ದೇಶದಾದ್ಯಂತ ಬೇಸಿಗೆ ಬಿಸಿಲಿನ ಝಳ ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಹಲವರು ಉಲ್ಲಾಸದಾಯಕವಾಗಿ ದಾಹ ತಣಿಸಿಕೊಳ್ಳಲು ಪತಂಜಲಿಯ ́ಗುಲಾಬ್ ಶರಬತ್́ನತ್ತ ಮುಖಮಾಡುತ್ತಿದ್ದಾರೆ. ಗುಲಾಬಿ ಹೂವಿನ ಸಾರದಿಂದ ತಯಾರಿಸಿದ ಈ ಗಿಡಮೂಲಿಕೆಯ ಪೇಯ, ಸಕ್ಕರೆ ಹಾಗೂ ಕಾರ್ಬೊನೇಟೆಡ್ ಪಾನೀಯಗಳಿಗೆ ಪರ್ಯಾಯವಾಗಿ ಹೊರಹೊಮ್ಮುವ ಜೊತೆಗೆ, ಭಾರತದಲ್ಲಿ ಸದ್ದಿಲ್ಲದೆ ಪ್ರಧಾನ ಆಹಾರವಾಗುತ್ತಿದೆ. ತನ್ನ ಹಿತಕರವಾದ ಹೂವಿನ ಘಮ ಮತ್ತು ನೈಸರ್ಗಿಕ ಆಯುರ್ವೇದದ ಪ್ರಯೋಜನಗಳ ಕಾರಣಗಳಿಂದಾಗಿ ಈ ಪಾನೀಯವು, ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವ ಮತ್ತು ಸುವಾಸನೆಯನ್ನು ಇಷ್ಟಪಡುವ ಗ್ರಾಹಕರಲ್ಲಿ ಹೊಸ ಅಲೆ ಸೃಷ್ಟಿಸುತ್ತಿದೆ.
ಬೇಸಿಗೆಯಲ್ಲಿ ಆರೋಗ್ಯಕರ ಪಾನೀಯಗಳತ್ತ ಗ್ರಾಹಕರು ಗಮನ ಹರಿಸುತ್ತಿದ್ದಾರೆ. ಹಾಗಾಗಿ, ಈ ವರ್ಷ ಪತಂಜಲಿಯ ಗುಲಾಬ್ ಶರಬತ್‌ನ ಜನಪ್ರಿಯತೆ ಹೆಚ್ಚಾಗುತ್ತಿದೆ. ಪತಂಜಲಿಯ ನೈಸರ್ಗಿಕ ಮತ್ತು ಆಯುರ್ವೇದ ಪಾನೀಯ ಶ್ರೇಣಿಗೆ ಒಂದು ಐಕಾನಿಕ್ ಸೇರ್ಪಡೆಯಾಗಿರುವ ಗುಲಾಬ್ ಶರಬತ್, ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದಷ್ಟೇ ಅಲ್ಲದೆ, ಸೂಪರ್‌ಮಾರ್ಕೆಟ್‌ಗಳಲ್ಲಿ ಕಾರ್ಬೊನೇಟೆಡ್ ಉತ್ಪನ್ನಗಳಿಗೆ ಪಾರ್ಯಾಯವಾಗಿಯೂ ಕಾಣಿಸಿಕೊಳ್ಳುತ್ತಿದೆ.
ಎರಡು ವರ್ಷಗಳ ಹಿಂದೆ ಬೇರೆ ಪಾನೀಯಗಳ ಬದಲು ಗುಲಾಬ್ ಶರಬತ್ ಸೇವಿಸಲು ಆರಂಭಿಸಿದ ಮತ್ತು ಅಂದಿನಿಂದ ತಿರುಗಿ ನೋಡದ ಪುಣೆಯ ನಿಷ್ಠಾವಂತ ಗ್ರಾಹಕರೊಬ್ಬರು, ʼಇದು ಸಾಧಾರಣ ಪಾನೀಯಕ್ಕಿಂತ ಒಂದು ಕೈ ಮೇಲು. ಪ್ರಶಾಂತ ಮತ್ತು ತಣ್ಣನೆಯ ಅನುಭವವನ್ನು ನೀಡುತ್ತದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಾಟಲಿಯಲ್ಲಿ ಏನಿದೆ?
