ಮಣಿಕಾ ವಿಶ್ವಕರ್ಮ
ಜೈಪುರ: 2025ರ 'ಮಿಸ್ ಯೂನಿವರ್ಸ್ ಇಂಡಿಯಾ' ಕಿರೀಟಕ್ಕೆ ರಾಜಸ್ಥಾನದ ಮಣಿಕಾ ವಿಶ್ವಕರ್ಮ ಮುತ್ತಿಟ್ಟಿದ್ದಾರೆ.
ಮಣಿಕಾ ಅವರು ಥಾಯ್ಲೆಂಡ್‌ನಲ್ಲಿ ಪ್ರಸಕ್ತ ಸಾಲಿನಲ್ಲೇ ನಡೆಯಲಿರುವ 74ನೇ 'ಮಿಸ್ ಯೂನಿವರ್ಸ್' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
ಕಿರೀಟ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಮಣಿಕಾ, 'ಈ ಭಾವನೆ ನಿಜಕ್ಕೂ ಅದ್ಭುತವಾಗಿದೆ. ನನ್ನ ಪ್ರಯಾಣ ಅತ್ಯುತ್ತಮವಾಗಿತ್ತು. ನನ್ನ ಮಾರ್ಗದರ್ಶಕರು, ಶಿಕ್ಷಕರು, ಪೋಷಕರು, ಸ್ನೇಹಿತರು ಸೇರಿದಂತೆ ನನ್ನ ಕುಟುಂಬಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಭಾರತವನ್ನು ಅತ್ಯುತ್ತಮವಾಗಿ ಪ್ರತಿನಿಧಿಸಲು ಹಾಗೂ ಕಿರೀಟ ಮರಳಿ ತರಲು ನನ್ನಿಂದಾಗುವ ಎಲ್ಲವನ್ನು ಮಾಡಲಿದ್ದೇನೆ. ಅದುವೇ ನನ್ನ ಗುರಿಯಾಗಿದೆ' ಎಂದಿದ್ದಾರೆ.
'ಕಷ್ಟಗಳಿಗಿಂತ ನನ್ನ ಸಿದ್ಧತೆಯು ಮುಖ್ಯವೆನಿಸಿತ್ತು. ಗಂಗಾನಗರದಿಂದ ನನ್ನ ಪ್ರಯಾಣ ಆರಂಭವಾಯಿತು. ಬಳಿಕ ದೆಹಲಿಗೆ ಬಂದು ಸಿದ್ಧತೆಯನ್ನು ಆರಂಭಿಸಿದೆ. ನಮ್ಮಲ್ಲಿ ನಾವು ಆತ್ಮವಿಶ್ವಾಸ ಹಾಗೂ ಧೈರ್ಯವನ್ನು ಬೆಳೆಸಿಕೊಳ್ಳಲು ಪ್ರತಿಯೊಬ್ಬರೂ ಮಹತ್ವದ ಪಾತ್ರ ವಹಿಸಿದ್ದರು. ಎಲ್ಲರಿಗೂ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ' ಎಂದು ತಿಳಿಸಿದ್ದಾರೆ.
'ಇದೊಂದು ಸ್ಪರ್ಧೆ ಮಾತ್ರವಲ್ಲ. ನಮ್ಮ ವ್ಯಕ್ತಿಕ್ವವನ್ನು ಗುರುತಿಸುವ ವೇದಿಕೆ ಕೂಡಾ ಆಗಿದೆ. ಕಿರೀಟ ಒಂದು ವರ್ಷಕ್ಕೆ ಮಾತ್ರವಲ್ಲ. ಜೀವನ ಪರ್ಯಂತ ನಮ್ಮೊಂದಿಗೆ ಇರುತ್ತದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.