated 6 ಡಿಸೆಂಬರ್ 2025, 8:00 IST
   

ಇತ್ತೀಚಿನ ದಿನಗಳಲ್ಲಿ ಕುಂದನ್‌ ಜ್ಯುವೆಲ್ಲರಿಗಳದ್ದೇ ಕಾರುಬಾರು. ಸಿಂಪಲ್‌ ಹಾಗೂ ಮಾಡರ್ನ್‌, ರೇಷ್ಮೆ ಸೀರೆಗಳಿಗೆ ಹೇಳಿ ಮಾಡಿಸಿದಂತಿರುವ ಕುಂದನ್‌ ಆಭರಣಗಳು ನಿಮ್ಮ ಲುಕ್‌ಗೆ ಹೊಸ ರೂಪ ನೀಡುವುದಂತೂ ನಿಜ.

ಹಾಗಾದರೆ ಕುಂದನ್‌ ಆಭರಣಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು, ಯಾವ ಸೀರೆ ಅಥವಾ ಲೆಹೆಂಗಾಗೆ ಯಾವ ಕುಂದಾನ್‌ ಆಭರಣ ಒಪ್ಪುತ್ತದೆ ಎಂಬುವುದನ್ನು ತಿಳಿಯುವುದು ಮುಖ್ಯ.

ಮೊದಲು ನೀವು ಯಾವ ಕಾರ್ಯಕ್ರಮಕ್ಕೆ ಹೋಗುತ್ತೀರಿ ಎಂಬುವುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಮದುವೆ, ನಾಮಕರಣ, ಮೆಹಂದಿ ಅಥವಾ ಸಂಗೀತ ಕಾರ್ಯಕ್ರಮ, ಹಳದಿ, ಹುಟ್ಟುಹಬ್ಬದ ಸಮಾರಂಭ ಹೀಗೆ ಯಾವ ಕಾರ್ಯಕ್ರಮಕ್ಕೆ ನೀವು ಹೋಗುತ್ತೀರಿ ಎಂದು ನಿರ್ಧಾರಿಸಿದ ಮೇಲೆ ನಿಮ್ಮ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಸುಲಭವಾಗುತ್ತದೆ.

ನೀವು ಮದುವೆಗೆ ಹೋಗುವುದಾದರೆ, ಸೀರೆ ಅಥವಾ ಲೆಹೆಂಗಾಕ್ಕೆ ಸರಿ ಹೊಂದುವ ರೀತಿ ಲಾಂಗ್‌ ಕುಂದನ್‌ ಹಾರ ಹಾಕಿಕೊಳ್ಳಬಹುದು. ಸಿಂಪಲ್‌ ಸಮಾರಂಭಗಳಿಗೆ ಅಂದರೆ ಸಿಂಪಲ್‌ ನೆಕ್‌ ಪೀಸ್‌ ಹಾಕಿಕೊಳ್ಳುವುದು ಉತ್ತಮ.

ಪರಿಣಿತಿ ಚೋಪ್ರಾ

ಅದೇ ರೀತಿ ವಧು ತನ್ನ ಮದುವೆಯಲ್ಲಿ ಸೀರೆ ಅಥವಾ ಲೆಹೆಂಗಾ ತೊಡುವುದಾದರೆ ಕುಂದನ್‌ ಆಭರಣಗಳನ್ನು ತೊಡಬಹುದು. ಇದರಿಂದ ಆಕೆಯ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ. ಸಾಮಾನ್ಯವಾಗಿ ವಧು ಕೆಂಪು ಅಥವಾ ಗುಲಾಬಿ ಬಣ್ಣದ ಸೀರೆ ಮೊರೆ ಹೋಗುತ್ತಾರೆ. ಕೆಂಪು ಬಣ್ಣದ ಸೀರೆ ಅಥವಾ ಲೆಹೆಂಗಾಗಳಿಗೆ ಹಸಿರು ಬಣ್ಣದ ಕುಂದನ್‌ ಜ್ಯುವೆಲ್ಲರಿ ಆಯ್ಕೆ ಉತ್ತಮ. ನೀಲಿ ಬಣ್ಣದ ಉಡುಪುಗಳಿಗೂ ಹಸಿರು ಬಣ್ಣದ ಕುಂದನ್‌ ಆಭರಣ ಒಪ್ಪುತ್ತದೆ. ಸೆಲೆಬ್ರಿಟಿಗಳ ಸಹ ಇದೇ ಮಾದರಿಯಲ್ಲೇ ಕುಂದನ್‌ ಜ್ಯುವೆಲ್ಲರಿಗಳನ್ನು ಆಯ್ಕೆ ಮಾಡುತ್ತಾರೆ.

ಉದಾಹರಣೆ ನಟಿ ನಯನತಾರಾ ತಮ್ಮ ಮದುವೆಯಲ್ಲಿ ಕೆಂಪು ಬಣ್ಣದ ನೆಟ್ಟೆಡ್‌ ಸೀರೆಗೆ ಲಾಂಗ್‌ ಕುಂದನ್‌ ಹಾರವನ್ನು ಧರಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೆಂಡ್‌ ಆಗಿತ್ತು. ಹಾಗೆಯೇ ಬಾಲಿವುಡ್‌ ನಟಿಯರಾದ ಪರಿಣಿತಿ ಚೋಪ್ರಾ, ಅನುಷ್ಕಾ ಶರ್ಮ, ಆಲಿಯಾ ಭಟ್‌ ಕೂಡ ತಮ್ಮ ಮದುವೆ ಸಂಭ್ರಮದಲ್ಲಿ ಕುಂದನ್‌ ಆಭರಣಗಳನ್ನೇ ಧರಿಸಿದ್ದು ವಿಶೇಷ.

ನೀತಾ ಅಂಬಾನಿ

ನಯನತಾರಾ

ರಿಲಯನ್ಸ್‌ ಫೌಂಡೇಶನ್‌ ಸ್ಥಾಪಕಿ ನೀತಾ ಅಂಬಾನಿ ಸಹ ಹಲವು ಕಾರ್ಯಕ್ರಮಗಳಲ್ಲಿ ಸೀರೆಗೆ ಒಪ್ಪುವ ಕುಂದನ್‌ ಆಭರಣಗಳನ್ನು ಧರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.