
ಸಾಮಾನ್ಯವಾಗಿ ಸುಂದರವಾಗಿ ಕಾಣಬೇಕೆಂಬುವುದು ಎಲ್ಲಾ ಯುವತಿಯರ ಆಸೆ. ಇನ್ನೂ ವ್ಯಾಲೆಂಟೈನ್ಸ್ ದಿನ ತಮ್ಮ ಪ್ರೀತಿ ಪಾತ್ರರ ಜತೆ ಕಾಲ ಕಳೆಯಬೇಕು, ವಿಶೇಷವಾಗಿ ಕಾಣಿಸಬೇಕು, ತಮ್ಮ ಪ್ರೀತಿಯನ್ನು ಹೇಳಿಕೊಳ್ಳಬೇಕೆಂಬುವುದು ಎಲ್ಲಾ ಯುವತಿಯರ ಕನಸು. ತಮ್ಮ ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸಬೇಕೆಂದು ತಯಾರಿ ನಡೆಸುವ ಯುವತಿಯರು, ಆ ದಿನದಂದು ಅಷ್ಟೇ ವಿಶಿಷ್ಟವಾಗಿ ಕಾಣಿಸಿಕೊಳ್ಳಬೇಕೆಂದು ಬಹಳ ದಿನಗಳಿಂದಲೇ ಕನಸು ಕಾಣುತ್ತಿರುತ್ತಾರೆ. ಹೀಗೆ ರೆಡಿಯಾದರೆ ಚೆನ್ನಾ, ಈ ರೀತಿ ಮೇಕಪ್ ಮಾಡಿಕೊಂಡರೆ ನನ್ನ ಹುಡುಗ ಅಥವಾ ಗಂಡನಿಂದ ಮೆಚ್ಚುಗೆ ಸಿಗುತ್ತೆ ಎಂದೆಲ್ಲಾ ಅಂದುಕೊಂಡಿರುತ್ತಾರೆ. ಅದಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್.. ಅದಕ್ಕೂ ಮೊದಲು, ‘ಪ್ರಜಾವಾಣಿ ಡಿಜಿಟಲ್’ ಆಯೋಜಿಸಿದ ರೀಲ್ಸ್ ಸ್ಪರ್ಧೆ ಬಗ್ಗೆ ತಿಳಿಯಿರಿ.
ವ್ಯಾಲೆಂಟೈನ್ಸ್ ಡೇ ಅಂಗವಾಗಿ ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಾರ್ಥ್ ಕ್ಯಾಂಪಸ್ ಸಹಯೋಗದೊಂದಿಗೆ ವಿಶೇಷ ರೀಲ್ಸ್ ಸ್ಪರ್ಧೆಯನ್ನು ‘ಪ್ರಜಾವಾಣಿ ಡಿಜಿಟಲ್’ ಆಯೋಜಿಸಿದೆ. ಪ್ರೀತಿ, ಸ್ನೇಹ, ನಂಬಿಕೆ, ಸಂಬಂಧಗಳ ಮೌಲ್ಯ ಹಾಗೂ ಜೀವನದ ಸೌಂದರ್ಯವನ್ನು ಪ್ರತಿಬಿಂಬಿಸುವ ಸೃಜನಾತ್ಮಕ ರೀಲ್ಸ್‌ಗಳನ್ನು ಆಹ್ವಾನಿಸಲಾಗುತ್ತಿದೆ.
ಸಿಂಪಲ್ ಲುಕ್‌ಗಳೇ ಈ ಜಮಾನದ ಟ್ರೆಂಡ್ ಆಗಿದೆ. ಒವರ್ ಮೇಕಪ್‌ಗಿಂತ ನ್ಯಾಚುರಲ್ ಲುಕ್‌ನತ್ತ ಈಗಿನ ಫ್ಯಾಷನ್ ಪ್ರಿಯರು ಒಲವು ಹೊಂದಿದ್ದಾರೆ. ಸೆಲೆಬ್ರೆಟಿಗಳು ಸಹ ಇದನ್ನೇ ಅನುರಿಸುತ್ತಾರೆ. ಹಾಗಾದರೆ ಯಾವೆಲ್ಲಾ ಟಿಪ್ಸ್ ನಿಮ್ಮ ವ್ಯಾಲೆಂಟೈನ್ಸ್ ದಿನವನ್ನು ಮತ್ತಷ್ಟು ವಿಶೇಷವಾಗಿಸಬಹುದು.