ಗುಲಾಬಿ ಶರಬತ್ ಬಾಟಲಿಯಲ್ಲಿ ಸರಳವಾದ ಶುದ್ಧ ಪದಾರ್ಥಗಳ ಪಟ್ಟಿ ನೀಡಲಾಗಿದೆ. ಪಾನೀಯ ತಯಾರಿಕೆಗೆ ಬಳಸಿದ ಪರಿಶುದ್ಧ ಗುಲಾಬಿ ಸಾರ, ನೀರು ಮತ್ತು ನೈಸರ್ಗಿಕ ಸಿಹಿಕಾರಕಗಳನ್ನು ಉಲ್ಲೇಖಿಸಲಾಗಿದೆ. ಈ ಉತ್ಪನ್ನ ತಯಾರಿಕೆಗೆ ಯಾವುದೇ ಸಂಶ್ಲೇಷಿತ ಬಣ್ಣ ಅಥವಾ ಆಹಾರ ಕೆಡದಂತೆ ನೋಡಿಕೊಳ್ಳಲು ಗಡಸು ಪದಾರ್ಥಗಳನ್ನು ಬಳಸಿಲ್ಲ. ಇದು ಗುಲಾಬಿಯ ಸೌಮ್ಯ ಸುವಾಸನೆ ಹಾಗೂ ನಿಮ್ಮ ಸಕ್ಕರೆ ಮಟ್ಟವನ್ನು ಮೀರದ ಲಘು ಸಿಹಿ ಅಂಶದ ಮಿಶ್ರಣವಾಗಿದೆ.
ಆಯುರ್ವೇದ ಪದ್ಧತಿಗಳಲ್ಲಿ ಜನಪ್ರಿಯ ಅಂಶ ಮತ್ತು ತಂಪು ಪಾನೀಯದ ಮೂಲ ಘಟಕಾಂಶವಾಗಿರುವ ಗುಲಾಬಿ, ಉರಿಯೂತ ನಿವಾರಣೆ ಮತ್ತು ಜೀರ್ಣಕ್ರಿಯೆಗೆ ಸಹಕಾರಿಯಾದ ತನ್ನ ವಿಶಿಷ್ಟ ಗುಣಲಕ್ಷಣಗಳಿಗೆ ಹೆಸರುವಾಸಿ. ದೇಹದ ಒಳಗಿನಿಂದಲೇ ಶಮನಕಾರಿಯಾಗಿ ಕೆಲಸ ಮಾಡುವ ಮೂಲಕ, ಶಾಖದಿಂದ ಉಂಟಾಗುವ ಆಯಾಸವನ್ನು ನಿಯಂತ್ರಿಸಿ, ತಣ್ಣನೆಯ ಪರಿಹಾರ ನೀಡುತ್ತದೆ. ಹಾಗೆಯೇ, ಆರ್ದ್ರತೆ ಹೆಚ್ಚಿಸಲು ನೆರವಾಗುತ್ತದೆ. ಇವು, ಭಾರತದಲ್ಲಿ ಸುಡು ಬೇಸಿಗೆಯಿಂದ ಪಾರಾಗಲು ಅತ್ಯಗತ್ಯ.
ನೀವು ಇದನ್ನು ತಣ್ಣನೆಯ ನೀರಿನಲ್ಲಿ ನಿಂಬೆ ರಸದೊಂದಿಗೆ ಬೆರೆಸಿ ಸೇವಿಸಲು ಬಯಸುತ್ತೀರೋ, ಐಸ್ ಜೊತೆ ಸೇರಿಸುತ್ತೀರೋ ಅಥವಾ ಮಿಲ್ಕ್‌ಶೇಕ್ ಜೊತೆ ಸೇರಿಸಿ ಕುಡಿಯುತ್ತೀರೋ – ಹೇಗೆಬೇಕಾದರೂ ಬಳಸಬಹುದಾದ ಬಹುಮುಖ ಉಪಯೋಗವು ಈ ಶರಬತ್‌ನ ಮೋಡಿಗೆ ಮತ್ತಷ್ಟು ಮೆರಗು ನೀಡುತ್ತದೆ.
ಸಂಪ್ರದಾಯಕ್ಕೆ ಮರಳಲು ಪತಂಜಲಿ ಮಾರ್ಗ
ಹವಾಮಾನದಂತೆಯೇ ವೇಗವಾಗಿ ಆರೋಗ್ಯ ಪ್ರವೃತ್ತಿಗಳೂ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ, ಪತಂಜಲಿಯು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ ತನ್ನ ವ್ಯಾಪಕ ಶ್ರೇಣಿಯ ಆಯುರ್ವೇದ ಉತ್ಪನ್ನಗಳೊಂದಿಗೆ ಶಾಶ್ವತ ಆರೋಗ್ಯ ಪರಿಹಾರಗಳಿಗೆ ಬದ್ಧವಾಗಿ ದೃಢವಾಗಿ ನಿಂತಿದೆ. ಈ ಬ್ರ್ಯಾಂಡ್ ತನ್ನ ಉತ್ಪನ್ನಗಳ ಸೂತ್ರೀಕರಣಕ್ಕೆ ಪ್ರಾಚೀನ ಭಾರತೀಯ ಗಿಡಮೂಲಿಕೆಗಳು ಮತ್ತು ನೈಸರ್ಗಿಕ ಪರಿಹಾರಗಳನ್ನೇ ಅವಲಂಬಿಸಿದೆ. ಅದೇರೀತಿ, ಪ್ರಕೃತಿಯು ಅತ್ಯುತ್ತಮ ಪರಿಹಾರಗಳನ್ನು ಹೊಂದಿದೆ ಎಂಬುದನ್ನು ಗುಲಾಬ್ ಶರಬತ್ ನೆನಪಿಗೆ ತರುತ್ತದೆ.
ಭಾರತದ ಉತ್ತರ ಹಾಗೂ ಮಧ್ಯ ಭಾಗದಲ್ಲಿ ಹೆಚ್ಚುತ್ತಿರುವ ಶಾಖ ಪರಿಸ್ಥಿತಿ ಹಿನ್ನೆಲೆಯಲ್ಲಿ, ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ತನ್ನ ಗಿಡಮೂಲಿಕೆ ಪಾನೀಯಗಳ ಉತ್ಪಾದನೆ ಮತ್ತು ಲಭ್ಯತೆಯನ್ನು ಹೆಚ್ಚಿಸಿದೆ.
ಗ್ರಾಹಕರು ಇದೀಗ ಪತಂಜಲಿ ಮಳಿಗೆಗಳು, ಅಕ್ಕಪಕ್ಕದ ಚಿಲ್ಲರೆ ವ್ಯಾಪಾರಿಗಳು ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ಅರ್ಧ ಹಾಗೂ ಒಂದು ಲೀಟರ್ ಆಯ್ಕೆಗಳಲ್ಲಿ ಗುಲಾಬ್ ಶರಬತ್ ಖರೀದಿಸಬಹುದು.
ಉಲ್ಲಾಸಕ್ಕಿಂತ ಮಿಗಿಲು
ಎಲ್ಲ ತಲೆಮಾರಿನವರನ್ನೂ ಆಕರ್ಷಿಸುವ ಸಾಮರ್ಥ್ಯವು ಗುಲಾಬ್ ಶರಬತ್ ಅನ್ನು ವಿಶಿಷ್ಠವಾಗಿಸಿದೆ. ಬಿರು ಬಿಸಿಲಿನಿಂದ ಪಾರಾಗಲು ಅಗತ್ಯವಾದ ಸಂವೇದನಾಶೀಲ ಮದ್ದಿನಂತಿರುವ ಈ ಪಾನೀಯವನ್ನು ಆಯುರ್ವೇದದ ಪದ್ದತಿಗಳಿಂದ ತಯಾರಾಗಿರುವ ಕಾರಣಕ್ಕೆ ಹಿರಿಯರು ಮೆಚ್ಚಿದರೆ, ಇದರ ಸೌಂದರ್ಯವರ್ಧನೆ, ಸುಗಂಧವನ್ನು ಕಿರಿಯರು ಇಷ್ಟಪಡುತ್ತಾರೆ.
ಆರೋಗ್ಯದ ಕಡೆಗೆ ಹೆಚ್ಚು ಮುತುವರ್ಜಿ ವಹಿಸುವವರಿಗೆ ಇದು, ಯಾವುದೇ ದೋಷಗಳಲ್ಲಿದ ಆಹ್ಲಾದಕರ ಉತ್ಪನ್ನ. ಅಷ್ಟಲ್ಲದೆ, ಸಸ್ಯಾಹಾರಿಯೂ, ಆಹಾರ ಕೆಡದಿರಲು ಬಳಸುವ ಪದಾರ್ಥಗಳಿಂದ ಮುಕ್ತವೂ ಮತ್ತು ಕಟ್ಟುನಿಟ್ಟಾದ ಗುಣಮಟ್ಟದ ಮಾರ್ಗಸೂಚಿಗಳ ಅಡಿಯಲ್ಲಿ ತಯಾರಿಸಲ್ಪಟ್ಟಿರುವುದೂ ಆಗಿರುವುದರಿಂದ ಇದು (ಗುಲಾಬ್ ಶರಬತ್) ಈ ವರ್ಷ ಭಾರತದ ಎಲ್ಲರ ಮೆನಗಳಿಗೂ ಸೂಕ್ತವಾದ ಬೇಸಿಗೆ ಪಾನೀಯವಾಗಿದೆ.
ಹಾಗಾಗಿ, ನೀವು ಬೇಸಿಗೆಯನ್ನು ತಣಿಸಲು ನಿಮ್ಮ ಫ್ರಿಡ್ಜ್ ತುಂಬಿಸುತ್ತಿದ್ದರೆ, ಸಿಂಥೆಟಿಕ್ ಪದಾರ್ಥಗಳನ್ನು ಬಿಟ್ಟು ಸಮಯೋಚಿತ ಉತ್ಪನ್ನಗಳ ಕಡೆಗೆ ಮುಖಮಾಡಿ. ಪತಂಜಲಿಯ ಗುಲಾಬ್ ಶರಬತ್ ಸರಳವಾದ, ಗುಲಾಬಿ ಸಾರದ ಪೇಯವಾಗಿದ್ದು, ಬೇಸಿಗೆ ಸಮಯದಲ್ಲಿ ಇದನ್ನು ಆಯ್ಕೆ ಮಾಡಿದ್ದಕ್ಕಾಗಿ ದೇಹವೇ ನಿಮಗೆ ಧನ್ಯವಾದ ಹೇಳಲಿದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.