ಮೇಕಪ್‌ಗೆ ಮುನ್ನ ತ್ವಚ್ಛೆಯ ಆರೈಕೆ
ಮೇಕಪ್ ಮುನ್ನ ನಿಮ್ಮ ಫೇಸ್ ಅನ್ನು ಕ್ಲಿನ್‌ಅಪ್ ಮಾಡಿಕೊಳ್ಳುವುದು ಉತ್ತಮ. ಮನೆಯಲ್ಲಿಯೇ ಸಿಂಪಲ್ ಸ್ಕ್ರಬ್, ಟೋನರ್ ಬಳಸಿ ಇದಕ್ಕಿಂತ ಮುಂಚಿತವಾಗಿ ಫೇಶಿಯಲ್ ಮಾಡಿಕೊಂಡರೆ ನಿಮ್ಮ ಮುಖ ಸಾಫ್ಟ್ ಆಗುತ್ತೆ. ಇದರಿಂದ ಮೇಕಪ್ ಮಾಡಿಕೊಂಡಾಗ ನ್ಯಾಚುರಲ್ ಆಗಿ ಕಾಣುತ್ತದೆ. ಮೇಕಪ್ ಸಹ ಹೆಚ್ಚು ಕಾಲ ಉಳಿಯುತ್ತದೆ. ಡೇ ಟೈಮ್‌ನಲ್ಲಿ ಸನ್ ಸ್ಕ್ರೀನ್ ಬಳಸುವುದರಿಂದ ಟ್ಯಾನ್‌ನಿಂದ ವಿಮುಕ್ತಿ ಪಡೆಯಬಹುದು ಸ್ಕೀನ್ ಫ್ರಪ್ಟ್ ಸರಿಯಾಗಿ ಇಲ್ಲದಿದ್ದರೆ ಮೇಕಪ್ ಮುಜುಗರಕ್ಕೆ ಕಾರಣವಾಗಬಹುದು.
ಫೌಂಡೇಶನ್
ವ್ಯಾಲೆಂಟೈನ್ಸ್ ದಿನ ಅತಿಯಾದ ಫೌಂಡೇಶನ್ ಬಳಸದೇ ಕನ್ಸೀಲರ್ ಅಥವಾ ಬಿಬಿ ಕ್ರೀಮ್‌ಗಳ ಆಯ್ಕೆ ಉತ್ತಮ. ಏಕೆಂದರೆ ನಿಮ್ಮ ಫೇಸ್ ಮೇಲೆ ಅತಿಯಾದ ಕ್ರೀಮ್ ಬಳಕೆ ಸರಿಯಲ್ಲ. ನ್ಯಾಚುರಲ್ ಆಗಿ ಕಂಡರೆ ಚೆನ್ನಾ.
ಆಗಾಗಿ ಅತಿಯಾಗಿ ಫೌಂಡೇಶನ್ ನಿಮ್ಮ ಲುಕ್ ಅನ್ನು ಹಾಳು ಮಾಡಬಹುದು.
ಕಣ್ಣುಗಳಿಗೆ ಬಣ್ಣ
ಇನ್ನೂ ಕಣ್ಣಿನ ಮೇಕಪ್ ಬಹಳ ಮುಖ್ಯ ನಿಮ್ಮ ಕಣ್ಣುಗಳೇ ನಿಮ್ಮ ಭಾವನೆಯ ಪ್ರತೀಕ. ಹೀಗಾಗಿ ಕಣ್ಣಿನ ಮೇಕಪ್ ಮಾಡುವಾಗ ಅತಿಯಾದ ಕಾಳಜಿ ಅವಶ್ಯಕ. ಆಗಾಂತ ಮೇಕಪ್ ಮಾಡಿಕೊಳ್ಳದೇ ಇರುವುದು ಸರಿಯಲ್ಲ. ನೈಟ್ ಕಲರ್ ಹಾಗೂ ನಿಮ್ಮ ಡ್ರೆಸ್‌ಗೆ ಮ್ಯಾಚ್ ಆಗುವಂತೆ ಐ ಶ್ಯಾಡೋ ಬಳಸಿ, ಐಲೈನರ್, ಕಾಜಲ್ ಬಳಸಿ ಮೇಕಪ್ ಮಾಡಿಕೊಳ್ಳಿ. ಐ ಬ್ರೋಗಳಿಗೆ ಒಳ್ಳೆಯ ಆಕಾರ ನೀಡಿ ಇದರಿಂದ ನಿಮ್ಮ ಕಣ್ಣುಗಳ ಅಂದ ಇಮ್ಮಡಿಗೊಳ್ಳುತ್ತದೆ.
ತುಟಿ ಬಣ್ಣ
ನಿಮ್ಮ ಮೇಕಪ್‌ಗೆ ವ್ಯಾಖ್ಯಾನ ನೀಡುವುದೇ ತುಟಿ ಬಣ್ಣ. ಡ್ರೆಸ್‌ಗಳಿಗೆ ಸರಿ ಹೊಂದುವ ಕಲರ್ ಅನ್ನು ಆರಿಸಿಕೊಳ್ಳಿ ಸಿಂಪಲ್ ಮೇಕಪ್ ಆಗಿರುವುದರಿಂದ ಲೈಟ್ ಕಲರ್ ತುಟಿ ಬಣ್ಣ ಬಳಸಿದರೆ ಉತ್ತಮ. ಇನ್ನೂ ಈಗಂತೂ ಲಿಪ್ ಗ್ಯಾಸ್ ತುಂಬಾ ಟ್ರೆಂಡಿಂಗ್‌ನಲ್ಲಿದೆ. ವ್ಯಾಲೆಂಟೈನ್ಸ್ ಡೇ ಅಲ್ವಾ ಕೆಂಪು ಗುಲಾಬಿ ಬಣ್ಣನ್ನೂ ಬಳಸಬಹುದು ಒಂದೊಳ್ಳೆ ಲುಕ್ ನೀಡುವುದಂತು ಖಂಡಿತ
ಬ್ಲಷ್ ಮತ್ತು ಹೈಲೈಟರ್
ಮೇಕಪ್‌ನಲ್ಲಿ ನ್ಯಾಚುರಲ್ ಲುಕ್ ನೀಡುವುದೇ ಬ್ಲಷ್ ಮತ್ತು ಹೈಲೈಟರ್. ಬ್ಲಷ್‌ನಿಂದ ಕೆನ್ನೆ ಮೇಲೆ ಗುಲಾಬಿ ಬಣ್ಣ ಮೂಡುವುದರಿಂದ ನ್ಯಾಚುರಲ್ ಆಗಿ ಕಾಣುತ್ತದೆ. ಹೈಲೈಟರ್ ಶೈನಿಂಗ್ ರೀತಿ ನಿಮ್ಮ ಮುಖವನ್ನು ಪಳ-ಪಳ ಹೊಳೆಯುವಂತೆ ಮಾಡುತ್ತದೆ.
ಹೇರ್ ಸ್ಟೈಲ್ ಮತ್ತು ಡ್ರೆಸ್
ಇಷ್ಟೆಲ್ಲಾ ಮೇಕಪ್ ಆದ್ಮೇಲೆ ಒಂದೊಳ್ಳೆ ಉಡುಪಿನ ಆಯ್ಕೆಯೂ ಮುಖ್ಯ. ನಿಮ್ಮ ದೇಹದ ಆಕಾರಕ್ಕೆ, ಬಣ್ಣಕ್ಕೆ ಸರಿ ಹೊಂದುವ ಕಲರ್ ಹಾಗೂ ಬಟ್ಟೆಗಳನ್ನು ಧರಿಸುವುದು ಒಳಿತು.
ವ್ಯಾಲೆಂಟೈನ್ಸ್ ದಿನ ಕೆಂಪು ಗುಲಾಬಿ ಬಣ್ಣದ ಉಡುಪನ್ನು ಧರಿಸಿ ತಮ್ಮ ಪ್ರೀತಿಯನ್ನು ನಿವೇದನೆ ಮಾಡುತ್ತಾರೆ. ಆಗಾಂತ ರೆಡ್ ಡ್ರೆಸ್‌ಸೇ ಹಾಕಿಕೊಳ್ಳಬೇಕೆಂದಿಲ್ಲ. ನಿಮಗೆ ಕಂಫರ್ಟ್ ಎನ್ನಿಸುವ ಯಾವ ಉಡುಪನನ್ನಾದರೂ ಧರಿಸಬಹುದು ಅದು ಅಂತಿಮವಾಗಿ ನಿಮ್ಮ ಆಯ್ಕೆ. ಆದರೆ ಬಟ್ಟೆ ಯಾವುದೇ ಆಗಿರಲಿ ಭಾವನೆ ವ್ಯಕ್ತಪಡಿಸುವ ಮನಸ್ಸು ಮುಖ್ಯ.
ಸೀಲ್ಕಿ ಇರುವ ಕೂದಲು ಲೂಸ್ ಹೇರ್ ಬಿಟ್ಟರೆ ಚೆಂದ. ಕರ್ಲಿ ಹೇರ್ ಅಥವಾ ಒಣ ಕೂದಲಿನಂತಿರುವವರು ಬನ್ ಹಾಕಿಕೊಳ್ಳಬಹುದು. ಅಥವಾ ನಿಮ್ಮ ಮುಖದ ಛಾಯೆಗೆ ತಕ್ಕಂತೆ ಹೇರ್ ಸ್ಟೈಲ್ ಸೂಕ್ತ.
* ಬೇರೆಯವರು ಕಾಣಿಸಿಕೊಳ್ಳುವ ರೀತಿಯಲ್ಲಿಯೇ ನಾನು ಕಾಣಿಸಿಕೊಳ್ಳಬೇಕೆಂಬುವುದು ತಪ್ಪು. ಏಕೆಂದರೆ ಒಬ್ಬೊಬ್ಬರು ಒಂದು ಒಂದು ರೀತಿ ಇರುತ್ತಾರೆ. ಒಳ್ಳೆಯ ಮನಸ್ಸೇ ನಿಜವಾದ ಸೌಂದರ್ಯ.
* ನಮ್ಮ ನಗುವೇ ನಮಗೆ ಆಭರಣ, ಆತ್ಮ ವಿಶ್ವಾಸವೇ ಉತ್ತಮ ಮೇಕಪ್.. ಇವುಗಳನ್ನು ಮರಿಯಬೇಡಿ
* ನಿಮ್ಮ ಸ್ಟೈಲ್ ಅನ್ನು ನೀವೇ ಕ್ರಿಯೇಟ್ ಮಾಡಿಕೊಳ್ಳಿ. ಬೇರೆಯವರನ್ನು ಅನುಕರಿಸುವುದು ಬೇಡ
ಪ್ರೀತಿಗೆ ಭಾಷೆಗಳಿಲ್ಲ, ಬೇಲಿಗಳಿಲ್ಲ, ರೂಪಗಳಿಲ್ಲ ಅಂದ ಹಾಗೆ ಪ್ರೀತಿಗೆ ಸೌಂದರ್ಯವೂ ಮುಖ್ಯವಲ್ಲ. ನಿಜವಾದ ಪ್ರೀತಿ ಎಂದೂ ಸೌಂದರ್ಯಕ್ಕೆ ಸೋಲುವುದಿಲ್ಲ. ಎಲ್ಲೆಗಳನ್ನು ಮೀರಿದ ಪ್ರೀತಿಗೆ ಭಾವನೆಗಳೇ ಅಲಂಕಾರ. ಅಲ್ಲಿ ಯಾವುದೇ ಆಸೆಗಳಿಲ್ಲ; ಇರುವುದೊಂದೇ ನಿಷ್ಕಲ್ಮಷವಾದ ಪ್ರೀತಿ. ಪ್ರೀತಿಯನ್ನು ನಿಜವಾಗಿ ಅರಿತವನು ಎಂದೂ ಸೌಂದರ್ಯದ ದಾಸನಾಗಿರುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.